ಇಸ್ಲಾಮಾಬಾದ್: ಈಗಾಗಲೇ 26 ಮದುವೆಯಾಗಿರುವ ಪಾಕಿಸ್ತಾನದ ವ್ಯಕ್ತಿಯೊಬ್ಬ (Pakistani Man) ತಾನು ಸಾಯುವ ಮುನ್ನ 100 ಮದುವೆ ಆಗುವ ಆಸೆ ಇದೆ ಎಂದು ಹೇಳಿಕೊಂಡಿದ್ದಾನೆ. 60 ವರ್ಷದ ಈ ವ್ಯಕ್ತಿ ಮದುವೆಯಾಗಿರುವ 26 ಮಹಿಳೆಯರಲ್ಲಿ 22 ಮಂದಿ ವಿಚ್ಛೇದನ ಪಡೆದಿದ್ದಾರೆ. ಬಹಳ ಚಿಕ್ಕ ವಯಸ್ಸಿನ ನಾಲ್ವರು ಹೆಂಡತಿಯರು ಈತನೊಂದಿಗೆ ಸದ್ಯಕ್ಕೆ ಇದ್ದಾರೆ. 60 ವರ್ಷದ ಈ ವೃದ್ಧ ಕೇವಲ ದಾಖಲೆಗೋಸ್ಕರ ನೂರು ಮದುವೆ ಆಗಬಯಸಿದ್ದಾನೆ ಎಂದುಕೊಳ್ಳದಿರಿ. ಈತ ಪ್ರತಿಯೊಬ್ಬ ಹೆಂಡತಿಯಿಂದಲೂ ಸಂತಾನ ಪಡೆಯುವ ಇಚ್ಛೆ ಹೊಂದಿದ್ದಾನೆ. ಈತನಿಗೆ ಈಗಾಗಲೇ 22 ಮಕ್ಕಳಿದ್ದಾರೆ.
ಈತನ ಬಗ್ಗೆ ಇನ್ನೂ ಒಂದು ಅಚ್ಚರಿ ಸಂಗತಿ ಇದೆ. ಈತ ಮದುವೆಯಾಗುವ ಹುಡುಗಿಗೆ ಸಂತಾನವಾದ ಕೂಡಲೇ ತಲಾಖ್ ಕೊಟ್ಟು ಕಳುಹಿಸುತ್ತಾನೆ. ಈತ ಈಗಾಗಲೇ ಡಿವೋರ್ಸ್ ಕೊಟ್ಟಿರುವ 22 ಮಹಿಳೆಯರಿಗೂ ಒಂದೊಂದು ಮಗು ಇದೆ. ಆ ಮಕ್ಕಳೆಲ್ಲಾ ತಮ್ಮ ಅಮ್ಮಂದಿರ ಜೊತೆ ಇವೆ. ಈತನಿಗೆ ಮದುವೆ ಆಗುವುದು, ಸಂತಾನ ಮಾಡುವುದೇ ನಿತ್ಯ ಕಾಯಕವಿದ್ದಂತಿದೆ. ಮಕ್ಕಳನ್ನು ಸಾಕುವ ಹೊಣೆಗಾರಿಕೆಯನ್ನು ವಿಚ್ಛೇದಿತ ಹೆಂಡತಿಯರಿಗೆ ಕೊಟ್ಟಂತಿದೆ. ಆದರೆ, ತಲಾಖ್ ಪಡೆದ ಹೆಂಡತಿಯರೆಲ್ಲರಿಗೂ ಈತ ಮನೆ ಕಟ್ಟಿಕೊಟ್ಟಿದ್ದಾನಂತೆ. ಜೀವನಾಂಶವನ್ನೂ ಕೊಟ್ಟಿದ್ದಾನಂತೆ.
ಇದನ್ನೂ ಓದಿ: ಅಯ್ಯೋ ನನಗೆ ಬಾಯ್ಫ್ರೆಂಡ್ ಇಲ್ಲ ಎಂದು ಕಣ್ಣೀರಿಟ್ಟ ಚೀನಾ ಯುವತಿ ವಿಡಿಯೋ ವೈರಲ್
ಈಗ ಈತನ ಜೊತೆ ಇರುವ ನಾಲ್ವರು ಹೆಂಡತಿಯರು 19-20 ವರ್ಷದವರು. ಈತನಿಗೆ 60 ವರ್ಷ ವಯಸ್ಸು. ಮಗು ಆದ ಕೂಡಲೇ ಈತ ಡಿವೋರ್ಸ್ ಕೊಡುತ್ತಾನೆಂದು ಗೊತ್ತಿದ್ದೂ ಈ ಹುಡುಗಿಯರು ಜೊತೆಯಲ್ಲಿದ್ದಾರೆ. ಇದೇ ಕಂಡೀಷನ್ ಹಾಕಿಯೇ ಈತ ಮದುವೆ ಮಾಡಿಕೊಳ್ಳುತ್ತಾನಂತೆ. ಈ ರೀತಿ ಮದುವೆಯಾಗುವುದು ಈತನ ಹವ್ಯಾಸ. ಈಗಾಗಲೇ 60ವರ್ಷದ ಈ ವ್ಯಕ್ತಿ ತನ್ನ ಶತವಿವಾಹದ ಸಂಕಲ್ಪ ಈಡೇರಬೇಕಾದರೆ ಇನ್ನೂ 74 ಮದುವೆಗಳನ್ನು ಆಗಬೇಕು. ಅಷ್ಟು ಸಂತಾನೋತ್ಪತ್ತಿ ಈತನಿಂದ ಸಾಧ್ಯವಾ ಎಂಬುದು ಪ್ರಶ್ನೆ.
Pakistan में ये चिचाजान 26 शादियाँ करके 22 लड़कियों को तलाक़ दे चुका है…कह रहा है कि ये मेरा शौंक है…100 शादियाँ करूँगा…सबको तलाक़ दूँगा… pic.twitter.com/YHPk09PXRa
— Jyot Jeet (@activistjyot) February 17, 2023
ಇನ್ನು, ವಿಶ್ವದಲ್ಲಿ ಅತಿಹೆಚ್ಚು ಮದುವೆಯಾದ ದಾಖಲೆಗೆ ಈ ಪಾಕಿಸ್ತಾನ ಸಮೀಪವೇ ಇದ್ದಾನೆ. ಸ್ಕಾಟ್ಲೆಂಡ್ನ ಗ್ಲಿನ್ ವುಲ್ಫ್ ಎಂಬ ವ್ಯಕ್ತಿ ತನ್ನ ಜೀವಮಾನದಲ್ಲಿ 31 ಮದುವೆ ಆದ ದಾಖಲೆ ಹೊಂದಿದ್ದರು. ಈ 31 ಮದುವೆಯಲ್ಲಿ ಪತ್ನಿಯರಾದವರು 29 ಮಂದಿ. 1997ರಲ್ಲಿ ವುಲ್ಫ್ ನಿಧನ ಹೊಂದಿದ್ದರು. ಅವರಿಗೆ ಮಕ್ಕಳು ಇದ್ದದ್ದು 19 ಮಂದಿ. ಪಾಕಿಸ್ತಾನದ ಈ 60 ವರ್ಷದ ವ್ಯಕ್ತಿ ಈಗಾಗಲೇ 26 ಮದುವೆ, 22 ಮಕ್ಕಳನ್ನು ಹೊಂದಿದ್ದಾನೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Tue, 21 February 23