ಕೊರೊನಾಗೆ ಲಸಿಕೆ ಮದ್ದಲ್ಲ, ಒಂದು ಪೆಗ್​ ಹೊಡೆದ್ರೆ ಸರಿಯಾಗುತ್ತೆ; ಮದ್ಯದಂಗಡಿ ಎದುರು ಕ್ಯೂ ನಿಂತ ಆಂಟಿ

ದೆಹಲಿಯಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ 6 ದಿನಗಳ ಲಾಕ್​ಡೌನ್ ಘೋಷಿಸಿರು. ಈ ಕೂಡಲೇ ಮದ್ಯದಂಗಡಿಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ.

ಕೊರೊನಾಗೆ ಲಸಿಕೆ ಮದ್ದಲ್ಲ, ಒಂದು ಪೆಗ್​ ಹೊಡೆದ್ರೆ ಸರಿಯಾಗುತ್ತೆ; ಮದ್ಯದಂಗಡಿ ಎದುರು ಕ್ಯೂ ನಿಂತ ಆಂಟಿ
ಬಾರ್​ ಎದುರು ಮಾತನಾಡಿದ ಆಂಟಿ

Updated on: Apr 19, 2021 | 8:07 PM

ಕೇಂದ್ರ ಸರ್ಕಾರ ಕಳೆದ ವರ್ಷ ಏಕಾಏಕಿ ಲಾಕ್​ಡೌನ್​ ಘೋಷಣೆ ಮಾಡಿತ್ತು. ಇದರಿಂದ ಜನಸಾಮಾನ್ಯರು ತುಂಬಾನೇ ತೊಂದರೆ ಅನುಭವಿಸಿದ್ದರು. ಅದರಲ್ಲೂ ಮದ್ಯಪ್ರಿಯರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಏಕಾಏಕಿ ಬಾರ್​ಗಳನ್ನು ಮುಚ್ಚಿದ್ದರಿಂದ ಆಲ್ಕೋಹಾಲ್​ ಸಿಗದೆ ಅನೇಕರು ಪರಿತಪಿಸಿದ್ದರು. ಈಗ ಎರಡನೇ ಅಲೆ ಅಬ್ಬರ ಜೋರಾಗಿರುವುದರಿಂದ ದೆಹಲಿಯಲ್ಲಿ ಆರು ದಿನಗಳ ಮಿನಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಜನರು ಮದ್ಯದಂಗಡಿಗೆ ಮುಗಿಬಿದ್ದಿದ್ದಾರೆ. ಈ ವೇಳೆ ಗಮನ ಸೆಳೆದಿದ್ದು ಒಂದು ಆಂಟಿ.

ದೆಹಲಿಯಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ 6 ದಿನಗಳ ಲಾಕ್​ಡೌನ್ ಘೋಷಿಸಿರು. ಈ ಕೂಡಲೇ ಮದ್ಯದಂಗಡಿಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಒಂದು ವಾರಕ್ಕೆ ಸಾಕಾಗುವಷ್ಟು ಮದ್ಯವನ್ನು ಶೇಖರಿಸಿಟ್ಟುಕೊಳ್ಳಲು ಜನರು ಮುಂದಾಗಿದ್ದರು. ಈ ಸಾಲಿನಲ್ಲಿ ಓರ್ವ ಆಂಟಿ ಕೂಡ ಇದ್ದರು. ಅವರು ಕೊರೊನಾಗೆ ಲಸಿಕೆ ಮದ್ದಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆಂಟಿ, ಕೊರೊನಾಗೆ ಇಂಜೆಕ್ಷನ್ ಪ್ರಯೋಜನವಾಗುವುದಿಲ್ಲ. ಆದರೆ, ಒಂದು ಪೆಗ್​ ಹೊಡೆದರೆ ಸರಿ ಆಗುತ್ತದೆ. ಯಾರ್ಯಾರು ಕುಡಿಯುತ್ತಾರೋ ಅವರಿಗೆ ರೋಗ ಅಂಟುವುದಿಲ್ಲ. ಅವರು ಆರೋಗ್ಯವಾಗಿರುತ್ತಾರೆ. ನಾನು ಅನೇಕ ವರ್ಷಗಳಿಂದ ಮದ್ಯ ಕುಡಿಯುತ್ತಿದ್ದೇನೆ. ಇಲ್ಲಿಯವರೆಗೆ ನನಗೆ ಯಾವುದೇ ರೋಗ ಬಂದಿಲ್ಲ ಎಂದಿದ್ದಾರೆ.

ಸಂಜೆ ವೇಳೆಗೆ ಟ್ವಿಟರ್​ನಲ್ಲಿ ಆಂಟಿ ಎನ್ನುವ ಶಬ್ದ ಟ್ರೆಂಡ್​ ಆಗಿದೆ. ಈ ಬಗ್ಗೆ ಸಾಕಷ್ಟು ಟ್ರೋಲ್​ಗಳು ಕೂ ಡ ಹರಿದಾಡಿವೆ.

ಆಹಾರ, ಆಹಾರೋತ್ಪನ್ನ, ದವಸ ಧಾನ್ಯ, ತರಕಾರಿ, ಹಣ್ಣು, ಹಾಲು, ಮೀನು, ಮಾಂಸ, ಪಶು ಆಹಾರ, ಫಾರ್ಮಸಿ, ವೈದ್ಯಕೀಯ ಕೇಂದ್ರಗಳು, ಪತ್ರಿಕೆ, ಬ್ಯಾಂಕ್, ಎಟಿಎಂ, ಸ್ಟಾಕ್ ಎಕ್ಸ್​ಚೇಂಜ್, ಟೆಲಿ ಕಮ್ಯುನಿಕೇಷನ್, ಇಂಟರ್ನೆಟ್, ಬ್ರಾಡ್ ಕಾಸ್ಟಿಂಗ್​ ಮತ್ತು ಕೇಬಲ್ ಸರ್ವೀಸ್, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳು ಇರಲಿವೆ. ದೆಹಲಿಯಲ್ಲಿ ಭಾನುವಾರ 25,462 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಪಾಸಿಟಿವಿಟಿ ದರ 29.74 ಆಗಿದೆ. ಕಳೆದ 24ಗಂಟೆಗಳಲ್ಲಿ ಕೊವಿಡ್ ನಿಂದ 161 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ 6 ದಿನಗಳ ಲಾಕ್​ಡೌನ್; ಇಂದು ರಾತ್ರಿಯಿಂದಲೇ ಕಠಿಣ ನಿಯಮ ಜಾರಿ: ಅರವಿಂದ ಕೇಜ್ರಿವಾಲ್

ದೆಹಲಿಯಲ್ಲಿ ಲಾಕ್​ಡೌನ್ ಘೋಷಣೆಯಾದ ಕೂಡಲೇ ಮದ್ಯದಂಗಡಿ ಮುಂದೆ ಜನವೋ ಜನ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us