ಆಸ್ಪತ್ರೆಯಿಂದ ಬಿಡುಗಡೆಯಾದ ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​: ವಿಡಿಯೋ ನೋಡಿ ಪ್ರತಿಕ್ರಿಯಿಸಿದ ರಾಪರ್​ ಬಾದ್​​ ಷಾ

ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡ ದಿರ್ಡೋ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​: ವಿಡಿಯೋ ನೋಡಿ ಪ್ರತಿಕ್ರಿಯಿಸಿದ ರಾಪರ್​ ಬಾದ್​​ ಷಾ
ಸಹದೇವ್​ ದಿರ್ಡೋ ಮತ್ತು ಬಾದ್​ ಷಾ
Follow us
TV9 Web
| Updated By: Pavitra Bhat Jigalemane

Updated on: Jan 14, 2022 | 6:02 PM

ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡ ದಿರ್ಡೋ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸಹದೇವ್​ ಡಿಸೆಂಬರ್​ 28ರಂದು ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಹದೇವ್​ ಅವರ ವಿಡಿಯೋಗೆ ಬಾಲಿವುಡ್​ ರಾಪರ್​ ಬಾದ್​ ಶಾ ಪ್ರತಿಕ್ರಿಯಿಸಿದ್ದಾರೆ.

ಸಹದೇವ್​ ದಿರ್ಡೋ ತಮ್ಮ ಬಚ್ ಪನ್​ ಕಾ ಪ್ಯಾರ್​ ಹಾಡಿನ ಮೂಲಕ 2021ರ ಜುಲೈನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನ ಮೂಡಿಸಿದ್ದರು. ರಾತ್ರಿ ಬೆಳಗಾಗುವುದರೊಳಗೆ ದೇಶಾದ್ಯಂತ ಹೊಸ ಟ್ರೆಂಡ್​ ಕ್ರಿಯೇಟ್​ ಮಾಡಿದ್ದರು. ದಿರ್ಡೋ ಹಾಡು ಕೇಳಿ ಬಾಲಿವುಡ್​ ರಾಪ್​ ಸಿಂಗರ್​ ಬಾದ್​ ಷಾ ಕೂಡ ಮನಸೋತು ಅವರನ್ನು ಭೇಟಿ ಮಾಡಿದ್ದರು. ಅಷ್ಟೇ ಅಲ್ಲದೆ ಅವರ ಬಚ್​ ಪನ್​ ಕಾ ಪ್ಯಾರ್​ ಹಾಡಿಗೆ ರಾಪ್​ ಸಂಗೀತವನ್ನು ಮಿಕ್ಸ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ಸಹದೇವ್​ ಅವರಿಗೆ ಅಪಘಾತವಾದ ಸಂದರ್ಭದಲ್ಲಿ ಬಾದ್​ ಷಾ ಅವರು ಕೂಡ ಬೇಗ ಗುಣಮುಖವಾಗುವಂತೆ ಕೋರಿ ಹಾರೈಸಿದ್ದರು. ಇದೀಗ ಸಹದೇವ್​ ಚೇತರಿಕೆಯ ಬಳಿಕ ಹಂಚಿಕೊಂಡ ವಿಡಿಯೋಗೂ ಪ್ರತಿಕ್ರಿಯಿಸಿದ್ದಾರೆ. ಸಹದೇವ್​ ಅವರ ವಿಡಿಯೋ ವೈರಲ್​​ ಅಗಿದ್ದು, 89 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು 60 ಸಾವಿರ ಲೈಕ್ಸ್​ ಪಡೆದಿದೆ.

ಇದನ್ನೂ ಓದಿ:

ಬೀದಿ ಬದಿ ವ್ಯಾಪಾರಿಯ ಚಾಟ್ಸ್​ ತಯಾರಿಕೆ ನೋಡಿ ಮೂಗುಮುರಿದ ನೆಟ್ಟಿಗರು: ಸ್ಟ್ರೀಟ್​ ಫುಡ್​ ತಯಾರಿಕೆಯ ವಿಡಿಯೋ ವೈರಲ್​