Optical Illusions: ಬಂಡೆ ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಸರಿಯಾಗಿ ಗಮನಿಸಿ
ಈ ಚಿತ್ರವನ್ನು ನೀವು ಮೊದಲು ನೋಡಿದಾಗ ಬಂಡೆ ಕಲ್ಲು ಗಾಳಿಯಲ್ಲಿ ತೇಲಾಡುತ್ತಿರುವಂತೆ ನಿಮಗೆ ಕಾಣಿಸಬಹುದು. ಆದರೆ ಚಿತ್ರವನ್ನು ಸರಿಯಾಗಿ ಗಮನಿಸಿದಾಗ ಮಾತ್ರ ನಿಮಗೆ ವಾಸ್ತವವಾಗಿ ಚಿತ್ರ ಏನು ಎಂಬುದನ್ನು ತಿಳಿಯಲು ಸಾಧ್ಯ.
ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusions) ಸವಾಲಿನ ಆಟದಲ್ಲಿ ನಿಮಗೆ ಚಿತ್ರವನ್ನು ಮೊದಲು ನೋಡಿದಾಗ ಕಲ್ಲು ಗಾಳಿಯಲ್ಲಿ ತೇಲಾಡುವ ರೀತಿಯಲ್ಲಿ ಕಾಣಿಸುತ್ತಿರಬಹುದು. ಆದರೆ ಆ ಚಿತ್ರದಲ್ಲಿ ಕಲ್ಲು ಗಾಳಿಯಲ್ಲಿ ತೇಲಾಡುದಿಲ್ಲ ಬದಲಾಗಿ ನೀರಿನಲ್ಲಿದೆ ಎಂಬುದು ನಿಮಗೆ ತಿಳಿದಿದೆಯೇ? ಚಿತ್ರವನ್ನು ಕೆಲ ಹೊತ್ತು ಸರಿಯಾಗಿ ಗಮನಿಸಿದರೆ ಮಾತ್ರ ವಾಸ್ತವವಾಗಿ ಚಿತ್ರ ಏನು ಎಂಬುದನ್ನು ತಿಳಿಯಲು ಸಾಧ್ಯ.
ಇನ್ನೂ ನಿಮಗೆ ಚಿತ್ರದಲ್ಲಿ ಕಲ್ಲು ಆಕಾಶದಲ್ಲಿ ತೇಲಾಡುತ್ತಿರುವಂತೆಯೇ ಕಾಣಿಸುತ್ತಿದೆಯಾ? ಚಿತ್ರವನ್ನು ಸರಿಯಾಗಿ ಗಮಸಿನಿ. ಕಲ್ಲಿನ ಮೇಲೆ ಹುಲ್ಲು ಇರುವುದು ಕಾಣಬಹುದು. ಈ ಕಲ್ಲು ನೀರಿನಲ್ಲಿ ಅರ್ಧದಷ್ಟು ಮುಳುಗಿಸಿ. ಮುಂಭಾಗದಲ್ಲಿ ಕಲ್ಲಿನ ನೆರಳು ನೀರಿನಲ್ಲಿ ಪ್ರತಿಬಿಂಬಿಸುತ್ತಿದೆ.
This photo is an example of how optical illusions mess with your mind.
First you see a rock floating in the air and then… pic.twitter.com/lCSovxekX6
— Massimo (@Rainmaker1973) January 17, 2024
ಇದನ್ನೂ ಓದಿ: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠೆ ಕುರಿತು ಟೀಕಿಸುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ಇಲ್ಲಿದೆ ವಿಡಿಯೋ
ಈ ಆಪ್ಟಿಕಲ್ ಇಲ್ಯೂಷನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋವನ್ನು @Rainmaker1973 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋ ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ