ಪೊಲೀಸ್​​ ಕೆಲಸ ಬಿಟ್ಟು, ಹುಡುಗಿಯರನ್ನು ಹೇಗೆ ಪಟಾಯಿಸುವುದು ಎಂದು ಹೇಳಿ ಕೊಡ್ತಾರೆ ಈ ಅಧಿಕಾರಿ

ಪೊಲೀಸ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದ ಅಲಿಸಿಯಾ ಅದನ್ನು ತೊರೆದು ಇದೀಗ ಹೊಸ ಬಿಸಿನೆಸ್​​ ಒಂದನ್ನು ಆರಂಭಿಸಿದ್ದಾರೆ. ಈ ಮೂಲಕ ಪ್ರತಿ ತಿಂಗಳು 5 ರಿಂದ 7 ಲಕ್ಷ ರೂಪಾಯಿಗಳನ್ನು ಗಳಿಸುತ್ತಿರುವುದಾಗಿ ಈಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ.

ಪೊಲೀಸ್​​ ಕೆಲಸ ಬಿಟ್ಟು, ಹುಡುಗಿಯರನ್ನು ಹೇಗೆ ಪಟಾಯಿಸುವುದು ಎಂದು ಹೇಳಿ ಕೊಡ್ತಾರೆ ಈ ಅಧಿಕಾರಿ
ಅಲಿಸಿಯಾ ಡೇವಿಸ್(32)

Updated on: Sep 14, 2024 | 5:17 PM

ಆಸ್ಟ್ರೇಲಿಯಾದ ಅಲಿಸಿಯಾ ಡೇವಿಸ್(32) ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದ ಅಲಿಸಿಯಾ ಅದನ್ನು ತೊರೆದು ಇದೀಗ ಹೊಸ ಬಿಸಿನೆಸ್​​ ಒಂದನ್ನು ಆರಂಭಿಸಿದ್ದು, ಈ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಒಂಟಿ ಹುಡುಗರಿಗೆ ಹುಡುಗಿಯರ ಜೊತೆ ಹೇಗೆ ಡೇಟಿಂಗ್​ ಮಾಡುವುದು ಎಂಬುದರ ಕುರಿತು ಟ್ರೈನಿಂಗ್​ ನೀಡುತ್ತಾಳೆ ಈಕೆ.

ಅಪರಿಚಿತ ಮಹಿಳೆಯರೊಂದಿಗೆ ಮಾತನಾಡಲು ಧೈರ್ಯವಿಲ್ಲದ ಅನೇಕ ಪುರುಷರನ್ನು ತಾನು ಭೇಟಿಯಾಗಿದ್ದೇನೆ ಮತ್ತು ಇಲ್ಲಿಂದ ನನ್ನ ಕೆಲಸ ಪ್ರಾರಂಭವಾಗುತ್ತದೆ. ನಾನು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತೇನೆ ಮತ್ತು ಡೇಟಿಂಗ್ ನಂತರ ಸಂಬಂಧವನ್ನು ಹೇಗೆ ಮುಂದುವರಿಸಬೇಕು ಎಂದು ನಾನು ಹೇಳಿಕೊಡುತ್ತೇನೆ ಎಂದು ಅಲಿಸಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರೈಲ್ವೇ ಸಿಬ್ಬಂದಿಯನ್ನು ಹೊಡೆದು ಕೊಂದ ಪ್ರಯಾಣಿಕರು

ಈ ರೀತಿಯ ಟ್ರೈನಿಂಗ್​ ಕ್ಲಾಸ್​ ಮೂಲಕ ಪ್ರತಿ ತಿಂಗಳು 5 ರಿಂದ 7 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾಳೆ ಅಲಿಸಿಯಾ. ಮಹಿಳೆಯರು ಯಾವಾಗಲೂ ತಮ್ಮ ಬಗ್ಗೆ ತಿಳಿದುಕೊಳ್ಳಲು ಬಯಸುವ ಆತ್ಮವಿಶ್ವಾಸದ ಪುರುಷರನ್ನು ಇಷ್ಟಪಡುತ್ತಾರೆ ಎಂದು ಅಲಿಸಿಯಾ ಮಹಿಳೆ ಇನ್ನಿತರ ಅನೇಕ ಗುಟ್ಟುಗಳನ್ನು ಪುರುಷರಿಗೆ ಹೇಳಿಕೊಟ್ಟು ಅವರ ಸಂಬಂಧ ಗಟ್ಟಿಯಾಗುವಂತೆ ಮಾಡುತ್ತಾಳೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:38 pm, Sat, 14 September 24