ಆಸ್ಟ್ರೇಲಿಯಾದ ಯೂಟ್ಯೂಬರ್ ಡಾ ಸಿಡ್ನಿ ವ್ಯಾಟ್ಸನ್ ಇತ್ತೀಚೆಗೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಭಾರತೀಯ ಆಹಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದೆ. ಪ್ರಾಚೀನ ಕಾಲದಿಂದಲೂ, ಭಾರತೀಯ ಮಸಾಲೆಗಳು ಪಾಕಪದ್ಧತಿಯ ಮತ್ತು ಭಾರತೀಯ ಸಂಸ್ಕೃತಿಯ ಅತ್ಯಗತ್ಯ ಭಾಗವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದಲ್ಲದೇ ಜಾಗತಿಕ ಮಟ್ಟದಲ್ಲಿ ಭಾರತೀಯ ಆಹಾರಗಳು ಸ್ಥಾನ ಪಡೆದುಕೊಳ್ಳತೊಡಗಿವೆ. ಇದೀಗ ಆಸ್ಟ್ರೇಲಿಯನ್ ಯೂಟ್ಯೂಬರ್ ಭಾರತೀಯ ಮಸಾಲೆಗಳು ಕೊಳಕು ಎಂದು ಟೀಕಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
@_FlipMan ಎಂಬ ಟ್ವಿಟರ್ ಖಾತೆಯಲ್ಲಿ ಟೆಕ್ಸಾಸ್‌ನ ವ್ಯಕ್ತಿಯೊಬ್ಬರು ಆಹಾರದ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಆಸ್ಟ್ರೇಲಿಯಾದ ಯೂಟ್ಯೂಬರ್ ಡಾ ಸಿಡ್ನಿ ವ್ಯಾಟ್ಸನ್ ರೀಟ್ವೀಟ್ ಮಾಡಿ ಭಾರತೀಯ ಮಸಾಲೆಗಳು ಕೊಳಕು ಎಂದು ಬರೆದುಕೊಂಡಿದ್ದಾರೆ.
It really, really isn’t. https://t.co/jzoiUW60bl
— Dr. Sydney Watson (@SydneyLWatson) September 16, 2024
ಇದನ್ನೂ ಓದಿ: ರಜೆಯಲ್ಲಿ ಮಗ ಅರ್ಧ ದಿನ ತಂದೆ ಜತೆ, ಇನ್ನರ್ಧ ದಿನ ತಾಯಿ ಜತೆ, ಡಿವೋರ್ಸ್ಗೆ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್
ಆಸ್ಟ್ರೇಲಿಯಾದ ಯೂಟ್ಯೂಬರ್ ತನ್ನ ಟ್ವಿಟರ್ ಖಾತೆಯಾದ @SydneyLWatsonನಲ್ಲಿ ಸೆಪ್ಟೆಂಬರ್ 17ರಂದು ರೀಟ್ವೀಟ್ ಮಾಡಿದ್ದು, ಈ ಟ್ವೀಟ್ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಈಕೆ ಮಾಡಿರುವ ರೀಟ್ವೀಟ್ ಕೇವಲ ಎರಡು ದಿನಗಳಲ್ಲಿ10 ಮಿಲಿಯನ್ ಅಂದರೆ ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಮೊದಲು ಭಾರತೀಯ ಆಹಾರದ ರುಚಿ ನೋಡಿ ನಂತರ ರಿಯಾಕ್ಷನ್ ನೀಡಿ, ಆಹಾರಕ್ಕೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Thu, 19 September 24