ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ, ಮುಂಬೈನಲ್ಲಿ 2ಬಿಎಚ್ಕೆ ಫ್ಲ್ಯಾಟ್ ಇದೆ, ಒಟ್ಟು ಆಸ್ತಿ ಎಷ್ಟು ಗೊತ್ತಾ?
ಭಿಕ್ಷಾಟನೆಯನ್ನು ಬಡತನ ಮತ್ತು ಹತಾಶೆಯ ಸಂಕೇತವೆಂದು ನೀವು ಇನ್ನೂ ಪರಿಗಣಿಸುತ್ತೀರಾ, ಹಾಗಾದರೆ ನೀವು ಈ ಸುದ್ದಿ ಓದಲೇಬೇಕು. ವಿಶ್ವದ ಅಂತ್ಯಂತ ಶ್ರೀಮಂತ ಭಿಕ್ಷುಕರೆನಿಸಿಕೊಂಡಿರುವ ಭರತ್ ಜೈನ್ ಬಗ್ಗೆ ಮಾಹಿತಿ ಇಲ್ಲಿದೆ.
ಭಿಕ್ಷುಕ ನಿತ್ಯ ಅಬ್ಬಬ್ಬಾ ಅಂದ್ರೆ ನೂರರಿಂದ ಇನ್ನೂರು ರೂಪಾಯಿವರೆಗೆ ದುಡಿಯಬಹುದು, ಸಾಮಾನ್ಯವಾಗಿ ಒಂದು ಹೊತ್ತು ಊಟಕ್ಕೂ ತೊಂದರೆ ಇರುವವರು, ಇರಲು ಮನೆಯಿಲ್ಲದವರು, ವಿದ್ಯೆ ಇಲ್ಲದವರು ಜೀವನದಲ್ಲೂ ಏನೂ ಇಲ್ಲದೆ ಹತಾಶೆಯಲ್ಲಿರುವವರು ಭಿಕ್ಷಾಟನೆಯಂತಹ ಕಾರ್ಯಕ್ಕಿಳಿಯುತ್ತಾರೆ.
ಆದರೆ ಭಿಕ್ಷಾಟನೆಯು ಇಷ್ಟೊಂದು ಲಾಭದಾಯಕವಾಗಿರುತ್ತದೆ ಎಂದರೆ ನೀವು ನಂಬ್ತೀರಾ. ಈತ ಭರತ್ ಜೈನ್, ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನೆನಿಸಿಕೊಂಡಿದ್ದಾರೆ. ಮುಂಬೈನಲ್ಲಿರುವ ಜೈನ್ ಅವರಿಗೆ 54 ವರ್ಷ ವಯಸ್ಸಾಗಿದ್ದು, 40 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣ (CSMT) ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾರೆ.
ಅವರು ದಿನಕ್ಕೆ 2 ಸಾವಿರದಿಂದ 2,500 ಸಾವಿರ ರೂ.ವರೆಗೂ ಗಳಿಸುತ್ತಾರಂತೆ, ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಯಾವುದೇ ರಜೆಯನ್ನು ತೆಗೆದುಕೊಳ್ಳುವುದಿಲ್ಲವಂತೆ.
ಜೈನ್ ಅವರು ಮುಂಬೈನ ಪರೇಲ್ನಲ್ಲಿ 2ಬಿಎಚ್ಕೆ ಫ್ಲ್ಯಾಟ್ ಹೊಂದಿದ್ದಾರೆ ಅದರ ಬೆಲೆ 1.2 ಕೋಟಿ ರೂ. ಅವರು ತಮ್ಮ ಪತ್ನಿ, ಇಬ್ಬರು ಮಕ್ಕಳು, ತಂದೆ ಹಾಗೂ ಸಹೋದರನೊಂದಿಗೆ ವಾಸಿಸುತ್ತಿದ್ದಾರೆ.
ಮತ್ತಷ್ಟು ಓದಿ: Viral Post: ಫೋನ್ ಪೇ ಸ್ಕ್ಯಾನರ್ ಪ್ರಭಾವ ಎಷ್ಟಿದೆ ನೋಡಿ, ಇವರು ಡಿಜಿಟಲ್ ಭಿಕ್ಷುಕ
ಮಕ್ಕಳು ಕಾನ್ವೆಂಟ್ ಶಾಲೆಯಲ್ಲೇ ಓದಿದ್ದು, ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಇತರೆ ಕುಟುಂಬ ಸದಸ್ಯರು ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ. ಅವರು ತಿಂಗಳಿಗೆ 30 ಸಾವಿರ ರೂ. ಬಾಡಿಗೆ ನೀಡುತ್ತಾರೆ.
ಜೈನ್ಗೆ ಭಿಕ್ಷಾಟನೆ ಎಂಬುದು ಕುಲ ಕಸುಬಂತಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಬಿಡಲು ಇಷ್ಟವಿಲ್ಲ ಎನ್ನುತ್ತಾರೆ. ಇದು ದುರಾಸೆಯಲ್ಲ, ಆಗಾಗ ಅವರು ದೇವಸ್ಥಾನಗಳು, ದತ್ತಿಗಳಿಗೆ ಹಣವನ್ನು ದಾನ ಮಾಡುತ್ತಾರೆ. ಅವರ ಬಳಿ 7.5 ಕೋಟಿ ರೂ. ಸಂಪತ್ತಿದೆ.
ಜೈನ್ ಮಾತ್ರವಲ್ಲ ಭಾರತದಲ್ಲಿ 1.5 ಕೋಟಿ ರೂ. ಆಸ್ತಿ ಹೊಂದಿರುವ ಸಂಭಾಜಿ ಕಾಳೆ, 1 ಕೋಟಿ ರೂ. ಆಸ್ತಿ ಹೊಂದಿರುವ ಲಕ್ಷ್ಮೀದಾಸ್ ಭಿಕ್ಷಾಟನೆ ಮಾಡಿ ಲಕ್ಷಾಂತರ ರೂ. ಗಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ