
ಬೆಂಗಳೂರು, ಜನವರಿ 13: ರಸ್ತೆಯ ತುಂಬಾ ಗಿಜಿಗುಟ್ಟುವ ವಾಹನಗಳು, ಒಂದರ ಹಿಂದೆ ಒಂದರಂತೆ ಸಾಲಾಗಿ ಬಂದು ಬಿಟ್ಟರೆ ಮುಗಿದೇ ಹೋಯ್ತು. ಎಷ್ಟೇ ಆರಾಮಾಗಿ ರಸ್ತೆ ದಾಟುವವರು ಒಂದು ಕ್ಷಣ ಕಸಿವಿಸಿಗೊಳ್ಳುತ್ತಾರೆ. ಇನ್ನು ಬೆಂಗಳೂರಿನ (Bengaluru) ಸಂಚಾರ ದಟ್ಟಣೆಯ ನಡುವೆ ರಸ್ತೆ ದಾಡುವ ಬಗ್ಗೆ ಕೇಳಬೇಕೇ. ಇಲ್ಲೊಬ್ಬ ವಿದೇಶಿ ಮಹಿಳೆಯದು (foreign woman) ಇದೇ ರೀತಿಯ ಪರಿಸ್ಥಿತಿ. ವಿದೇಶಿ ಮಹಿಳೆಯೂ ತನ್ನ ಸ್ನೇಹಿತೆಯ ಜತೆಗೆ ಬೆಂಗಳೂರಿನಲ್ಲಿ ಜನದಟ್ಟಣೆಯ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ವಿದೇಶಿ ಮಹಿಳೆಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
lost.with.ines ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಇನೆಸ್ ಫರಿಯಾ ಎಂಬ ವಿದೇಶಿ ಮಹಿಳೆ ತನ್ನ ಸ್ನೇಹಿತೆಯ ಜತೆಗೆ ಬೆಂಗಳೂರಿನಲ್ಲಿ ಜನನಿಬಿಡ ರಸ್ತೆಯನ್ನು ದಾಟಲು ಪ್ರಯತ್ನಿಸುತ್ತಿದ್ದಾಳೆ. ಈ ವಿಡಿಯೋ ಕ್ಲಿಪ್‌ನಲ್ಲಿ ಭಾರತದಲ್ಲಿ ರಸ್ತೆ ದಾಟಲು ಪ್ರಯತ್ನಿಸುವುದು ಹೀಗೇ ಇರಲಿ ಎಂದು ಬರೆಯಲಾಗಿದೆ.
ಭಾರತದಲ್ಲಿ ನೀವು ರಸ್ತೆ ದಾಟುವುದಿಲ್ಲ. ನೀವು ವಿಧಿಯೊಂದಿಗೆ ಮಾತುಕತೆ ನಡೆಸುತ್ತೀರಿ ಎಂದು ಶೀರ್ಷಿಕೆಯಲ್ಲಿ ಬರೆದಿರುವುದನ್ನು ನೋಡಬಹುದು. ಇಲ್ಲಿ ಚಲಿಸುವ ವಾಹನಗಳ ನಡುವೆ ವಿದೇಶಿ ಮಹಿಳೆಯರಿಬ್ಬರೂ ಎಚ್ಚರಿಕೆಯಿಂದ ನಡೆದುಕೊಂಡು ಹೋಗುವುದನ್ನು ಕಾಣಬಹುದು. ವಾಹನಗಳು ಸಂಚಾರಿಸುತ್ತಿರುವಾಗಲೇ ಜಾಗರೂಕರಾಗಿರುವುದನ್ನು ಹಾಗೂ ವಾಹನ ಬರುತ್ತಿದ್ದಂತೆ ರಸ್ತೆ ದಾಟಲು ಹಿಂಜರಿಯುವುದನ್ನು ನೋಡಬಹುದಾಗಿದೆ.
ಇದನ್ನೂ ಓದಿ:ನನ್ನನ್ನು ಬಲಶಾಲಿಯನ್ನಾಗಿಸಿದ ಬೆಂಗಳೂರಿಗೆ ಧನ್ಯವಾದ ತಿಳಿಸಿದ ಯುವತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಲ್ಲಿ ಅಷ್ಟೊಂದು ಟ್ರಾಫಿಕ್ ಇಲ್ಲ, ಎಂದು ಬರೆದಿದ್ದಾರೆ. ಇನ್ನೊಬ್ಬರು, ಕಿಕ್ಕಿರಿದ ವಾಹನಗಳ ನಡುವೆ ರಸ್ತೆ ದಾಟುವುದು ಜೀವ ಕೈಯಲ್ಲಿಟ್ಟು ಕೊಂಡ ಹಾಗೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಏನೇ ಹೇಳಿ ನೀವು ಹೇಳಿದ ಮಾತು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Tue, 13 January 26