ಒಂದು ಕಾಡಿನಲ್ಲಿ ಆರು ಸಿಂಹಿಣಿಗಳ ಜೊತೆ ರಾಜಾರೋಷವಾಗಿ ನಡೆಯುವ ಮಹಿಳೆ ಎಂಟೆದೆಯವಳಲ್ಲದೆ ಮತ್ತೇನು?

ಈ ವಿಡಿಯೋ ವೈರಲ್ ಆಗಿದೆ ಮತ್ತು ನೋಡಿದವರೆಲ್ಲ ಮಹಿಳೆಯ ಧ್ಯೆರ್ಯವನ್ನು ಕಂಡು ಅವಾಕ್ಕಾಗಿದ್ದಾರೆ. ಆಫ್ರಿಕಾದ ಒಂದು ಕಾಡಿನಲ್ಲಿ ಇದು ಶೂಟ್​ ಆಗಿದೆ. ಅಂದಹಾಗೆ ಈ ಮಹಿಳೆ ಕಾಡಿಗೆ ಹತ್ತಿರದ ಯಾವುದಾದರೂ ಹಳ್ಳಿಯವಳಾಗಿರಬಹುದು ಅಂತ ನೀವು ಅಂದುಕೊಳ್ಳುತ್ತಿದ್ದರೆ ನಿಮ್ಮ ಊಹೆ ತಪ್ಪು. ಅಸಲಿಗೆ ಆಕೆಯೊಬ್ಬ ಐಷಾರಾಮಿ ಪ್ರವಾಸಿಯಾಗಿದ್ದಾಳೆ.

ಒಂದು ಕಾಡಿನಲ್ಲಿ ಆರು ಸಿಂಹಿಣಿಗಳ ಜೊತೆ ರಾಜಾರೋಷವಾಗಿ ನಡೆಯುವ ಮಹಿಳೆ ಎಂಟೆದೆಯವಳಲ್ಲದೆ ಮತ್ತೇನು?
ಸಿಂಹಿಣಿಗಳೊಂದಿಗೆ ಮಾನವರೂಪಿ ಹೆಣ್ಣು ‘ಸಿಂಹ!’

ಸಿಂಹಿಣಿಗಳೊಂದಿಗೆ ಸಿಂಹಿಣಿ ಅನ್ನುವ ಟೈಟಲ್ ಈ ವಿಡಿಯೋಗೆ ಚೆನ್ನಾಗಿ ಸೂಟ್ ಆಗುತ್ತದೆ. ಸಿಂಹದ ಹೆಸರು ಕೇಳಿದಾಕ್ಷಣ ನಮ್ಮಲ್ಲಿ ನಡುಕ ಹುಟ್ಟುತ್ತದೆ. ಹಾಗೆ ನೋಡಿದರೆ ನಾವು ಸಿಂಹಗಳನ್ನು ನೋಡಿದ್ದಾದರೂ ಎಲ್ಲಿ? ಸರ್ಕಸ್​ ಮತ್ತು ಮೃಗಾಲಯಗಳಲ್ಲಿ, ಹೌದು ತಾನೆ? ಅಂದರೆ ಬಂಧಿಯಾಗಿರುವ ಮತ್ತು ಪಳಗಿಸಿದ ಸಿಂಹಗಳನ್ನು ಮಾತ್ರ ನಾವು ನೋಡಿದ್ದೇವೆ ಆದರೂ ಅವುಗಳ ಬಗ್ಗೆ ಹೆದರಿಕೆಯಿದೆ. ಆದರೆ ಇಲ್ಲೊಬ್ಬ ಮಹಿಳೆ ಇದ್ದಾಳೆ. ಆಕೆಯ ಸಾಹಸವನ್ನು ನೋಡಿ. ಒಂದಲ್ಲ, ಎರಡಲ್ಲ, ಆರು ಸಿಂಹಗಳೊಂದಿಗೆ ಕಾಡೊಂದರಲ್ಲಿ ಆರಾಮಾಗಿ, ನಿರಾತಂಕದಿಂದ ನಡೆದುಹೋಗುತ್ತಿದ್ದಾಳೆ (ಅವೆಲ್ಲ ಹೆಣ್ಣು ಸಿಂಹಗಳು). ಅವಿಷ್ಟು ಸಿಂಹಗಳು ತನ್ನ ಒಡಹುಟ್ಟಿದವರು ಎನ್ನುವಂತಿದೆ ಆಕೆಯ ನಡಿಗೆಯಲ್ಲಿರುವ ಧೋರಣೆ. ಕಿಂಚಿತ್ತೂ ಹೆದರಿಕೆಯಲ್ಲ. ನಡೆಯುತ್ತಾ ಆಕೆ ಕುಣಿಯುತ್ತಾಳೆ, ಯಾವುದೋ ಹಾಡು ಆಕೆ ಹೇಳುತ್ತಿರುಂತಿದೆ. ಒಂದು ಸಿಂಹಿಣಿಯ ಬಾಲವನ್ನು ಸಹ ಹಿಡಿದಿದ್ದಾಳೆ!

ಸಫಾರಿ ಗ್ಯಾಲರಿ ಈ ವಿಡಿಯೋ ಕ್ಲಿಪ್​​ ಅನ್ನು ಇನ್​​​ಸ್ಟಾಗ್ರಾಮ್ ನಲ್ಲಿ ಶೇರ್​ ಮಾಡಿದೆ. ‘ಬದುಕಿನಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಆಗಾಗ ಮಾಡುತ್ತಿರು. ಇಂಥದೊಂದು ಪ್ರಯತ್ನ ಮಾಡ್ತೀಯಾ?’ ಎಂಬ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ.

ಈ ವಿಡಿಯೋ ವೈರಲ್ ಆಗಿದೆ ಮತ್ತು ನೋಡಿದವರೆಲ್ಲ ಮಹಿಳೆಯ ಧ್ಯೆರ್ಯವನ್ನು ಕಂಡು ಅವಾಕ್ಕಾಗಿದ್ದಾರೆ. ಆಫ್ರಿಕಾದ ಒಂದು ಕಾಡಿನಲ್ಲಿ ಇದು ಶೂಟ್​ ಆಗಿದೆ. ಅಂದಹಾಗೆ ಈ ಮಹಿಳೆ ಕಾಡಿಗೆ ಹತ್ತಿರದ ಯಾವುದಾದರೂ ಹಳ್ಳಿಯವಳಾಗಿರಬಹುದು ಅಂತ ನೀವು ಅಂದುಕೊಳ್ಳುತ್ತಿದ್ದರೆ ನಿಮ್ಮ ಊಹೆ ತಪ್ಪು. ಅಸಲಿಗೆ ಆಕೆಯೊಬ್ಬ ಐಷಾರಾಮಿ ಪ್ರವಾಸಿಯಾಗಿದ್ದಾಳೆ. ಇಂಡಿಯಾ ಟುಡೆ ತನ್ನ ವರದಿಯೊಂದರಲ್ಲಿ ಆಕೆಯ ಹೆಸರು ಸ್ಕೀ ಎಂದು ಹೇಳಿದೆ.

ಆಕೆ ಎಲ್ಲಿಯವಳಾದರೂ ಆಗಿರಲಿ, ಹೆಸರು ಏನಾದರೂ ಆಗಿರಲಿ ಅರು ಸಿಂಹಿಣಿಗಳ ಜೊತೆ ರಾಜಾರೋಷವಾಗಿ ನಡೆದು ಹೋಗುತ್ತಿರುವವಳು ಎಂಟೆದೆಯವಳೇ ಆಗಿರುತ್ತಾಳೆ!!

ವಿಡಿಯೋವನ್ನು ಶೂಟ್​​ ಮಾಡಿದವರು ಯಾರು? ಅವರಿಗೆ ಭಯವಾಗಲಿಲ್ಲವೆ? ಅವರು ಯಾವುದಾದರೂ ಒಂದು ಭದ್ರವಾದ ಸ್ಥಳದಲ್ಲಿ ನಿಂತು ಶೂಟ್​ ಮಾಡಿದರೆ? ನಮಗೆ ಇನ್ನೂ ಗೊತ್ತಾಗಿಲ್ಲ ಮಾರಾಯ್ರೇ.

ಇದನ್ನೂ ಓದಿ:  ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Published On - 11:58 pm, Fri, 14 January 22

Click on your DTH Provider to Add TV9 Kannada