ಬೆಳ್ಳುಳ್ಳಿ ಬೆಲೆ ರಾಕೆಟ್ ವೇಗದಲ್ಲಿ ಏರಿಕೆ ಕಾಣುತ್ತಿದ್ದು, ಮಹಾರಾಷ್ಟ್ರದಲ್ಲಿ ಕೆಜಿಗೆ 600 ರೂಪಾಯಿಗಳ ಗಡಿ ದಾಟಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಬೆಳ್ಳುಳ್ಳಿ ಕಬಾಬ್ ಸಾಕಷ್ಟು ಟ್ರೆಂಡ್ ಆಗುತ್ತಿದ್ದರೆ ಇತ್ತ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ. ಸಾಮಾನ್ಯವಾಗಿ ಮನೆ, ಕಚೇರಿ, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಇದೀಗಾ ರೈತನೊಬ್ಬ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾನೆ. ಬೆಳ್ಳುಳ್ಳಿ ಕಳ್ಳತನದ ಕೆಲವು ಘಟನೆಗಳು ಬೆಳಕಿಗೆ ಬಂದ ನಂತರ ಮಧ್ಯಪ್ರದೇಶದ ಚಿಂದ್ವಾಡ ಜಿಲ್ಲೆಯ ಮೊಹ್ಖೇದ್ ಪ್ರದೇಶದ ಐದಾರು ಗ್ರಾಮಗಳ ಹೊಲಗಳಲ್ಲಿ ರೈತರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
“ಈ ಕ್ಯಾಮೆರಾಗಳು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಏನಾದರೂ ಅನುಮಾನಾಸ್ಪದವಾಗಿ ಕಂಡರೆ ಅಲಾರಾಂ ಸದ್ದು ಮಾಡಲಿದೆ. ಜೊತೆಗೆ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಕಳ್ಳತನಗಳು ಕಡಿಮೆಯಾಗಿದೆ” ಎಂದು ರಾಹುಲ್ ದೇಶಮುಖ್ ಎಂಬ ರೈತ ಹೇಳಿದ್ದಾರೆ. ಕಳೆದ 60 ವರ್ಷಗಳಲ್ಲಿ ಬೆಳ್ಳುಳ್ಳಿ ಬೆಲೆ ಇಷ್ಟೊಂದು ಏರಿಕೆ ಕಂಡಿಲ್ಲ. ಆದರೆ ಈಗ ಬೆಳ್ಳುಳ್ಳಿ ಕೃಷಿ ಮಾಡಿದ ರೈತರು ಶ್ರೀಮಂತರಾದರೂ ಕೂಡ ತಮ್ಮ ಬೆಳೆ ಕಳ್ಳತನವಾಗುವ ಭೀತಿಯಲ್ಲಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಕನ್ಯತ್ವ ಪರೀಕ್ಷೆ ವರದಿ ಜೊತೆಗೆ ಹೆಸರು,ಫೋನ್ ನಂಬರ್ ಶೇರ್ ಮಾಡಿದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ
2023ರಲ್ಲಿ ಬೆಳ್ಳುಳ್ಳಿಗೆ ಉತ್ತಮ ಬೆಲೆ ಸಿಗದ ಕಾರಣ ಸಾಕಷ್ಟು ರೈತರು ಬೆಳ್ಳುಳ್ಳಿ ಬೆಳೆ ಬೆಳೆಸುವದನ್ನು ಕೈಬಿಟ್ಟಿದ್ದರು. ಈ ಕಾರಣದಿಂದಾಗಿ ಈ ವರ್ಷ ಬೆಳ್ಳುಳ್ಳಿಯ ಬೆಲೆ ಗಗನಕ್ಕೇರಲು ಕಾರಣವಾಯಿತು ಎಂದು ಹೇಳಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ