Viral: ರಜೆಯಲ್ಲಿ ಮಗ ಅರ್ಧ ದಿನ ತಂದೆ ಜತೆ, ಇನ್ನರ್ಧ ದಿನ ತಾಯಿ ಜತೆ, ಡಿವೋರ್ಸ್​ಗೆ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್​

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಸಾಮಾನ್ಯವಾಗಿಬಿಟ್ಟಿದೆ. ಆದ್ರೆ ಇದು ಮಕ್ಕಳ ಮೇಲೆ ಋಣಾತ್ಮಕವಾಗಿ ಪರಿಣಾಮವನ್ನು ಬೀರುತ್ತದೆ. ಹೌದು ಮಕ್ಕಳು ಒಂದಾ ತಾಯಿ ಪ್ರೀತಿಯಿಂದ ವಂಚಿತರಾಗಬೇಕಾಗುತ್ತದೆ ಅಥವಾ ತಂದೆಯ ಪ್ರೀತಿಯಿಂದ ವಂಚಿತರಾಗಬೇಕಾಗುತ್ತದೆ. ಇಲ್ಲವೇ ಅಪ್ಪ ಅಮ್ಮನ ನಡುವೆಯೇ ಮಕ್ಕಳನ್ನು ನೋಡಿಕೊಳ್ಳುವ ವಿಚಾರವಾಗಿ ಒಂದಷ್ಟು ವ್ಯಾಜ್ಯಗಳು ಏರ್ಪಡುತ್ತವೆ. ಇದೀಗ ಅಂತಹದ್ದೇ ಪ್ರಕರಣವೊಂದರ ವಿಡಿಯೋ ವೈರಲ್‌ ಆಗುತ್ತಿದೆ.

Viral: ರಜೆಯಲ್ಲಿ ಮಗ ಅರ್ಧ ದಿನ ತಂದೆ ಜತೆ, ಇನ್ನರ್ಧ ದಿನ ತಾಯಿ ಜತೆ, ಡಿವೋರ್ಸ್​ಗೆ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್​
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 19, 2024 | 12:44 PM

ದಂಪತಿಗಳು ವಿಚ್ಛೇತದ ಪಡೆದಾಗ ಮಗುವನ್ನು ನೋಡಿಕೊಳ್ಳುವ ವಿಚಾರವಾಗಿ ಗಂಡ ಹೆಂಡತಿಯ ನಡುವೆ ವ್ಯಾಜ್ಯಗಳು ಏರ್ಪಡುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕೋರ್ಟ್‌ ಆದೇಶದ ಮೇರೆಗೆ ಅಪ್ರಾಪ್ತ ಮಕ್ಕಳು ತಾಯಿಯ ಸುಪರ್ದಿಗೆ ಹೋಗುತ್ತಾರೆ. ಇಂತಹದ್ದೇ ಪ್ರಕರಣವೊಂದು ಇದೀಗ ನಡೆದಿದ್ದು, ವ್ಯಕ್ತಿಯೊಬ್ಬರು ನನ್ನ ಮಗ ನನ್ನ ಜೊತೆಯೇ ಜೊತೆಗೆಯೇ ಇರ್ಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದ್ದು, ವಾದ ವಿವಾದಗಳನ್ನು ಆಲಿಸಿದ ಕರ್ನಾಟಕ ಹೈಕೋರ್ಟ್‌ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಾಧೀಶರು ರಜಾ ದಿನಗಳಲ್ಲಿ ಮಗು ಅರ್ಧ ದಿವಸ ತಂದೆ ಜೊತೆ ಇರ್ಲಿ ಇನ್ನರ್ಧ ದಿವಸ ತಾಯಿ ಜೊತೆ ಇರ್ಲಿ ಎಂದು ತೀರ್ಪನ್ನು ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಡಿವೋರ್ಸ್‌ ಬಳಿಕ ಮಗು ತಾಯಿಯ ಜೊತೆ ಇರಬೇಕೆಂಬ ಆದೇಶ ಬಂದ ನಂತರ ಮಗು ನನ್ನ ಜೊತೆಯೇ ಇರಬೇಕೆಂದು ತಂದೆಯೊಬ್ಬರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ವಾದ ವಿವಾದಗಳು ನಡೆದ ಬಳಿಕ ಹೈಕೋರ್ಟ್‌ ದ್ವಿಸದಸ್ಯ ಪೀಠ ನ್ಯಾಯಾಧಿಶರು ಮಗನಿಗೆ ಇನ್ನೂ 14 ವರ್ಷ, ಆತ ನಿಮ್ಮ ಜೊತೆಯೇ ಇದ್ದರೆ ನೀವು ಮುದ್ದು ಮಾಡಿ, ಅದು ಅವನ ಓದಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ರಜೆಯ ದಿನಗಳಲ್ಲಿ ಮಗು ಅರ್ಧ ದಿವಸ ತಂದೆಯ ಜೊತೆಗಿರಲಿ ಹಾಗೂ ಅರ್ಧ ದಿನ ತಾಯಿ ಜೊತೆಗೆ ಇರಲಿ, ಒಂದು ಹಬ್ಬವನ್ನು ತಂದೆಯ ಜೊತೆಗೆ ಆಚರಿಸಲಿ ಇನ್ನೊಂದು ಹಬ್ಬವನ್ನು ತಾಯಿಯ ಜೊತೆಯಲ್ಲಿ ಆಚರಣೆ ಮಾಡಲಿ ಎಂಬ ತೀರ್ಪನ್ನು ನೀಡಿದ್ದಾರೆ. ನಾವು ಒತ್ತಾಯ ಮಾಡಿ ಮಗುವನ್ನು ಕಳಿಸಲು ಆಗೊಲ್ಲ, ಹಾಗಾಗಿ ಇನ್ನೂ 4 ವರ್ಷ ಕಾದ್ರೆ ನಿಮ್ಮ ಮಗನಿಗೆ 18 ವರ್ಷ ಆಗುತ್ತೆ, ಅದ್ರ ಬಳಿಕ ಆತ ಯಾರ ಜೊತೆ ಇರಬೇಕೆಂದು ಬಯಸುತ್ತಾನೋ ಅವರ ಜೊತೆಯೇ ಇರಲಿ ಇಲ್ಲವೇ ಮಗುವಿಗಾಗಿ ನೀವಿಬ್ಬರೂ ಗಂಡ ಹೆಂಡ್ತಿ ಹೊಂದಿಕೊಂಡು ಹೋಗಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟಾರ್ಗೆಟ್​ ತಲುಪೋ ಭರದಲ್ಲಿ ರಾತ್ರಿ ಹಗಲೆನ್ನದೇ ಕೆಲಸ ಮಾಡಿ ಯುವತಿ ಸಾವು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು Law (ಕಾನೂನು) ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಎರಡೂ ಕಡೆಗಳ ವಾದ ವಿವಾದಗಳನ್ನು ಆಲಿಸಿದ ಬಳಿಕ ಕರ್ನಾಟಕ ಹೈಕೋರ್ಟ್‌ ದ್ವಿಸದಸ್ಯ ಪೀಠದ ನ್ಯಾಯಾಧೀಶರು ರಜಾ ದಿನದಲ್ಲಿ ಮಗು ಅರ್ಧ ದಿನ ತಂದೆಯ ಜೊತೆ ಕಳೆಯಲಿ ಹಾಗೂ ಇನ್ನರ್ಧ ದಿವಸ ತಾಯಿಯ ಜೊತೆ ಇರಲಿ ಎಂಬ ತೀರ್ಪನ್ನು ನೀಡುವ ದೃಶ್ಯವನ್ನು ಕಾಣಬಹುದು. ಇದನ್ನೇಲ್ಲಾ ನೋಡಿದಾಗ ಮಗುವಿಗಾಗಿ, ಮಗುವಿನ ಭವಿಷ್ಯಕ್ಕಾಗಿ ಪತಿ ಪತ್ನಿ ತಮ್ಮ ಮನಸ್ಥಾಪಗಳನ್ನು ಪಕ್ಕಕ್ಕಿಟ್ಟು ಜೊತೆಯಾಗಿ ಬಾಳುವುದೇ ಸೂಕ್ತವೆಂದು ತೋರುತ್ತದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:43 pm, Thu, 19 September 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ