Video: ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ

ಹೆಲ್ಮೆಟ್ ಧರಿಸುವುದು ಕಡ್ಡಾಯ ಎನ್ನುವ ನಿಯಮವಿದೆ. ಆದರೆ ಕೆಲವರು ಈ ರೂಲ್ಸ್ ಬ್ರೇಕ್ ಮಾಡ್ತಾರೆ. ಆದ್ರೆ ಈ ಪೊಲೀಸರು ವಿಧಿಸುವ ದಂಡದಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಪ್ಲ್ಯಾನ್ ಮಾಡ್ತಾರೆ. ಆದರೆ ಇಲ್ಲೊಬ್ಬ ದ್ವಿಚಕ್ರ ವಾಹನದಲ್ಲಿ ಕುಳಿತಿರುವ ಹಿಂಬದಿ ಸವಾರನು ಹೆಲ್ಮೆಟ್ ಬದಲಿಗೆ ತಲೆಯ ಮೇಲೆ ಬಾಣಲೆ ಹಿಡಿದುಕೊಂಡು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Video: ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ
ವೈರಲ್ ವಿಡಿಯೋ
Image Credit source: Twitter

Updated on: Nov 03, 2025 | 1:21 PM

ಬೆಂಗಳೂರು, ನವೆಂಬರ್ 03: ಹೈಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಧರಿಸದೆ ಹೀಗೆ ವಾಹನ ಚಲಾಯಿಸುವ ಸಂದರ್ಭದಲ್ಲಿ ಟ್ರಾಫಿಕ್‌ ರೂಲ್ಸ್‌ಗಳನ್ನು (traffic rules) ಬ್ರೇಕ್‌ ಮಾಡಿದ್ರೆ, ಟ್ರಾಫಿಕ್‌ ಪೊಲೀಸರು ದಂಡ ವಿಧಿಸುತ್ತಾರೆ. ಆದ್ರೆ ದ್ವಿಚಕ್ರ ವಾಹನದಲ್ಲಿ ಕುಳಿತಿರುವ ಹಿಂಬದಿ ಸವಾರ ದಂಡ ತಪ್ಪಿಸಲು ಹೋಗಿ ಇದಕ್ಕೆ ಒಂದೊಳ್ಳೆ ಉಪಾಯ ಕಂಡುಕೊಂಡಿದ್ದಾನೆ. ಬೆಂಗಳೂರಿನಲ್ಲಿ ಬೈಕ್ ಹಿಂಬದಿ ಕುಳಿತಿರುವ (Bengaluru) ವ್ಯಕ್ತಿಯೊಬ್ಬ ತಲೆಯ ಮೇಲೆ ಬಾಣಲೆ ಹಿಡಿದುಕೊಂಡು ಕುಳಿತುಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ಬೇಜವಾಬ್ದಾರಿತನದ ಪರಮಾವಧಿ ಎಂದು ಟೀಕಿಸಿದ್ದಾರೆ.

Karnatakaportf ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೂಪೇನ ಅಗ್ರಹಾರ ಬಳಿ ಟ್ರಾಫಿಕ ನಡುವೆ ಚಲಿಸುವಾಗ ಬೈಕ್‌ನ ಹಿಂಬದಿ ಸವಾರನು ತನ್ನ ತಲೆಯ ಮೇಲೆ ಬಾಣಲೆಯನ್ನು ಹಿಡಿದುಕೊಂಡು ಕುಳಿತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಪೌರಕಾರ್ಮಿಕರ ಜತೆ ಸೇರಿ ಬೆಂಗಳೂರಿನ ಬೀದಿಗಳನ್ನು ಸ್ವಚ್ಛಗೊಳಿಸಿದ ವಿದೇಶಿಗ

ನವೆಂಬರ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಬೆಂಗಳೂರಿನಲ್ಲಿ ಯಾರು ಹೆಲ್ಮೆಟ್ ಧರಿಸುವುದಿಲ್ಲ. ಟ್ರಾಫಿಕ್ ಪೊಲೀಸರಿಗೆ ಯಾರು ಹೆದರುತ್ತಾರೆ ಎಂದಿದ್ದಾರೆ. ಇನ್ನೊಬ್ಬರು, ಬೆಂಗಳೂರಿನಲ್ಲಿ ಮಾತ್ರ ಸಂಚಾರ ಎಷ್ಟು ಹುಚ್ಚುಚ್ಚಾಗಿತ್ತೆಂದರೆ ಪಾತ್ರೆಗಳು ರಕ್ಷಣಾತ್ಮಕ ಸಾಧನಗಳಾಗಿ ಬದಲಾಗುತ್ತವೆ. ಆ ವ್ಯಕ್ತಿ ನಿಜವಾಗಿಯೂ ಮೊದಲು ಸುರಕ್ಷತೆ, ನಂತರ ಉಪಹಾರ” ಎಂದು ಯೋಚಿಸಿದ್ದಾರೆ. ಆ ಚಲನ್ ಬರೆಯುವಾಗ ಪೊಲೀಸರು ನಗದಿರಲು ಪ್ರಯತ್ನಿಸುವುದನ್ನು ಊಹಿಸಿ, ಇದು ಕಡಿಮೆ ಬಜೆಟ್ ನಲ್ಲಿ ಭಾರತದಲ್ಲಿನ ಅತ್ಯುನ್ನತ ನಾವೀನ್ಯತೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ವ್ಯಕ್ತಿಯ ಹೆಂಡ್ತಿ ಅಡುಗೆ ಮನೆಯಲ್ಲಿ ಬಾಣಲೆಯನ್ನು ಹುಡುಕುತ್ತಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ