ಬೀದಿ ಬದಿ ವ್ಯಾಪಾರಿಯ ಚಾಟ್ಸ್ ತಯಾರಿಕೆ ನೋಡಿ ಮೂಗುಮುರಿದ ನೆಟ್ಟಿಗರು: ಸ್ಟ್ರೀಟ್ ಫುಡ್ ತಯಾರಿಕೆಯ ವಿಡಿಯೋ ವೈರಲ್
ಆಲೂಗಡ್ಡೆಯಿಂದ ಮಾಡುವ ಈ ತಿಂಡಿಯನ್ನು ಮೊದಲು ಎಣ್ಣೆಯಲ್ಲಿ ಕರಿದು ಬದಿಗಿರಿಸಿ ಮತ್ತೆ ಕೆಲಹೊತ್ತು ಬಿಟ್ಟು ಅದೇ ಎಣ್ಣೆಯಲ್ಲಿ ಹಾಕಿ ಬಿಸಿ ಮಾಡಿ ಚಟ್ನಿಯೊಂದಿಗೆ ನೀಡಲಾಗುತ್ತದೆ. ವಿಡಿಯೋದಲ್ಲಿ ಅಶುಚಿಯಾದ ಎಣ್ಣೆಯ ಬಳಕೆಯನ್ನು ಕಾಣಬಹುದು.
ಬೀದಿಬದಿಯ ಆಹಾರಗಳೆಂದರೆ ಎಲ್ಲರಿಗೂ ಇಷ್ಟವೇ. ದಿನನಿತ್ಯದ ಜೀವನದಲ್ಲಿ ಬೀದಿಬದಿಯ ಆಹಾರಗಳನ್ನು ಒಂದು ಭಾಗವಾಗಿಯೇ ನೋಡುತ್ತೇವೆ. ಸ್ಟ್ರೀಟ್ ಫುಡ್ (street food) ಗಳಲ್ಲಿರುವ ರುಚಿ ಇನ್ನಲ್ಲೂ ಇಲ್ಲವೆಂದು ಭಾವಿಸಿ ಇಷ್ಟಪಟ್ಟು ತಿನ್ನುತ್ತೇವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಬೀದಿ ಬೀದಿ ತಿಂಡಿಗಳ ಅಭಿಮಾನಿಗಳೇ ಆಗಿದ್ದಾರೆ. ಬಾಯಲ್ಲಿ ನೀರೂರಿಸುವ ಗೋಲಗಪ್ಪಾ, ಎಣ್ಣೆಯಲ್ಲಿ ಮುಳುಗಿ ಬಂದ ಬ್ರೆಡ್ ಪಕೋಡಾ ಎಲ್ಲವೂ ಆಹಾರ ಪ್ರಿಯರ ನೆಚ್ಚಿನ ತಿಂಡಿಗಳೇ ಆಗಿವೆ. ಪ್ರತಿದಿನ ಸಂಜೆಯಾಗುತ್ತಿದ್ದಂತೆ ಸ್ಟ್ರೀಟ್ ಫುಡ್ಗಳ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವವರ ಸಂಖ್ಯೆಯೇ ಹೆಚ್ಚು. ಆದರೆ ಬೀದಿ ಬದಿ ಆಹಾರಗಳು ಎಷ್ಷು ನೈರ್ಮಲ್ಯದಿಂದ ಕೂಡಿರುತ್ತವೆ ಎನ್ನುವುದನ್ನು ಗಮನಿಸುವುದೇ ಇಲ್ಲ. ಸ್ವಚ್ಚತೆಯನ್ನು ಗಾಳಿಗೆ ತೂರಿ ಆಹಾರ ತಯಾರಿಸುವ ವ್ಯಾಪಾರಿಗಳು ರೆಡಿಮಾಡುವ ತಿನಿಸುಗಳೇ ರುಚಿ ಎಂದು ತಿನ್ನುತ್ತೇವೆ. ಆದರೆ ಸಾಮಾಜಿಕ ಜಾಲಾತಣದಲ್ಲಿ ಚಾಟ್ಸ್ ತಯಾರಿಸುವ ವೇಳೆ ಕಂಡುಬಂದು ಅಶುಚಿತ್ವದ ವಿಡಿಯೋ ವೈರಲ್ ಆಗಿದೆ.
View this post on Instagram
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ವಿರಾಟ್ ರಾಘವ್ ಅವರು ತಮ್ಮ ಗರೀಬ್ ಪಾಂಡಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜನಪ್ರಿಯ ಬರುಲೆ ಚಾಟ್ಸ್ ತಯಾರಿಕೆಯಲ್ಲಿ ಇರುವ ಅಶುಚಿತ್ವವನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬರುಲೆ ಚಾಟ್ ಉತ್ತರ ಪ್ರದೇಶದ ಆಗ್ರಾ, ಅಲಿಘರ್, ಹತ್ರಾಸ್ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದ ಚಾಟ್ಸ್ ಆಗಿದೆ. ಆಲೂಗಡ್ಡೆಯಿಂದ ಮಾಡುವ ಈ ತಿಂಡಿಯನ್ನು ಮೊದಲು ಎಣ್ಣೆಯಲ್ಲಿ ಕರಿದು ಬದಿಗಿರಿಸಿ ಮತ್ತೆ ಕೆಲಹೊತ್ತು ಬಿಟ್ಟು ಅದೇ ಎಣ್ಣೆಯಲ್ಲಿ ಹಾಕಿ ಬಿಸಿ ಮಾಡಿ ಚಟ್ನಿಯೊಂದಿಗೆ ನೀಡಲಾಗುತ್ತದೆ. ವಿಡಿಯೋದಲ್ಲಿ ಅಶುಚಿಯಾದ ಎಣ್ಣೆಯ ಬಳಕೆಯನ್ನು ಕಾಣಬಹುದು.
ವಿಡಿಯೋ ನೋಡಿ ನೆಟ್ಟಿಗರು ಇಷ್ಟು ಕೆಟ್ಟದಾಗಿ ತಯಾರಿಸಿದ ಆಹಾರಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳಿತಲ್ಲ ಎಂದಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೀದಿ ಬೀದಿ ಆಹಾರವಾದ ಬುರಾಲಿ ಚಾಟ್ಸ್ ಬಗ್ಗೆ ನೆಟ್ಟಿಗರು ಮೂಗುಮುರಿಯುತ್ತಿದ್ದಾರೆ. ಕೆಸರು ತುಂಬಿದ ಎಣ್ಣೆ ಬಳಸಿ ತಯಾರಿಸುತ್ತಿರುವ ಆಹಾರಗಳ ಬಗ್ಗೆ ಕಿಡಿಕಾರಿದ್ದಾರೆ. ಸದ್ಯ ವಿಡಿಯೋ 3.8 ಮಿಲಿಯನ್ ವೀಕ್ಷಣೆ ಪಡೆದಿದ್ದು, 38 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ.
ಇದನ್ನೂ ಓದಿ:
ಭೂಮಿಯ ಮೇಲೆ ನಡೆದಾಡುತ್ತಿರುವ ಜಗತ್ತಿನ ಹಿರಿಯಣ್ಣ ಈ ಜೋನಾಥನ್! ಇಲ್ಲಿದೆ 190 ವರ್ಷದ ಅವನ ಕುತೂಹಲಕಾರಿ ಪರಿಚಯ
Published On - 4:22 pm, Fri, 14 January 22