ಬಾಂಗ್ಲಾದೇಶದ ವಿವಾದಿತ ಬರಹಗಾರ್ತಿ ತಸ್ಲೀಮಾ ನಸ್ರೀಮ್ (Taslima Nasreen) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವ ಬದಲು ಸಾಕಷ್ಟು ಮಕ್ಕಳು ತಂದೆತಾಯಿ ಇಲ್ಲದೆ ಅನಾಥರಾಗಿದ್ದಾರೆ ಅಂತಹವರನ್ನು ದತ್ತು (Adopt) ಪಡೆಯಬಹುದು ಎಂದು ಟ್ವೀಟ್ ಮಾಡಿದ್ದಾರೆ. ನಿನ್ನೆಯಷ್ಟೇ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಗೂ ನಿಕ್ ಜೋನಸ್ (Nick Jonas) ಬಾಡಿಗೆ ತಾಯಿಯ (Surrogacy) ಮೂಲಕ ಮಗುವನ್ನು ಪಡೆದು ತಂದೆ ತಾಯಿಗಳಾಗಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಇದೀಗ ತಸ್ಲೀಮಾ ಅವರು ಯಾವುದೇ ಹೆಸರನ್ನು ಉಲ್ಲೇಖಿಸದೆ ಮಗುವನ್ನು ಪಡೆಯುವುದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸದ್ಯ ತಸ್ಲೀಮಾ ಟ್ವೀಟ್ ಹೊಸ ಸಂಚಲನ ಮೂಡಿಸಿದೆ.
I won’t accept surrogacy until rich women become surrogate mom.I won’t accept burqa until men wear it out of love.I won’t accept prostitution until male prostitutions r built & men wait for female customers.Otherwise surrogacy,burqa,prostitution r just exploitation of women& poor
— taslima nasreen (@taslimanasreen) January 22, 2022
ಟ್ವೀಟ್ ಮಾಡುವ ವೇಳೆ ಯಾವುದೇ ಸೆಲೆಬ್ರಿಟಿಗಳ ಹೆಸರನ್ನು ಹೇಳದೆ ಅನಾಥವಾಗಿರುವ ಮಗುವನ್ನು ದತ್ತು ಪಡೆಯುವ ಬದಲಿಗೆ ಬಾಡಿಗೆ ತಾಯ್ತನದ ಮೂಲಕ ಶಿಶುಗಳನ್ನು ಪಡೆಯುತ್ತಾರೆ ಎಂದು ಟ್ವೀಟರ್ನಲ್ಲಿ ಕಾಮೆಂಟ್ ಮಾಡಿದ್ದಾರೆ. ಮುಂದುವರೆದು ಬಡ ಮಹಿಳೆಯರು ಇರುವುದರಿಂದ ಬಾಡಿಗೆ ತಾಯ್ತತನ ಸಾಧ್ಯವಾಗುತ್ತಿದೆ. ಶ್ರೀಮಂತರು ತಮ್ಮ ಹಿತಾಸಕ್ತಿಗಾಗಿ ಸಮಾಜದಲ್ಲಿನ ಬಡತವನ್ನು ಅವರ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಾರೆ. ನಿಮಗೆ ಮಕ್ಕಳನ್ನು ಬೆಳೆಸುವ ಆಸೆಯಿದ್ದರೆ ಮನೆಯಿಲ್ಲದ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಿ. ಮಕ್ಕಳು ನಿಮ್ಮ ಗುಣಗಳನ್ನು ಅನುವಂಶಿಕವಾಗಿ ಹೊಂದಿರಬೇಕು. ಈ ರೀತಿ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವುದು ಕೇವಲ ಸ್ವಾರ್ಥಕ್ಕಾಗಿ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಬಾಡಿಗೆ ತಾಯಿಯಿಂದ ಮಕ್ಕಳನ್ನುಪಡೆಯುವವರು ಸ್ವಂತ ಮಕ್ಕಳನ್ನು ಪಡೆದ ರೀತಿ ಅನುಭವವನ್ನು ಹೊಂದಿರುತ್ತಾರೆಯೇ? ಜನ್ಮ ನೀಡಿದ ತಾಯಿಯು ಕೂಡ ಮಗುವನ್ನು ನೀಡಿ ಸಮಾಧಾನವಾಗಿ ಇರಲು ಸಾಧ್ಯವೇ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಟ್ವಿಟರ್ನಲ್ಲಿ ತಸ್ಲೀಮಾ ಟ್ವೀಟ್ ವಿರುದ್ದ ಕೆಲವರು ಅಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳನ್ನು ಪಡೆಯುವ ವಿಚಾರ ಗಂಡ ಹೆಂಡತಿಗೆ ಬಿಟ್ಟ ವಿಚಾರ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ತಸ್ಲೀಮಾ ಹೇಳಿಕೆಯನ್ನು ಒಪ್ಪಿಕೊಂಡು ರೀಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸದ್ಯ ಬಾಲಿವುಡ್ನಲ್ಲಿ ತಂದೆ ತಾಯಿಯಾಗಿರಿವ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಸಖತ್ ಸುದ್ದಿಯಲ್ಲಿದ್ದಾರೆ.
ತಸ್ಲೀಮಾ ನಸ್ರೀನ್ ಬಾಂಗ್ಲಾದೇಶದ ಜಾಗೃತ ಸ್ತ್ರೀ ಶಕ್ತಿಯ ಸಂಕೇತ ಎಂದು ಗುರುತಿಸಿಕೊಂಡಿದ್ದಾರೆ. ಜೊತೆಗೆ ಬಾಂಗ್ಲಾದೇಶದ ವಿವಾದಿತ ಲೇಖಕಿಯೆಂದೇ ಹೆಸರುಪಡೆದಿದ್ದಾರೆ. ಬಾಂಗ್ಲಾದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಈಕೆ ತಮ್ಮ ನಲವತ್ತೇಳರ ಹರೆಯದಲ್ಲಿ ಲಜ್ಜಾ ಎಂಬ ಕಾದಂಬರಿಯನ್ನು ಬರೆಯುವುದರ ಮೂಲಕ ವಿವಾದಕ್ಕೆ ಕಾರಣವಾಗಿ ಗಡಿಪಾರು ಕೂಡ ಆಗಿದ್ದರು.
Published On - 10:02 am, Sun, 23 January 22