Cat: ತನ್ನನ್ನು ಎತ್ತಿಕೊಂಡಿರುವ ಪೋಷಕರನ್ನು ತಬ್ಬಿಕೊಂಡಿರುವ ಈ ಬೆಕ್ಕು ಅವರ ಕಣ್ಣುಗಳ ಸ್ಪಂದನೆಗಾಗಿ ಕಾಯುತ್ತಿದೆ. ಫೋನ್ ಕೆಳಗಿಟ್ಟು ವಿಡಿಯೋ ನಿಲ್ಲಿಸಿ ಯಾವಾಗ ತನ್ನ ಕಣ್ಣಿಗೆ ಕಣ್ಣು ಕೊಡುವರೋ ಎಂದು ಅದು ಕಾಯುತ್ತಿದೆ. ಇನ್ಸ್ಟಾಗ್ರಾಂನ (Instagram) ಕ್ಯಾಟ್ಸ್ ಆಫ್ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನೆಟ್ಟಿಗರು ಈ ಹೃದಯಸ್ಪರ್ಶಿಯಾದ ವಿಡಿಯೋ ನೋಡಿ ಕರಗುತ್ತಿದ್ದಾರೆ. ಆ. 21ರಂದು ಈ ವಿಡಿಯೋ ಮಾಡಲಾಗಿದೆ. ಈತನಕ 1.5 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ.
ಇದನ್ನೂ ಓದಿ : Viral Video: ನಾಗಪುರ ಮೆಟ್ರೋದಲ್ಲಿ ಫ್ಯಾಷನ್ ಷೋ; ಪ್ರಯಾಣಿಕರಿಗೆ ತೊಂದರೆ
ಮನುಷ್ಯನಿಗೆ ಇದಕ್ಕಿಂತ ಉತ್ತಮವಾದ ಗುರಿ ಜೀವನದಲ್ಲಿ ಬೇರೆ ಏನಿದೆ? ಎಂದು ಕೇಳಿದ್ದಾರೆ ನೆಟ್ಟಿಗರು. ಹೌದು ಇಷ್ಟು ಆಪ್ತವಾದ ಬಂಧ ದೊರೆಯುವುದು ಪ್ರಾಣಿಗಳಿಂದ ಮಾತ್ರ ಎಂದಿದ್ದಾರೆ ಕೆಲವರು. ಅದರಲ್ಲಿಯೂ ಬೆಕ್ಕಿನಿಂದ ಮಾತ್ರ ಎಂದಿದ್ದಾರೆ ಒಂದಿಷ್ಟು ಜನ. ಸಾಕುಪ್ರಾಣಿಗಳಷ್ಟು ಆಪ್ತ ಬಂಧ ಮನುಷ್ಯರಿಂದ ಸಾಧ್ಯವೇ ಇಲ್ಲ ಎಂದಿದ್ದಾರೆ ಇನ್ನೂ ಒಂದಿಷ್ಟು ಜನ.
ತನ್ನ ಉಗುರುಗಳು ಪೋಷಕರಿಗೆ ನಾಟದಂತೆ ಮೆಲ್ಲನೇ ಅವುಚಿಕೊಳ್ಳುವ ಬೆಕ್ಕಿನ ಆ ಮುದ್ದಾದ ರೀತಿಯನ್ನು ಗಮನಿಸಿ ಎಂದಿದ್ದಾರೆ ಒಬ್ಬರು. ಇದು ತುಂಬಾ ಮುದ್ಧಾದ ಮಗು, ನನಗೆ ಬೇಕು ಎಂದಿದ್ದಾರೆ ಮತ್ತೊಬ್ಬರು. ತನ್ನ ಪೋಷಕರೊಂದಿಗೆ ಗಾಢವಾದ ಪ್ರೀತಿಯಲ್ಲಿ ಬಿದ್ದಿದೆ ಇದು ಎಂದಿದ್ದಾರೆ ಮಗದೊಬ್ಬರು. ಅದಕ್ಕೇ ನಾನು ಜಿಂಜರ್ ಬೆಕ್ಕನ್ನು ಇಷ್ಟಪಡುತ್ತೇನೆ ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನೂ ಓದಿ : Viral Video: 24 ವರ್ಷಗಳ ನಂತರ ಶುಭಾ ಮುದ್ಗಲ್, ಸುಖವಿಂದರ್ ಸಿಂಗ್ ಹಾಡಿದ ಈ ಹಾಡು ವೈರಲ್
ನನಗೆ ನಾಯಿಗಳು ಇಷ್ಟವಾದರೂ ಪ್ರೀತಿಸುವ ವಿಷಯದಲ್ಲಿ ಬೆಕ್ಕೇ ಬೇಕು ಎಂದಿದ್ದಾರೆ ಮತ್ತೊಬ್ಬರು. 15 ಸೆಕೆಂಡುಗಳ ಕಾಲ ಮಾತ್ರ ಇದರ ಪೋಷಕರು ಹೀಗೆ ಮಾಡಿ ಇಡೀ ದಿನ ಇದನ್ನು ನಿರ್ಲಕ್ಷಿಸುವ ಸಾಧ್ಯತೆ ಇದೆ, ಇದು ಕೇವಲ ವಿಡಿಯೋಗಾಗಿ ಎಂದಿದ್ದಾರೆ ಮಗದೊಬ್ಬರು. ಒಟ್ಟಾರೆಯಾಗಿ ಇದು ಬಹಳ ಆಪ್ತವಾದ ವಿಡಿಯೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ