ಮದುವೆಯಾಗುವುದರಿಂದ ನಿಮ್ಮ ಬಿಪಿ ಹೆಚ್ಚಾಗಬಹುದು; ಇದು ತಮಾಷೆಯಂತೂ ಅಲ್ಲ!

ಚೀನಾ, ಇಂಗ್ಲೆಂಡ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಸಲಾದ ಸಂಶೋಧನೆಯು, ಒಬ್ಬ ಸಂಗಾತಿಯು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ ಅವರ ಸಂಗಾತಿ ಕೂಡ ಅಧಿಕ ರಕ್ತದೊತ್ತಡವನ್ನು ಹೊಂದಿರುವ ಸಾಧ್ಯತೆಯು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ.

ಮದುವೆಯಾಗುವುದರಿಂದ ನಿಮ್ಮ ಬಿಪಿ ಹೆಚ್ಚಾಗಬಹುದು; ಇದು ತಮಾಷೆಯಂತೂ ಅಲ್ಲ!
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on:Dec 08, 2023 | 4:58 PM

ಮದುವೆಯೆಂದರೆ ಎಲ್ಲರಿಗೂ ಮಧುರವಾದ ಕಲ್ಪನೆಗಳಿರುತ್ತವೆ. ಮದುವೆಯಾದ ನಂತರ ನಮ್ಮ ಸಂಗಾತಿಯ ಜೊತೆ ಹಾಗಿರಬೇಕು, ಹೀಗಿರಬೇಕು, ಎಲ್ಲೆಲ್ಲಿ ಸುತ್ತಾಡಬೇಕು ಎಂಬಿತ್ಯಾದಿ ಕನಸುಗಳಿರುತ್ತವೆ. ಆದರೆ, ಮದುವೆಯಾದ ಬಳಿಕ ಬಹುತೇಕರಿಗೆ ನಿರಾಸೆಯೇ ಜಾಸ್ತಿ. ನಾವು ಅಂದುಕೊಂಡಂತೆ ಇದು ಸುಖಸಾಗರವಲ್ಲ; ಜವಾಬ್ದಾರಿಗಳ ಆಗರ ಎಂದು ಗೊತ್ತಾದ ನಂತರ ಅವರ ವರ್ತನೆಗಳಲ್ಲೂ ಬದಲಾವಣೆಗಳು ಆಗುವುದು ಸಹಜ. ಹೀಗಾಗಿಯೇ ದಂಪತಿಯ ನಡುವೆ ಯಾವಾಗಲೂ “ಮದುವೆಗಿಂತ ಮುಂದೆ ನೀನು ಹೀಗಿರಲಿಲ್ಲ” ಎಂಬ ದೂರು ಸಾಮಾನ್ಯ.

ಮದುವೆಯಾದ ನಂತರ ಆರೋಗ್ಯದಲ್ಲಿ ಏರುಪೇರಾಗುತ್ತಂತೆ ಗೊತ್ತಾ? ಇದು ತಮಾಷೆಯಲ್ಲ. ಇತ್ತೀಚಿನ ಅಧ್ಯಯನದ ಪ್ರಕಾರ, ಮಧ್ಯವಯಸ್ಕ ಮತ್ತು ವಯಸ್ಸಾದವರಲ್ಲಿ ಅರ್ಧದಷ್ಟು ಅಧಿಕ ರಕ್ತದೊತ್ತಡ (ಹೈ ಬಿಪಿ) ಪ್ರಕರಣಗಳು ಕಂಡುಬರುತ್ತಿವೆ. ವಿಚಿತ್ರವೆಂದರೆ ಚೀನಾ, ಇಂಗ್ಲೆಂಡ್, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಸಲಾದ ಸಂಶೋಧನೆಯು, ಒಬ್ಬ ಸಂಗಾತಿಯು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ ಅವರ ಸಂಗಾತಿ ಕೂಡ ಅಧಿಕ ರಕ್ತದೊತ್ತಡವನ್ನು ಹೊಂದಿರುವ ಸಾಧ್ಯತೆಯು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಬ್ರೇಕ್​ಅಪ್​ಗಿಂತ ಕೆಟ್ಟದ್ದು ಒಲ್ಲದ ಸಂಗಾತಿಯೊಂದಿಗೆ ಬದುಕುವುದು, ಸಂಬಂಧದಿಂದ ಹೊರಬರುವುದು ಹೇಗೆ?

ಜರ್ನಲ್ ಆಫ್ ದಿ ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ನಾಲ್ಕು ದೇಶಗಳಲ್ಲಿ 30,000ಕ್ಕೂ ಹೆಚ್ಚು ಜೋಡಿಗಳ ಡೇಟಾವನ್ನು ಪರಿಶೀಲಿಸಿದೆ. ಅಧಿಕ ರಕ್ತದೊತ್ತಡ ಹೊಂದಿರುವ ಪುರುಷರನ್ನು ವಿವಾಹವಾದ ಮಹಿಳೆಯರು ಕೂಡ ಅಧಿಕ ರಕ್ತದೊತ್ತಡವನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಹಾಗೇ ಬಿಪಿ ಇರುವ ಪತ್ನಿಯರನ್ನು ಹೊಂದಿರುವ ಪುರುಷರು ಅಧಿಕ ರಕ್ತದೊತ್ತಡವನ್ನು ಹೊಂದುವ ಸಾಧ್ಯತೆಯಿದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.

ಕನ್ಕಾರ್ಡೆಂಟ್ ಅಧಿಕ ರಕ್ತದೊತ್ತಡದ ಹರಡುವಿಕೆಯು ಗಮನಾರ್ಹವಾಗಿ ಹೆಚ್ಚಾಗಿದೆ, ಇಂಗ್ಲೆಂಡ್‌ನಲ್ಲಿ ಸುಮಾರು 47.1% ದಂಪತಿಗಳು, ಯುನೈಟೆಡ್ ಸ್ಟೇಟ್ಸ್‌ನಲ್ಲಿ 37.9%, ಚೀನಾದಲ್ಲಿ 20.8% ಮತ್ತು ಭಾರತದಲ್ಲಿ 19.8% ದಂಪತಿಗಳಲ್ಲಿ ಈ ರೀತಿ ಅಧಿಕ ರಕ್ತದೊತ್ತಡವಿದೆ.

ಇದನ್ನೂ ಓದಿ: ಹೆಂಗಸರಿಗೆ ತಮ್ಮ ಸಂಗಾತಿಯಲ್ಲಿ ಇಷ್ಟವಾಗದ 4 ಸಂಗತಿಗಳಿವು

ಚೀನಾ ಮತ್ತು ಭಾರತಕ್ಕಿಂತ ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಅಧಿಕ ರಕ್ತದೊತ್ತಡವು ಹೆಚ್ಚು ಸಾಮಾನ್ಯವಾಗಿದೆ. ಆದರೆ, ದಂಪತಿಗಳ ರಕ್ತದೊತ್ತಡದ ಸ್ಥಿತಿಯ ನಡುವಿನ ಸಂಬಂಧವು ಯುಎಸ್ ಮತ್ತು ಇಂಗ್ಲೆಂಡ್‌ಗಿಂತ ಚೀನಾ ಮತ್ತು ಭಾರತದಲ್ಲಿ ಪ್ರಬಲವಾಗಿದೆ ಎಂದು ಕೊಲಂಬಿಯಾ ಯೂನಿವರ್ಸಿಟಿ ಮೇಲ್‌ಮ್ಯಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿರುವ ಅಧ್ಯಯನದ ಲೇಖಕ ಪೀಯಿ ಲು ಹೇಳಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Fri, 8 December 23

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ