ಹೆಂಡತಿ ಕೈಯಲ್ಲಿದ್ದ ಐಸ್ ಕ್ರೀಮ್ ತಿನ್ನಲು ಪತಿ ಉಪಯೋಗಿಸಿದ ಟ್ರಿಕ್ ಏನು ಗೊತ್ತಾ? ವಿಡಿಯೋ ನೋಡಿ
ಲ್ಲೊಂದು ದಂಪತಿಯ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಪತಿ ತನ್ನ ಚಾಣಾಕ್ಷತನದಿಂದ, ತರಲೆ ಮಾಡುತ್ತಾ ಹೆಂಡತಿಯ ಕೈಯಲ್ಲಿದ್ದ ಐಸ್ಕ್ರೀಮ್ ಅನ್ನು ಹೇಗೆ ತಿನ್ನುತ್ತಾನೆ ಎನ್ನುವುದನ್ನು ತೋರಿಸಲಾಗಿದೆ.
ಸಾಮಾಜಿಕ ಜಾಲತಾಣ ಎಲ್ಲ ರೀತಿಯ ವಿಡಿಯೋಗಳಿಗೆ ಪ್ಲಾಟ್ ಫಾರ್ಮ್ ಇದ್ದಂತೆ. ತಮಾಷೆಯ ವಿಡಿಯೋಗಳಿರಬಹುದು, ಹೊಸ ವಿಚಾರಗಳನ್ನು ಹಂಚಿಕೊಳ್ಳಲು, ಅನುಭವವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ. ಕೆಲವು ತಮಾಷೆಯ ವಿಡಿಯೋಗಳಂತೂ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಇಲ್ಲೊಂದು ದಂಪತಿಯ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಪತಿ ತನ್ನ ಚಾಣಾಕ್ಷತನದಿಂದ, ತರಲೆ ಮಾಡುತ್ತಾ ಹೆಂಡತಿಯ ಕೈಯಲ್ಲಿದ್ದ ಐಸ್ಕ್ರೀಮ್ ಅನ್ನು ಹೇಗೆ ತಿನ್ನುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಇದು ಜೋಡಿಯ ನಡುವೆ ಇರುವ ಪ್ರೀತಿಯ ಸಂವಹನವನ್ನು ವಿವರಿಸುತ್ತದೆ. ಆನ್ಲೈನ್ ಕಂಟೆಂಟ್ ಕ್ರಿಯೇಟರ್ ಯಾಮಿನಿ ಮತ್ತು ಪಿಯೂಷ್ ಅವರ ಜಂಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
View this post on Instagram
ವಿಡಿಯೋ ಹಂಚಿಕೊಂಡ ದಂಪತಿ ಚಳಿಗಾಲದಲ್ಲಿ ಐಸ್ಕ್ರೀಮ್ ತಿನ್ನುವ ಖುಷಿಯೇ ಬೇರೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ವಿಡಿಯೋದಲ್ಲಿ ಮೊದಲು ಕ್ಯಾಂಡಿ ಐಸ್ಕ್ರೀಮ್ ಅನ್ನು ಕವರ್ನಿಂದ ತೆಗೆದು ಕೆಳಕ್ಕೆ ಮೇಲಕ್ಕೆ ಮಾಡುವುದು ಕಾಣುತ್ತದೆ. ನಂತರ ಯಾಮಿನಿ ಅವರು ಪತಿಯ ಕಡೆಗೆ ಐಸ್ಕ್ರೀಮ್ ತಿರುಗಿಸಿದ ತಕ್ಷಣ ಪಿಯೂಷ್ ಅವರು ಐಸ್ಕ್ರೀಮ್ ಅನ್ನು ತಿನ್ನುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡು ಕೆಲವೇ ದಿನಗಳಲ್ಲಿ 3.3 ಲಕ್ಷ ವೀಕ್ಷಣೆ ಪಡೆದಿದ್ದು, ಇನ್ನೂ ವೈರಲ್ ಆಗುತ್ತಲೇ ಇದೆ.
ಇದನ್ನೂ ಓದಿ:
Published On - 6:51 pm, Fri, 14 January 22