ಬೆಳಗಿನ ತಿಂಡಿಗೆ ಆರೋಗ್ಯಕರವಾದ ರಾಗಿ ರೊಟ್ಟಿ ಮಾಡಿ, ಇಲ್ಲಿದೆ ಸುಲಭ ಪಾಕವಿಧಾನ

ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಮತ್ತು ಫೈಬರ್ ಅಧಿಕವಾಗಿದೆ ಈ ರಾಗಿ ರೊಟ್ಟಿಯನ್ನು ತಯಾರಿಸುವುದು ಸುಲಭ ಜೊತೆಗೆ ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಮಧ್ಯ ಮಧ್ಯದಲ್ಲಿ ಕುರುಕಲು ತಿಂಡಿ ತಿನ್ನುವುದನ್ನು ತಪ್ಪಿಸಬಹುದಾಗಿದೆ ಜೊತೆಗೆ ತೂಕ ನಿರ್ವಹಣೆಗೂ ಸಹಕಾರಿಯಾಗಿದೆ.

ಬೆಳಗಿನ ತಿಂಡಿಗೆ ಆರೋಗ್ಯಕರವಾದ ರಾಗಿ ರೊಟ್ಟಿ ಮಾಡಿ, ಇಲ್ಲಿದೆ ಸುಲಭ ಪಾಕವಿಧಾನ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 26, 2023 | 9:46 AM

ಬೆಳಗಿನ ತಿಂಡಿ ಸುಲಭವೂ ಮತ್ತು ಆರೋಗ್ಯಕರವೂ ಆಗಿರಬೇಕು ಎಂದು ಬಯಸುವವರು ಈ ತಿಂಡಿ ಮಾಡಿಕೊಳ್ಳಬಹುದು. ರಾಗಿಯಿಂದ ಮಾಡಿದ ಎಲ್ಲಾ ಆಹಾರಗಳು ದೇಹಕ್ಕೆ ಎಷ್ಟು ಒಳ್ಳೆಯದು ಎಂಬುದು ನಿಮಗೆ ತಿಳಿದಿರಬಹುದು. ಆದರೆ ಮಕ್ಕಳಿಗೂ ಇಷ್ಟವಾಗುವಂತೆ ಮತ್ತು ಬಾಯಿಗೂ ರುಚಿಕೊಡಲು, ರಾಗಿಯ ಜೊತೆ ಇನ್ನೊಂದಿಷ್ಟು ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ರಾಗಿ ರೊಟ್ಟಿ ಅಥವಾ ಫಿಂಗರ್ ಮಿಲ್ಲೆಟ್ ರೊಟ್ಟಿ ಮಾಡುವ ಸರಳ ವಿಧಾನ ಇಲ್ಲಿದೆ. ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ ಮತ್ತು ಫೈಬರ್ ಅಧಿಕವಾಗಿದೆ ಈ ರಾಗಿ ರೊಟ್ಟಿಯನ್ನು ತಯಾರಿಸುವುದು ಸುಲಭ ಜೊತೆಗೆ ಇದು ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಮಧ್ಯ ಮಧ್ಯದಲ್ಲಿ ಕುರುಕಲು ತಿಂಡಿ ತಿನ್ನುವುದನ್ನು ತಪ್ಪಿಸಬಹುದಾಗಿದೆ ಜೊತೆಗೆ ತೂಕ ನಿರ್ವಹಣೆಗೂ ಸಹಕಾರಿಯಾಗಿದೆ.

ರಾಗಿ ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು

▪️ರಾಗಿ ಹಿಟ್ಟು – 1 ಕಪ್ ▪️ಸೌತೆಕಾಯಿ – 1/2 ಕಪ್ ▪️ಕ್ಯಾರೆಟ್ – 1/2 ಕಪ್ ▪️ತೆಂಗಿನಕಾಯಿ – 1/4 ಕಪ್ ▪️ಶುಂಠಿ – 1 ಇಂಚು ▪️ಹೆಚ್ಚಿದ ಮೆಣಸಿನ ಕಾಯಿ – 1 ಸಣ್ಣಗೆ ಹೆಚ್ಚಿದ ▪️ಜೀರಿಗೆ – 1/2 ಚಮಚ ▪️ಸಬ್ಬಸಿಗೆ ಸೊಪ್ಪು ▪️ಸಣ್ಣಗೆ ಹೆಚ್ಚಿದ ಈರುಳ್ಳಿ – 1 ▪️ಉಪ್ಪು ರುಚಿಗೆ ತಕ್ಕಷ್ಟು ▪️ನೀರು – 1/2 ಕಪ್

ವಿಡಿಯೋ ಇಲ್ಲಿದೆ ನೋಡಿ:

ಮೇಲೆ ತಿಳಿಸಿರುವ ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್​​​ನಲ್ಲಿ ಸೇರಿಸಿಕೊಂಡು ಎಲ್ಲವನ್ನು ಮಿಶ್ರಣ ಮಾಡಿ ಹಿಟ್ಟನ್ನು ತಯಾರಿ ಮಾಡಿಕೊಳ್ಳಿ. ಇದನ್ನು ಒಂದು ಐದು ನಿಮಿಷ ಬಿಟ್ಟು ಬಳಿಕ ಆ ಹಿಟ್ಟನ್ನು ಬಾಳೆ ಎಳೆಯ ಮೇಲೆ ಹಾಕಿ ತಟ್ಟುತ್ತಾ ತೆಳುವಾದ ರೊಟ್ಟಿ ಮಾಡಿಕೊಳ್ಳಿ ಬಳಿಕ ಇದನ್ನು ತವಾ ಮೇಲೆ ಹಾಕಿ ಬಿಸಿ ಮಾಡಿಕೊಂಡು ಎರಡೂ ಬದಿಗಳಿಗೆ ಎಣ್ಣೆ ಅಥವಾ ತುಪ್ಪ ಹಾಕಿ ಬೇಯಿಸಿಕೊಂಡರೆ ರುಚಿಯಾದ ರಾಗಿ ರೊಟ್ಟಿ ಸವಿಯಲು ಸಿದ್ದವಾಗುತ್ತದೆ. ಇದನ್ನು ಚಟ್ನಿ ಮತ್ತು ಪಲ್ಯದೊಂದಿಗೆ ಸೇರಿಸಿಕೊಂಡು ತಿನ್ನಬಹುದು.

ಇದನ್ನೂ ಓದಿ:ಚಳಿಗಾಲದಲ್ಲಿ ಕಾಡುವ ಗಂಟಲು ನೋವು, ಕೆಮ್ಮಿನಿಂದ ಮುಕ್ತಿ ಪಡೆಯಲು ಮನೆಯಲ್ಲೇ ಈ ಸೂಪರ್​​​​ ಸೂಪ್​ ತಯಾರಿಸಿ

ಇಷ್ಟು ಸರಳವಾಗಿ ರಾಗಿ ರೊಟ್ಟಿ ಮಾಡುವ ವಿಧಾನವನ್ನು chaispicekitchen ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಈ ವಿಡಿಯೋಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ರೆಸಿಪಿ ಹಂಚಿಕೊಂಡಿದ್ದಕ್ಕೆ ಅನೇಕರು ಧನ್ಯವಾದ ತಿಳಿಸಿದ್ದಾರೆ. ಇನ್ನು ಕೆಲವರು ನಮ್ಮ ಮಗುವಿನ ಟಿಫನ್ ಗೆ ಹಾಕುವುದಕ್ಕೆ ಒಂದು ಒಳ್ಳೆಯ ಪಾಕವಿಧಾನ ಇದು ಎಂದಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:20 pm, Fri, 8 December 23