ಅಮರನಾಥ ಮೇಘ ಸ್ಫೋಟ ವೇಳೆ ರಕ್ಷಣಾ ಕಾರ್ಯಗಳಿಗೆ ನೆರವಾದ ಸೇನಾಪಡೆಯ ಶ್ವಾನಕ್ಕೆ ಪ್ರಶಂಸೆ

ಸೇನಾಪಡೆಯ ಹೋಳಿ ಎಂದು ಹೆಸರಿನ ನಾಯಿ ಜಮ್ಮು ಕಾಶ್ಮೀರದ ಅಮರನಾಥದಲ್ಲಿ ಇತ್ತೀಚೆಗೆ ಮೇಘ ಸ್ಫೋಟ ಸಂಭವಿಸಿದಾಗ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿತ್ತು

ಅಮರನಾಥ ಮೇಘ ಸ್ಫೋಟ ವೇಳೆ ರಕ್ಷಣಾ ಕಾರ್ಯಗಳಿಗೆ ನೆರವಾದ ಸೇನಾಪಡೆಯ ಶ್ವಾನಕ್ಕೆ ಪ್ರಶಂಸೆ
ಶ್ವಾನ ಹೋಳಿ
Edited By:

Updated on: Jul 25, 2022 | 3:55 PM

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಮರನಾಥ ಗುಹೆಯಲ್ಲಿ (Amarnath cave)  ಮೇಘ ಸ್ಫೋಟ (cloud burst) ಸಂಭವಿಸಿದಾಗ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ನೆರವಾದ ಸೇನಾಪಡೆಯ ನಾಯಿ ‘ಹೋಳಿ’ ಪ್ರಶಂಸೆಗೆ ಪಾತ್ರವಾಗಿದೆ. ಉತ್ತರ ಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಹೋಳಿ ಮಾಡಿದ ಕಾರ್ಯವನ್ನು ಶ್ಲಾಘಿಸಿ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಸೇನಾಪಡೆಯ ಹೋಳಿ ಎಂದು ಹೆಸರಿನ ನಾಯಿ ಜಮ್ಮು ಕಾಶ್ಮೀರದ ಅಮರನಾಥದಲ್ಲಿ ಇತ್ತೀಚೆಗೆ ಮೇಘ ಸ್ಫೋಟ ಸಂಭವಿಸಿದಾಗ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿತ್ತು ಎಂದು ಉತ್ತರ ಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಕಲ್ ಉಪೇಂದ್ರ ದ್ವಿವೇದಿ ಟ್ವೀಟ್ ಮಾಡಿದ್ದಾರೆ. ಒಂದು ದಿನದ ಹಿಂದೆ ಮಾಡಿದ ಈ ಟ್ವೀಟ್​​ಗೆ 14,200 ಕ್ಕಿಂತಲೂ ಹೆಚ್ಚು ಲೈಕ್ ಸಿಕ್ಕಿದೆ. 1,200 ಬಾರಿ ಇದು ರೀಟ್ವೀಟ್ ಆಗಿದೆ.


ಈ ಟ್ವೀಟ್​​ಗೆ ಹಲವರು Awwww ಎಂದು ಟ್ವೀಟ್ ಮಾಡಿದ್ದು, ಅಧಿಕಾರಿಯನ್ನು ಅದು ನೋಡುತ್ತಿರುವುದು ನೋಡಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಮನುಷ್ಯನ ನಿಷ್ಠಾವಂತ ಗೆಳೆಯ ಎಂದು ಮತ್ತೊಬ್ಬರು ಕಾಮೆಂಟಿಸಿದ್ದರೆ, ಧೈರ್ಯ ಶಾಲಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Published On - 3:11 pm, Mon, 25 July 22