Viral: ಮೂವಿ ನೋಡೋಕ್ ಥಿಯೇಟರ್‌ಗೆ ಬಂದ್ರು ಬೆಂಗಳೂರು ಮಹಿಳೆಯ ಬೆನ್ನು ಬಿಟ್ಟಿಲ್ಲ ವರ್ಕ್ ಟೆನ್ಶನ್

ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡೋದು ತುಂಬಾನೇ ಕಷ್ಟ. ಉದ್ಯೋಗದಲ್ಲಿರುವವರಿಗೆ ಈ ಸಮಸ್ಯೆ ಸರ್ವೇ ಸಾಮಾನ್ಯ. ಅದರಲ್ಲೂ ಕೆಲಸದ ಒತ್ತಡ ಹೆಚ್ಚಾ ಗಿದ್ರೆ ಕೇಳೋದು ಬೇಡ. ಇದೀಗ ಈ ಮಹಿಳೆಯದ್ದು ಇದೇ ಪರಿಸ್ಥಿತಿ. ಹೌದು, ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬರು ಮಾಲ್‌ನಲ್ಲಿ ಸಿನಿಮಾ ನೋಡುತ್ತಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

Viral: ಮೂವಿ ನೋಡೋಕ್ ಥಿಯೇಟರ್‌ಗೆ ಬಂದ್ರು ಬೆಂಗಳೂರು ಮಹಿಳೆಯ ಬೆನ್ನು ಬಿಟ್ಟಿಲ್ಲ ವರ್ಕ್ ಟೆನ್ಶನ್
ವೈರಲ್‌ ಪೋಸ್ಟ್‌
Image Credit source: Reddit

Updated on: Sep 14, 2025 | 2:45 PM

ಬೆಂಗಳೂರು, ಸೆಪ್ಟೆಂಬರ್ 14: ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು (employees) ಅನುಭವಿಸುವ ಒತ್ತಡ ಹೇಳಲಾಗದು. ಕೆಲಸ ಬಿಟ್ಟು ಹೋದರೆ ಸಾಕು ಎನ್ನುವಷ್ಟರ ಮಟ್ಟಿಗೆ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಆಫೀಸಿ ಮುಗಿಸಿ ಮನೆಗೆ ಬಂದ್ರೂ ವರ್ಕ್ ಪ್ರೆಶರ್ ಮಾತ್ರ ಕಡಿಮೆಯಾಗಲ್ಲ. ರಜಾ ದಿನವಂತೂ ಎಂಜಾಯ್ ಮಾಡೋಕೆ ಆಗಲ್ಲ. ವೈರಲ್ ಆದ ಫೋಟೋದಲ್ಲಿ ಬೆಂಗಳೂರಿನ ಮಹಿಳೆ (Bengaluru women) ಮಾಲ್‌ನಲ್ಲಿ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿಕೊಂಡು ಸಿನಿಮಾ ನೋಡುತ್ತಿದ್ದಾರೆ. ಈ ಮಹಿಳೆಗೆ ವರ್ಕ್ ಪ್ರೆಶರ್ ಎಷ್ಟಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಪರ್ಸನಲ್ ಲೈಫ್ ಎಂಜಾಯ್ ಮಾಡೋ ಹಾಗೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

r/banglore ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡ ಪೋಸ್ಟ್‌ನಲ್ಲಿ ಬೆಂಗಳೂರಿನ ಮಾಲ್ ನಲ್ಲಿ ಸಿನಿಮಾ ನೋಡಲೆಂದು ಬಂದ ಮಹಿಳೆಯೊಬ್ಬರು ಸಿನಿಮಾ ನೋಡುತ್ತಾ, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಈ ಪೋಸ್ಟ್ ಗೆ ಬೆಂಗಳೂರಿನ ಮಾಲ್‌ನಲ್ಲಿ ಲೋಕಾ ಎಂಬ ಸಿನಿಮಾ ವೀಕ್ಷಿಸುತ್ತಿರುವಾಗ ಈ ಫೋಟೋವನ್ನು ಕ್ಲಿಕ್ ಮಾಡಲಾಗಿದೆ ಎಂದು ಶಿರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ
ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ
ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
ಅಮೆರಿಕದಲ್ಲಿ ಶಿಕ್ಷಣ ಪಡೆದ್ರು ಸಿಗದ ಉದ್ಯೋಗ, ಈ ಯುವಕನ ಪರಿಸ್ಥಿತಿ ನೋಡಿ
ಪ್ರೊಫೆಶನಲ್ ಆಗಿ ಸಂದೇಶ ಕಳುಹಿಸಿ ರಜೆ ಕೇಳಿದ ಬೆಂಗಳೂರಿನ ಮನೆಕೆಲಸದಾಕೆ

ಇದನ್ನೂ ಓದಿ:Viral: ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ

ಈ ಪೋಸ್ಟ್ ಗೆ ರೆಡ್ಡಿಟ್ ಬಳಕೆದಾರರು ಕಾಮೆಂಟ್ ಮಾಡಿದ್ದು ಒಬ್ಬ ಬಳಕೆದಾರರು ನೆಮ್ಮದಿ ಇಲ್ಲದ ಜೀವನ ಇದೇ ಇರ್ಬೇಕು. ಪರ್ಸನಲ್ ಲೈಫ್ ಎಂಜಾಯ್ ಮಾಡೋಕೆ ಟೈಮ್ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, ಈ ರೀತಿ ಕೆಲಸ ಸಿಕ್ರೆ ವರ್ಕ್ ಲೈಫ್ ಹಾಗೂ ಪರ್ಸನಲ್ ಬ್ಯಾಲೆನ್ಸ್ ಲೈಫ್ ಮಾಡೋದು ಕಷ್ಟ ಎಂದಿದ್ದಾರೆ. ಸಿನಿಮಾ ನೋಡೋಕೆ ಬಂದಾಗ್ಲೂ ಕೆಲಸ ಮಾಡ್ಬೇಕಾ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ