Optical Illusion: ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಉಭಯವಾಸಿ ಜೀವಿಯನ್ನು ಪತ್ತೆ ಹಚ್ಚಿ
ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ಆಟಗಳು ವೈರಲ್ ಆಗುತ್ತಿರುತ್ತವೆ. ಬುದ್ಧಿವಂತಿಕೆಗೆ ಸವಾಲೊಡ್ಡುವ ಇಂತಹ ಟ್ರಿಕ್ಕಿ ಆಪ್ಟಿಕಲ್ ಇಲ್ಯೂಷನ್ ಆಟಗಳನ್ನು ನೀವು ಈಗಾಗಲೇ ಆಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಕಠಿಣ ಸವಾಲಿನ ಒಗಟಿನ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿ ಕಪ್ಪೆ ಎಲ್ಲಿದೆ ಎಂದು ನೀವು ಹೇಳಬಲ್ಲಿರಾ.

ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು, ಬ್ರೈನ್ ಟೀಸರ್ (brain teaser) ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಕುತೂಹಲಕಾರಿ ಈ ಒಗಟಿನ ಆಟಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಮೆದುಳಿಗೆ ವ್ಯಾಯಾಮವನ್ನು ನೀಡುವ ಚಿತ್ರಗಳನ್ನು ಅನೇಕರು ಇಷ್ಟಪಟ್ಟು ಬಿಡಿಸುವತ್ತ ಗಮನ ಹರಿಸುತ್ತಾರೆ. ಇದೀಗ ನಿಮ್ಮ ವೀಕ್ಷಣಾ ಸಾಮರ್ಥ್ಯಕ್ಕೆ ಸವಾಲು ಹಾಕುವಂತಿದೆ ಈ ಚಿತ್ರ. ಸುರಿಯುತ್ತಿರುವ ಮಳೆಯ ನಡುವೆ ಜನರು ಛತ್ರಿ ಹಿಡಿದು ನಿಂತುಕೊಂಡಿದ್ದಾರೆ. ಇಲ್ಲಿ ಕಪ್ಪೆಯೊಂದು ಅಡಗಿ ಕುಳಿತಿದ್ದು, 15 ಸೆಕೆಂಡುಗಳಲ್ಲಿ ನೀವು ಈ ಉಭಯವಾಸಿ ಜೀವಿಯನ್ನು ಹುಡುಕಬೇಕು. ಈ ಟ್ರಿಕ್ಕಿ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.
ಇಲ್ಯೂಷನ್ ಚಿತ್ರವು ಏನು ಹೇಳುತ್ತದೆ?

ಇಲ್ಯೂಷನ್ ಚಿತ್ರಗಳೇ ಹಾಗೆ, ನಿಮ್ಮ ಕಣ್ಣಿಗೆ ಮೋಸ ಮಾಡುತ್ತದೆ. ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುತ್ತದೆ. ಈ ಚಿತ್ರವು ಕೂಡ ಅದೇ ರೀತಿಯಿದೆ. ಸುರಿಯುತ್ತಿರುವ ಮಳೆಯಲ್ಲಿ ಜನರು ಛತ್ರಿ ಹಿಡಿದು ನಿಂತುಕೊಂಡಿರುವುದನ್ನು ಕಾಣಬಹುದು. ನೆಲದ ಮೇಲೆ ಅಲ್ಲಲ್ಲಿ ಮಳೆ ನೀರು ನಿಂತಿದ್ದು, ಒಣ ಎಲೆಗಳು ನೆಲೆಯ ಮೇಲೆ ಹರಡಿಕೊಂಡಿರುವುದನ್ನು ಕಾಣಬಹುದು. ಈ ಜನರ ನಡುವೆ ಸಾಕು ಪ್ರಾಣಿಯಾದ ಶ್ವಾನವೊಂದು ನಿಂತುಕೊಂಡಿದೆ. ಇದೆಲ್ಲದರ ನಡುವೆ ಹಸಿರು ಬಣ್ಣದ ಕಪ್ಪೆ ಅವಿತು ಕುಳಿತುಕೊಂಡಿದೆ. ನೀವು ಜಸ್ಟ್ 15 ಸೆಕೆಂಡುಗಳಲ್ಲಿ ಈ ಒಗಟು ಬಿಡಿಸಿ ಕಪ್ಪೆ ಎಲ್ಲಿದೆ ಎಂದು ಹೇಳಬೇಕು. ಈ ಇಲ್ಯೂಷನ್ ಚಿತ್ರ ಬಿಡಿಸಲು ಸಾಧ್ಯವೇ ಎಂದು ನೋಡಿ.
ಈ ಸವಾಲನ್ನು ಸ್ವೀಕರಿಸಿದ್ದೀರಾ?
ಈ ಚಿತ್ರದಲ್ಲಿ ಒಂದಷ್ಟು ಜನರು, ಪ್ರಾಣಿಯನ್ನು ನೀವು ಗಮನಿಸಿದ್ದೀರಿ ಅಲ್ವಾ. ಆದರೆ ಕಪ್ಪೆಯನ್ನು ಗುರುತಿಸುವುದೇ ಇಲ್ಲಿರುವ ಬಹುದೊಡ್ಡ ಸವಾಲು. ಈ ಚಿತ್ರದತ್ತ ಕಣ್ಣು ಹಾಯಿಸಿ ಇಲ್ಲಿರುವ ಉಭಯವಾಸಿ ಜೀವಿಯನ್ನು ಜಸ್ಟ್ 15 ಸೆಕೆಂಡುಗಳಲ್ಲಿ ಪತ್ತೆಹಚ್ಚಲು ಸಾಧ್ಯವೇ ಎಂದು ನೋಡಿ.
ಇದನ್ನೂ ಓದಿ:ಈ ಉದ್ಯಾನವನದಲ್ಲಿ ಅಡಗಿರುವ ಹೆಬ್ಬಾವನ್ನು ಗುರುತಿಸಬಲ್ಲಿರಾ
ಉಭಯವಾಸಿ ಜೀವಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತೇ?
ಇಂಟರ್ನೆಟ್‌ನಲ್ಲಿ ನೋಡುಗರನ್ನು ಗೊಂದಲಕ್ಕೀಡು ಮಾಡುವ ಚಿತ್ರಗಳೇ ತುಂಬಿದೆ. ಈ ಚಿತ್ರವು ನಿಮ್ಮ ಕಣ್ಣಿಗೆ ಸಾಮಾನ್ಯವೆಂದು ತೋರುತ್ತದೆ. ಈ ಚಿತ್ರವು ಕೂಡ ಹಾಗೆಯೇ ಇದ್ದು, ನಿಮ್ಮಿಂದ ಉಭಯವಾಸಿಯಾದ ಕಪ್ಪೆಯನ್ನು ಗುರುತಿಸಲು ಸಾಧ್ಯವಾಗಿಲ್ಲವೇ, ಹೆಚ್ಚು ಚಿಂತಿಸಬೇಡಿ. ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಕಪ್ಪೆಯನ್ನು ಹಳದಿ ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




