
ಕೆಲವರಿಗೆ ವಿವಿಧ ಆಹಾರಗಳನ್ನು (foods) ಸವಿಯುವುದೆಂದರೆ ಬಲು ಇಷ್ಟ. ಯಾವ ಊರಿಗೆ ಹೋಗಲಿ ಅಲ್ಲಿನ ವಿಶೇಷ ತಿಂಡಿ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವುದನ್ನು ನೋಡಿರುತ್ತೀರಿ. ಆದರೆ ವಿದೇಶಿ ಪ್ರಜೆಯೊಬ್ಬರು ಬೆಂಗಳೂರಿನ ಗರಿಗರಿಯಾದ ದೋಸೆ ಹಾಗೂ ಮಲ್ಲಿಗೆಯಂತಹ ಮೃದುವಾದ ಇಡ್ಲಿ ಸವಿದು ಭಾರತದ ಅತ್ಯುತ್ತಮ ಆಹಾರ ನಗರ ಈ ಬೆಂಗಳೂರು (Bengaluru) ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ತಿಂಡಿ ತಿನಿಸಿಗೆ ಫಿದಾ ಆಗಿರುವ ವಿದೇಶಿ ಪ್ರಜೆಯ ವಿಡಿಯೋ ಸದ್ಯ ವೈರಲ್ ಆಗಿದೆ. ನೆಟ್ಟಿಗರು ಈ ವಿದೇಶಿಗನ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.
ಭಾರತದ ವಿವಿಧ ನಗರಗಳು ಸೇರಿದಂತೆ ಪಾಕಿಸ್ತಾನಕ್ಕೂ ತೆರಳಿ ಅಲ್ಲಿನ ಪ್ರವಾಸಿ ತಾಣಗಳು ಹಾಗೂ ಆಹಾರಗಳನ್ನು ಸವಿದಿದ್ದರು. ಆದರೆ (hugh.abroad) ಹಗ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಶ್ನೋತ್ತರ ಸರಣಿಯನ್ನು ನಡೆಸಿದ್ದು, ಈ ವೇಳೆ ಬಳಕೆದಾರರೊಬ್ಬರು ಪ್ರತಿಯೊಂದು ದೇಶದಲ್ಲೂ ಅತ್ಯುತ್ತಮವಾದ ಆಹಾರ ನಗರವನ್ನು ಆಯ್ಕೆ ಮಾಡಿ ಎಂದಿದ್ದಾರೆ.
ಕೇವಲ ಬೆಳಗಿನ ಉಪಾಹಾರ ಸಂಸ್ಕೃತಿಯಿಂದಾಗಿ ಭಾರತದ ಅತ್ಯುತ್ತಮ ಆಹಾರ ನಗರ ಬೆಂಗಳೂರು. ಬೆಂಗಳೂರಿನ ಬೆಳಗ್ಗಿನ ಉಪಹಾರವಾದ ಇಡ್ಲಿ ಸಾಂಬಾರ್, ಮಸಾಲಾ ದೋಸೆಯನ್ನು ಫಿಲ್ಟರ್ ಕಾಫಿಯೊಂದಿಗೆ ಶ್ಲಾಘಿಸಿದ್ದಾರೆ. ದೋಸೆಗಳು ತುಂಬಾ ಗರಿಗರಿಯಾಗಿವೆ. ಇಡ್ಲಿಯನ್ನು ಬಾಯಿಲ್ಲಿಟ್ಟರೆ ಕರಗುತ್ತದೆ ಎಂದಿದ್ದಾರೆ. ಇನ್ನು ಕರಾಚಿಯನ್ನು ಪಾಕಿಸ್ತಾನದ ಅತ್ಯುತ್ತಮ ಆಹಾರ ನಗರವೆಂದು ಆಯ್ಕೆ ಮಾಡಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ:ಬೆಂಗಳೂರು ಲಂಡನ್‌ನಂತಾಗಿದೆ: ಚಳಿಯಲ್ಲಿ ನಡುಗುತ್ತಾ ಅನುಭವ ಬಿಚ್ಚಿಟ್ಟ ಅಮೆರಿಕನ್ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಮ್ಮೆ ಈ ತಿನಿಸುಗಳನ್ನು ಮತ್ತೆ ಮತ್ತೆ ನೀವು ಬರುತ್ತೀರಿ ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಹೇಳಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ