ಕಳೆದ ವರ್ಷ ತಾನೇ ನೀವು ಬೆಂಗಳೂರಿನಲ್ಲಿ (Bengaluru) ಸಿಗುತ್ತಿದ್ದ ಎಟಿಎಂ ಇಡ್ಲಿ (ATM Idli) ಬಗ್ಗೆ ಕೇಳಿರಬಹುದು. ಅದಂತೂ ನಮ್ಮ ಬೆಂಗಳೂರಿನಲ್ಲಿ ಸಖತ್ ಹಿಟ್ ಆಗಿತ್ತು. ಇದೀಗ ಎಟಿಎಂ ಇಡ್ಲಿಗೆ ಠಕ್ಕರ್ ಕೊಡಲು ತಮಿಳುನಾಡಿನ ಚೆನ್ನೈನಲ್ಲಿ (Chennai) ಎಟಿಎಂ ಬಿರಿಯಾನಿ (ATM Biriyani) ಶುರು ಆಗಿದೆ. ಈ ಎಟಿಎಂ ಬಿರಿಯಾನಿಯನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಯಾವ ಬಿರಿಯಾನಿ ಬೆಸ್ಟ್ ಎಂಬ ಚರ್ಚೆ ನಡೆಯಿತ್ತಿದ್ದರೂ, ಈ ಹೊಸ ವೆರೈಟಿ ಬಿರಿಯಾನಿ ನೆಟ್ಟಿಗರ ಹುಬ್ಬೇರಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ವೆಟ್ಟೈ ಎಂಬುವವರು ಹಂಚಿಕೊಂಡಿರುವ ಈ ವೀಡಿಯೊವು ದಿ ಬಿವಿಕೆ ಬಿರಿಯಾನಿ ಎಂಬ ಹೆಸರಿನ ಔಟ್‌ಲೆಟ್ ಅನ್ನು ತೋರಿಸುತ್ತದೆ. ಎಟಿಎಂನಲ್ಲಿ ಒಬ್ಬ ವ್ಯಕ್ತಿ ಬಿರಿಯಾನಿಗಾಗಿ ಕೆಲವು ಆಯ್ಕೆಗಳನ್ನು ಆರಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಸ್ಕ್ರೀನ್ ಅಲ್ಲಿ ತೋರಿಸುವ ಮೊತ್ತವನ್ನು ಪಾವತಿಸಿದ ನಂತರ, ಪರದೆಯು ಕೆಲವು ಟೈಮರ್ ಕಾಣುತ್ತದೆ. ವೀಡಿಯೋ ಮುಂದುವರೆದಂತೆ, ಆ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಿದ ಬಿರಿಯಾನಿ ಪ್ಯಾಕೆಟ್ ಅನ್ನು ಹೊರತೆಗೆಯುತ್ತಾನೆ. ಔಟ್ಲೆಟ್ನ ಸ್ಥಳವನ್ನು ವಿಡಿಯೋದ ಶೀರ್ಷಿಕೆಯಲ್ಲಿಯೂ ಉಲ್ಲೇಖಿಸಲಾಗಿದೆ. ಇದು ಚೆನ್ನೈನ ಕೊಳತ್ತೂರಿನಲ್ಲಿ ಇರುವ ಅಪರೂಪದ ಬಿರಿಯಾನಿ ಎಟಿಎಂ.
ಇದನ್ನೂ ಓದಿ: ವಿಪರೀತ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಯುವಕ, ಆದ್ರೆ ಸ್ಕ್ಯಾನಿಂಗ್ ರಿಪೋರ್ಟ್ ವೈದ್ಯರನ್ನೇ ಬೆಚ್ಚಿ ಬೀಳಿಸಿತ್ತು
ಈ ವೀಡಿಯೊ 60 ಸಾವಿರ ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಕೆಲವರು ಈ ಬಿರಿಯಾನಿಯನ್ನು ಸವಿಯಲು ಉತ್ಸುಕರಾಗಿದ್ದರೆ, ಇತರರು ಇದರ ಬೆಲೆ ಹೆಚ್ಚೆನಿಸುತ್ತಿದೆ ಎಂದು ಹೇಳಿದರು. ಇನ್ನು ಕೆಲವರು ಬಿರಿಯಾನಿಯ ರುಚಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು, ಏಕೆಂದರೆ ಅತ್ಯುತ್ತಮ ರುಚಿಯ ಬಿರಿಯಾನಿ ಸವಿಯಲು ಅದು ಅಲ್ಲೇ ತಯಾರಿಸಬೇಕಾಗುತ್ತದೆ ಎಂಬುದು ನೆಟ್ಟಿಗರ ಅಭಿಪ್ರಾಯ.