ಬಚ್ ಪನ್ ಕಾ ಪ್ಯಾರ್ ಖ್ಯಾತಿಯ ಸಹದೇವ್ ದಿರ್ಡೋ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡ ದಿರ್ಡೋ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸಹದೇವ್ ಡಿಸೆಂಬರ್ 28ರಂದು ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಹದೇವ್ ಅವರ ವಿಡಿಯೋಗೆ ಬಾಲಿವುಡ್ ರಾಪರ್ ಬಾದ್ ಶಾ ಪ್ರತಿಕ್ರಿಯಿಸಿದ್ದಾರೆ.
ಸಹದೇವ್ ದಿರ್ಡೋ ತಮ್ಮ ಬಚ್ ಪನ್ ಕಾ ಪ್ಯಾರ್ ಹಾಡಿನ ಮೂಲಕ 2021ರ ಜುಲೈನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಮೂಡಿಸಿದ್ದರು. ರಾತ್ರಿ ಬೆಳಗಾಗುವುದರೊಳಗೆ ದೇಶಾದ್ಯಂತ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ದಿರ್ಡೋ ಹಾಡು ಕೇಳಿ ಬಾಲಿವುಡ್ ರಾಪ್ ಸಿಂಗರ್ ಬಾದ್ ಷಾ ಕೂಡ ಮನಸೋತು ಅವರನ್ನು ಭೇಟಿ ಮಾಡಿದ್ದರು. ಅಷ್ಟೇ ಅಲ್ಲದೆ ಅವರ ಬಚ್ ಪನ್ ಕಾ ಪ್ಯಾರ್ ಹಾಡಿಗೆ ರಾಪ್ ಸಂಗೀತವನ್ನು ಮಿಕ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಸಹದೇವ್ ಅವರಿಗೆ ಅಪಘಾತವಾದ ಸಂದರ್ಭದಲ್ಲಿ ಬಾದ್ ಷಾ ಅವರು ಕೂಡ ಬೇಗ ಗುಣಮುಖವಾಗುವಂತೆ ಕೋರಿ ಹಾರೈಸಿದ್ದರು. ಇದೀಗ ಸಹದೇವ್ ಚೇತರಿಕೆಯ ಬಳಿಕ ಹಂಚಿಕೊಂಡ ವಿಡಿಯೋಗೂ ಪ್ರತಿಕ್ರಿಯಿಸಿದ್ದಾರೆ. ಸಹದೇವ್ ಅವರ ವಿಡಿಯೋ ವೈರಲ್ ಅಗಿದ್ದು, 89 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು 60 ಸಾವಿರ ಲೈಕ್ಸ್ ಪಡೆದಿದೆ.
ಇದನ್ನೂ ಓದಿ:
ಬೀದಿ ಬದಿ ವ್ಯಾಪಾರಿಯ ಚಾಟ್ಸ್ ತಯಾರಿಕೆ ನೋಡಿ ಮೂಗುಮುರಿದ ನೆಟ್ಟಿಗರು: ಸ್ಟ್ರೀಟ್ ಫುಡ್ ತಯಾರಿಕೆಯ ವಿಡಿಯೋ ವೈರಲ್