Viral Post: ‘ನನ್ನನ್ನು ಭಯ್ಯಾ ಎಂದು ಕರೆಯಬೇಡಿ’: ಕ್ಯಾಬ್‌ನಲ್ಲಿ ಕಠಿಣ ನಿಯಮಾವಳಿ ರೂಪಿಸಿದ ಡ್ರೈವರ್

ಬೆಂಗಳೂರಿನ ಕ್ಯಾಬ್ ಡ್ರೈವರ್ ಒಬ್ಬರು ತಮ್ಮ ಕಾರಿನಲ್ಲಿ ಪ್ರಯಾಣಿಕರಿಗಾಗಿ ಖಡಕ್ ನಿಯಮಾವಳಿಗಳನ್ನು ಮಾಡಿದ್ದಾರೆ. ಇದೀಗ ಆ ಪೋಸ್ಟ್​​​​​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ನಿಯಮಗಳು ಕ್ಯಾಬ್ ಮಾಲೀಕತ್ವ, ಗೌರವಯುತ ವರ್ತನೆ, ಹಾಗೂ ಚಾಲಕರನ್ನು ಭಯ್ಯಾ ಎಂದು ಕರೆಯದಂತೆ ಸೂಚಿಸುತ್ತವೆ. ರೆಡ್ಡಿಟ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಚಾಲಕರ ಪರ ನಿಂತಿದ್ದಾರೆ. ಇದು ಪ್ರಯಾಣಿಕರು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯ ಎಂದು ಹೇಳಿದ್ದಾರೆ.

Viral Post: ನನ್ನನ್ನು ಭಯ್ಯಾ ಎಂದು ಕರೆಯಬೇಡಿ: ಕ್ಯಾಬ್‌ನಲ್ಲಿ ಕಠಿಣ ನಿಯಮಾವಳಿ ರೂಪಿಸಿದ ಡ್ರೈವರ್
ವೈರಲ್​​ ಪೋಸ್ಟ್​

Updated on: Nov 24, 2025 | 2:17 PM

ಬೆಂಗಳೂರಿನ ಪ್ರಯಾಣಿಕರೊಬ್ಬರು ಕ್ಯಾಬ್‌ನ ಡ್ರೈವರ್​​​​ ಸೀಟ್​​​​ ಹಿಂದೆ ಅಂಟಿಸಿರುವ ಪೋಸ್ಟರ್​​ ಬಗ್ಗೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಕಾರಣವಾಗಿದೆ. ನೆಟ್ಟಿಗರು ಕೂಡ ಈ ಬಗ್ಗೆ ಕಮೆಂಟ್​ ಮಾಡಿದ್ದಾರೆ. ಕ್ಯಾಬ್​​ ಡ್ರೈವರ್​​​ ಪ್ರಯಾಣಿಕರಿಗೆ ಕೆಲವೊಂದು ನಿಯಮಗಳನ್ನು (Bangalore cab rules) ಪಾಲಿಸುವಂತೆ ಖಡಕ್​​​​​​​ ಆಗಿ ಹೇಳಿದ್ದಾರೆ. ಈ ನಿಯಮಗಳನ್ನು ಕೆಲವೊಂದು ಪ್ರಯಾಣಿಕರು ಮೆಚ್ಚಿಸಿಕೊಂಡಿದ್ದಾರೆ. ಇಂತಹ ನಿಯಮಗಳನ್ನು ಕ್ಯಾಬ್​​​ನಲ್ಲಿ ಬೇಕು ಎಂದು ಹೇಳಿದ್ದಾರೆ. ಈ ಪೋಸ್ಟ್​​​ ಎಲ್ಲರ ಗಮನ ಸೆಳೆದಿದೆ.

ಇದರಲ್ಲಿ 7 ನಿಮಯಗಳನ್ನು ಇವೆ. ಚಾಲಕನ ಸೀಟಿನ ಹಿಂದೆ ಈ ನೋಟಿಸ್​​​ನ್ನು ಹಂಚಿಕೊಳ್ಳಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ  ಖಡಕ್ ಆಗಿ ಎಚ್ಚರಿಸಲಾಗಿದೆ.  ಇದು ಡ್ರೈವರ್​​ಗಳು​​​ ದಿನನಿತ್ಯ ಎದುರಿಸುವ ಸಮಸ್ಯೆಯಾಗಿದೆ. ಆ 7 ನಿಯಮಗಳೇನು ಎಂಬುದನ್ನು ಇಲ್ಲಿ ಹೇಳಲಾಗಿದೆ.

ಇಲ್ಲಿದೆ ನೋಡಿ ಪೋಸ್ಟ್:

Found this in my cab yesterday
byu/CluelessFounder_ inbangalore

ಏಳು ನಿಯಮಗಳು ಇಲ್ಲಿದೆ:

1.ನೀವು ಕ್ಯಾಬ್‌ನ ಮಾಲೀಕರಲ್ಲ

2.ಕ್ಯಾಬ್ ಚಾಲನೆ ಮಾಡುವ ವ್ಯಕ್ತಿಯೇ ಕ್ಯಾಬ್‌ನ ಮಾಲೀಕ

3.ಸಭ್ಯವಾಗಿ ಮಾತನಾಡಿ ಮತ್ತು ಗೌರವದಿಂದ ನಡೆದುಕೊಳ್ಳಿ

4.ನಿಧಾನವಾಗಿ ಕ್ಯಾಬ್ ಬಾಗಿಲನ್ನು ಮುಚ್ಚಿ

5.ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ. ದಯವಿಟ್ಟು ಅದನ್ನು ನಮಗೆ ತೋರಿಸಬೇಡಿ ಏಕೆಂದರೆ ನೀವು ನಮಗೆ ಹೆಚ್ಚು ಹಣ ನೀಡುತ್ತಿಲ್ಲ

6.ನನ್ನನ್ನು ಭಯ್ಯಾ ಅಂತ ಕರೆಯಬೇಡ.

7.ವೇಗವಾಗಿ ಓಡಿಸು ಎಂದು ಹೇಳಬೇಡಿ.

ಇದನ್ನೂ ಓದಿ: ಇಟಾಲಿಯನ್ ಕಾನ್ಸುಲ್ ಜನರಲ್ ಹೃದಯ ಗೆದ್ದ ಬೆಂಗಳೂರು ಮಸಾಲೆ ದೋಸೆ

ಈ ಪೋಸ್ಟ್​​​ಗೆ ನೆಟ್ಟಿಗರು ಹೇಳಿದ್ದೇನು?

ಒಬ್ಬ ನೆಟ್ಟಿಗ ನಾನು ಈ ಪೋಸ್ಟ್​​ನ್ನು ಬೆಂಬಲಿಸುತ್ತೇನೆ. ಕೆಲವು ಪ್ರಯಾಣಿಕರು ಕ್ಯಾಬ್​​ಗಳನ್ನು ತಮ್ಮ ಸ್ವಂತದ್ದು ಎಂಬಂತೆ ವರ್ತಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ವರ್ತನೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಈ ಸಾಲು ನೋಡಿದಾಗ ತುಂಬಾ ನಗು ಬಂತು. ಇದು ಕಠಿಣವಾಗಿದ್ದರು, ಪ್ರಾಮಾಣಿಕವಾಗಿದೆ ಎಂದು ಹೇಳಿದ್ದಾರೆ. ಕೆಲವೊಂದು ಪ್ರಯಾಣಿಕರು ವೇಗವಾಗಿ ಹೋಗಿ, ಶಾರ್ಟ್‌ಕಟ್‌ ಇಲ್ವಾ? ಎಂದು ಕೇಳುವವರಿಗೆ ಈ ಪೋಸ್ಟ್​​ ಸರಿಯಾಗಿದೆ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲ ಓಕೆ ಆದ್ರೆ ಈ ಭಯ್ಯಾ ಎಂದು ಯಾಕೆ ಕರೆಯಬಾದರು ಎಂಬುದು ನನಗೆ ಅರ್ಥವಾಗಿಲ್ಲ ಎಂದು ಕಮೆಂಟ್​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ