Optical Illusion: ಫೋಟೋದಲ್ಲಿ ಅಡಗಿರುವ ಕರಡಿಯನ್ನು ಹುಡುಕಿ

ನೀವು ಹತ್ತಿರದಿಂದ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕರಡಿಯನ್ನು ಗುರುತಿಸಬಹುದು. ಆ ಕರಡಿಯನ್ನು ಗುರುತಿಸಲು ಅನೇಕ ಜನರು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಅದನ್ನು ಗುರುತಿಸಬಲ್ಲರು. ಕರಡಿ ಎಲ್ಲಿ ಅಡಗಿದೆ ಎಂದು ಕಂಡುಹಿಡಿಯಲು ಪ್ರಯತ್ನಿಸಿ. ನಿಮಗೆ ಕಷ್ಟ ಅನಿಸಿದರೆ. ಒಂದು ಕ್ಲೂ ಕೊಡುತ್ತೇವೆ.

Optical Illusion: ಫೋಟೋದಲ್ಲಿ ಅಡಗಿರುವ ಕರಡಿಯನ್ನು ಹುಡುಕಿ
Optical Illusion

Updated on: Apr 02, 2024 | 6:50 PM

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಮನರಂಜನೆ ಮತ್ತು ಜ್ಞಾನಕ್ಕೆ ವೇದಿಕೆಯಾಗುತ್ತಿವೆ. ನಿಮ್ಮ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕೆಲವು ಫೋಟೋಗಳಲ್ಲಿ ಉತ್ತರಗಳನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗಿರುತ್ತದೆ. ತೀರಾ ಹತ್ತಿರದಿಂದ ನೋಡಿದರೆ ಮಾತ್ರ ಉತ್ತರವನ್ನು ಕಂಡು ಹಿಡಿಯಬಹುದು. ಇದೀಗಾ ಅಂತದ್ದೇ ಫೋಟೋವೊಂದು ವೈರಲ್​​ ಆಗಿದ್ದು ನೀವು ಇದರಲ್ಲಿ ಉತ್ತರವನ್ನು ಕಂಡು ಹುಡುಕಬೇಕಿದೆ.

ಫೋಟೋದಲ್ಲಿ, ಒಬ್ಬ ವ್ಯಕ್ತಿ ಹಿಮ ಪ್ರದೇಶದಲ್ಲಿ ಮೊಣಕಾಲುಗಳ ಮೇಲೆ ಗನ್ ಹಿಡಿದುಕೊಂಡು ಭೇಟೆಗಾಗಿ ಕಾದು ಕುಳಿತಿರುವುದನ್ನು ಕಾಣಬಹುದು. ಅವನು ಇರುವ ಇಡೀ ಪ್ರದೇಶವು ಹಿಮದಿಂದ ಆವೃತವಾಗಿದೆ. ಕೊನೆಗೆ ದೂರದಲ್ಲಿರುವ ಮರಗಳೂ ಹಿಮದಿಂದ ಆವೃತವಾಗಿವೆ. ಆದರೆ, ಈ ಫೋಟೋದಲ್ಲಿ ಕರಡಿಯೊಂದು ಅಡಗಿಕೊಂಡಿದೆ. ಅದನ್ನು ಕಂಡುಹಿಡಿಯುವುದು ತುಂಬಾ ಕಷ್ಟ.

ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ

ನೀವು ಹತ್ತಿರದಿಂದ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಕರಡಿಯನ್ನು ಗುರುತಿಸಬಹುದು. ಆ ಕರಡಿಯನ್ನು ಗುರುತಿಸಲು ಅನೇಕ ಜನರು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಅದನ್ನು ಗುರುತಿಸಬಲ್ಲರು. ಕರಡಿ ಎಲ್ಲಿ ಅಡಗಿದೆ ಎಂದು ಕಂಡುಹಿಡಿಯಲು ಪ್ರಯತ್ನಿಸಿ. ನಿಮಗೆ ಕಷ್ಟ ಅನಿಸಿದರೆ. ಒಂದು ಕ್ಲೂ ಕೊಡುತ್ತೇವೆ. ಈ ಫೋಟೋವನ್ನು ತಲೆಕೆಳಗಾಗಿ ನೋಡಿದರೆ ಕರಡಿ ಎಲ್ಲಿದೆ ಎಂದು ತಿಳಿಯಬಹುದು. ಆದಾಗ್ಯೂ, ಕರಡಿಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಕೆಳಗಿನ ಫೋಟೋದಲ್ಲಿ ಉತ್ತರವಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us