AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯೋ ನನಗೆ ಬಾಯ್​ಫ್ರೆಂಡ್ ಇಲ್ಲ ಎಂದು ಕಣ್ಣೀರಿಟ್ಟ ಚೀನಾ ಯುವತಿ ವಿಡಿಯೋ ವೈರಲ್

ಸಾಮಾನ್ಯವಾಗಿ ನನಗೆ ಗರ್ಲ್​ಫ್ರೆಂಡ್ ಇಲ್ಲ ಎಂದು ಯುವಕರು ಕೊರಗುವುದನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ 28 ವರ್ಷದ ಯುವತಿ ತನಗೆ ಬಾಯ್​ಫ್ರೆಂಡ್​ ಇಲ್ಲ ಎಂದು ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಯ್ಯೋ ನನಗೆ ಬಾಯ್​ಫ್ರೆಂಡ್ ಇಲ್ಲ ಎಂದು ಕಣ್ಣೀರಿಟ್ಟ ಚೀನಾ ಯುವತಿ ವಿಡಿಯೋ ವೈರಲ್
ಚೀನಾ ಯುವತಿ
ನಯನಾ ರಾಜೀವ್
|

Updated on: Feb 19, 2023 | 1:19 PM

Share

ಸಾಮಾನ್ಯವಾಗಿ ನನಗೆ ಗರ್ಲ್​ಫ್ರೆಂಡ್ ಇಲ್ಲ ಎಂದು ಯುವಕರು ಕೊರಗುವುದನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ 28 ವರ್ಷದ ಯುವತಿ ತನಗೆ ಬಾಯ್​ಫ್ರೆಂಡ್​ ಇಲ್ಲ ಎಂದು ಕಣ್ಣೀರಿಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾನು ಹಲವು ಡೇಟಿಂಗ್ ಅಪ್ಲಿಕೇಷನ್​ಗಳ ಮೂಲಕ ಗೆಳೆಯನನ್ನು ಹುಡುಕಲು ಪ್ರಯತ್ನಿಸಿದೆ, ಯಾವುದರಿಂದಲೂ ಪ್ರಯೋಜನವಾಗಿಲ್ಲ. ಮತ್ತೆ ಪ್ರಯತ್ನಿಸುತ್ತೇನೆ ಎಂದಿದ್ದಾಳೆ.

ಆದರೆ ನಾನು ಖಿನ್ನತೆಗೆ ಒಳಗಾಗಿಲ್ಲ, ಮುಂದಿನ ದಿನಗಳಲ್ಲಿ ಸಂಗಾತಿಯನ್ನು ಪಡೆಯುವ ಭರವಸೆ ಇದೆ ಎಂದಿದ್ದಾಳೆ. ಚೀನಾದಲ್ಲಿ ಸೂಕ್ತ ಸಂಗಾತಿಯ ಕೊರತೆಯು ಹೆಣ್ಣುಮಕ್ಕಳನ್ನು ಕಾಡುತ್ತಿದೆ. 2019ರಲ್ಲಿ ಎರಡು ಚೀನಾದ ಕಂಪನಿಗಳು 30 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಡೇಟಿಂಗ್ ರಜೆಯನ್ನು ಘೋಷಿಸಿದ್ದವು.

ಮತ್ತಷ್ಟು ಓದಿ: Viral Video: 75 ವರ್ಷದ ಮಗನ ಹಾಡಿಗೆ ತಾಳ ಹಾಕಿದ 105 ವರ್ಷದ ತಂದೆ; ಇಂಟರ್ನೆಟ್ ಮೆಚ್ಚಿದ ವಿಡಿಯೋ

ಯುವತಿಯರು ಹೊರ ಜಗತ್ತಿಗೆ ಹೆಚ್ಚು ಸಂಪರ್ಕ ಇಲ್ಲದಿರುವುದರಿಂದ ಸಂಗಾತಿಯನ್ನು ಹುಡುಕಲು ಕಷ್ಟವಾಗುತ್ತಿದೆ. ಈ ವಾರದ ಆರಂಭದಲ್ಲಿ, ಚೀನಾದಲ್ಲಿ ಹೆಸರಿಸದ ಮಹಿಳೆಯೊಬ್ಬರು ತನ್ನ ಅತ್ತಿಗೆಯೊಂದಿಗೆ ದಿನನಿತ್ಯದ ಜೀವನದಲ್ಲಿ ಅನುಭವಿಸುವ ಒತ್ತಡಗಳ ಬಗ್ಗೆ ಚಾಟ್ ಮಾಡುತ್ತಿದ್ದ ವೀಡಿಯೊ ವೈರಲ್ ಆಗಿತ್ತು.

ನಾನು ನನ್ನ ಹೆತ್ತವರನ್ನು ನಿರಾಶೆಗೊಳಿಸಲಾರೆ, ಆದ್ದರಿಂದ ಸಂಗಾತಿ ಹುಡುಕುವ ಕೆಲಸವನ್ನು ಮುಂದುವರೆಸುತ್ತೇನೆ ಎಂದಿದ್ದಾಳೆ. ನಾನು ಅವಳಿಗಿಂತ ಎರಡು ವರ್ಷ ದೊಡ್ಡವನು, ಹಾಗಾಗಿ ಅವರ ಆತಂಕವನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ