ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಅಗಲಿ ವಾರಗಳೇ ಕಳೆದಿದೆ. ಆದರೂ ಅವರ ನೆನಪು, ಧ್ವನಿ ಹಸಿರಾಗಿಯೇ ಇರುತ್ತದೆ. ಇದೀಗ ಲತಾ ಮಂಗೇಶ್ಕರ್ ಅವರಿಗೆ ನಮನ ಸಲ್ಲಿಸಲು ಮೆಹಂದಿ (Mehandi) ಆರ್ಟಿಸ್ಟ್ ಒಬ್ಬರು ಮೆಹಂದಿಯಲ್ಲಿ ಲತಾ ಮಂಗೇಶ್ಕರ್ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ದೆಹಲಿಯ ಮೆಹಂದಿ ಆರ್ಟಿಸ್ಟ್ ಕೈಚಳಕಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಸಖತ್ ವೈರಲ್ ಆಗಿದೆ. ವಿಜಯ್ ಬ್ರೈಡಲ್ ಮೆಹಂದಿ ಎನ್ನು ಇನ್ಸ್ಟಾಗ್ರಾಮ್ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.
ಈ ಕುರಿತು ಮೆಹಂದಿ ಆರ್ಟಿಸ್ಟ್, ನಾನು ಲತಾ ಮಂಗೇಶ್ಕರ್ ಅಭಿಮಾನಿ, ಚಿಕ್ಕಂದಿನಿಂದಲೂ ಅವರ ಗೀತೆಗೆಳನ್ನು ಕೇಳಿಕೊಂಡು ಬೆಳೆದಿದ್ದೇನೆ. ಇದೀಗ ನನ್ನ ಕಲೆಯ ಮೂಲಕ ಅವರಿಗೆ ನಮನವನ್ನು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ. 22 ವರ್ಷದಿಂದ ಮೆಹಂದಿ ಆರ್ಟಿಸ್ಟ್ ಆಗಿರುವ ವ್ಯಕ್ತಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಇನ್ನೊಂದು ವೈರಲ್ ವಿಡಿಯೋದಲ್ಲಿ ದೆಹಲಿಯ ಖ್ಯಾತ ಮೇಕಪ್ ಆರ್ಟಿಸ್ಟ್ ದಿಕ್ಷಿತಾ ತನ್ನ ಮುಖವನ್ನು ಲತಾ ಮಂಗೇಶ್ಕರ್ ಮುಖದಂತೆ ಮೇಕಪ್ ಮಾಡಿಕೊಂಡು ವಿಭಿನ್ನ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಈ ಹಿಂದೆ ಶಾರೂಖಾನ್ ಸೇರಿದಂತೆ ಹಲವು ಗಣ್ಯರಂತೆ ಕಾಣುವ ರೀತಿ ಮೇಕಪ್ ಮಾಡಿಕೊಂಡು ಸುದ್ದಿಯಾಗಿದ್ದಾರೆ.
ಇದನ್ನೂ ಓದಿ:
ಜೆಆರ್ಡಿ ಟಾಟಾ ಮೊದಲ ಬಾರಿಗೆ ಪೈಲಟ್ ಪರವಾನಗಿ ಪತ್ರ ಪಡೆದ ಪೋಸ್ಟ್ ಹಂಚಿಕೊಂಡ ಟಾಟಾ ಗ್ರುಪ್
Published On - 1:30 pm, Fri, 11 February 22