Video: ಬೆಂಗಳೂರಿನಲ್ಲಿ ಕೈಗೆ ಸಿಗುವ ಸಂಬಳಕ್ಕಿಂತ ಖರ್ಚೆ ಹೆಚ್ಚು; ತನ್ನ ಮಾಸಿಕ ಖರ್ಚು- ವೆಚ್ಚದ ವಿವರ ಹಂಚಿಕೊಂಡ ಮಹಿಳೆ

ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರದಲ್ಲಿ ಬದುಕೋದು ಕಷ್ಟ ಇದೆ. ಇದಕ್ಕೆ ಸಾಕ್ಷಿಯಾಗಿದೆ ಈ ಮಹಿಳೆ ಹಂಚಿಕೊಂಡ ವಿಡಿಯೋ. ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ತಮ್ಮ ತಿಂಗಳ ಖರ್ಚು ವೆಚ್ಚದ ವಿವರವನ್ನು ಹಂಚಿಕೊಂಡಿದ್ದಾರೆ, ಬಾಡಿಗೆ, ಪ್ರಯಾಣ, ಆಹಾರ ಮತ್ತು ಶಾಪಿಂಗ್ ವೆಚ್ಚಗಳು ಎಷ್ಟು ಆಗುತ್ತದೆ ಎಂದು ಹೇಳಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೆಂಗಳೂರಿನಲ್ಲಿ ಕೈಗೆ ಸಿಗುವ ಸಂಬಳಕ್ಕಿಂತ ಖರ್ಚೆ ಹೆಚ್ಚು; ತನ್ನ ಮಾಸಿಕ ಖರ್ಚು- ವೆಚ್ಚದ ವಿವರ ಹಂಚಿಕೊಂಡ ಮಹಿಳೆ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Dec 17, 2025 | 11:34 AM

ಬೆಂಗಳೂರು, ಡಿಸೆಂಬರ್ 17: ಈಗಿನ ದುಬಾರಿ ದುನಿಯಾದಲ್ಲಿ ಕೈಗೆ ಸಿಗುವ ಅಷ್ಟೋ ಇಷ್ಟೋ ಸಂಬಳದಲ್ಲಿ ತಿಂಗಳ ಖರ್ಚನ್ನು ನಿಭಾಯಿಸಿಕೊಂಡು ಹೋಗುವುದೇ ದೊಡ್ಡ ಸವಾಲು. ಲಕ್ಷಾಂತರ ರೂಪಾಯಿ ದುಡಿದ್ರೂ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗುತ್ತದೆ. ಮಹಿಳೆಯೊಬ್ಬರು ತನ್ನ ತಿಂಗಳ ಖರ್ಚು (monthly expensive) ಎಷ್ಟಾಗುತ್ತದೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡ ಶ್ರದ್ಧಾ ಸೈನಿ ಒಂದು ತಿಂಗಳಿಗೆ ಎಷ್ಟು ಹಣ ಖರ್ಚಾಗುತ್ತದೆ ಎಂದು ಹೇಳುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ.

ಶ್ರದ್ಧಾ ಸೈನಿ (Shradha Saini) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಾನು ಇತ್ತೀಚೆಗಷ್ಟೇ ಬೆಂಗಳೂರಿಗೆ ಸ್ಥಳಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಯಾರಾದರೂ ನನ್ನ ಹಣಕಾಸನ್ನು ನಿರ್ವಹಿಸಿ ಎಂದು ಶೀರ್ಷಿಕೆ ನೀಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಮೂಲಭೂತ ವೆಚ್ಚಗಳು ತಿಂಗಳಿಗೆ ಸುಮಾರು 40,000 ರೂ ಆಗುತ್ತದೆ ಎಂದು ಬಹಿರಂಗ ಪಡಿಸಿದ್ದಾರೆ. ಟ್ರಾವೆಲಿಂಗ್‌ ವೆಚ್ಚ 1,000 ರೂ. ಬೆಳಗ್ಗೆ ಆಟೋದಲ್ಲಿ ಹೋಗುವ ಕಾರಣ 50 ರೂ ಬೇಕಾಗುತ್ತದೆ, ಸಂಜೆ ನಡೆದೇ ಕೊಂಡು ಹೋಗುವುದಾಗಿ ಹೇಳಿದ್ದಾರೆ. ವಾರಾಂತ್ಯಗಳಲ್ಲಿ ವಿಹಾರ, ಶಾಪಿಂಗ್ ಮತ್ತು ಸ್ನೇಹಿತರನ್ನು ಭೇಟಿಯಾಗಲು ಕ್ಯಾಬ್‌ಗಳನ್ನು ಅವಲಂಬಿಸಿದ್ದು ಇದಕ್ಕಾಗಿ 5,000 ರೂ ಎತ್ತಿಡಬೇಕಾಗುತ್ತದೆ. ಆಹಾರ ವೆಚ್ಚಗಳು 6000 ರೂ, ಐಕ್ಲೌಡ್ ಮತ್ತು ಆಪಲ್ ಮ್ಯೂಸಿಕ್‌ನಂತಹ ಸ್ವಯಂ-ಡೆಬಿಟ್ ಚಂದಾದಾರಿಕೆಗಳನ್ನು ಹೊಂದಿದ್ದು, ಅದಕ್ಕಾಗಿ 2,000 ರೂ ಖರ್ಚಾಗುತ್ತದೆ ಎಂದಿದ್ದಾರೆ.

ಇನ್ನು, ಬಟ್ಟೆ, ಮೇಕಪ್, ಶೂಗಳು ಹಾಗೂ ವೈಯಕ್ತಿಕ ವಸ್ತುಗಳ ಖರೀದಿಗಾಗಿ ಪ್ರತಿ ತಿಂಗಳು ಸುಮಾರು 25,000 ರೂ ಖರ್ಚು ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ. ತಿಂಗಳ ಇಎಂಐಗೆ 18,000 ರೂ ಬೇಕು, ಹೀಗಾಗಿ ತಿಂಗಳಿಗೆ ಒಂದು ಲಕ್ಷ ರೂ ಖರ್ಚು ಆಗುತ್ತದೆ ಎಂದು ಹೇಳಿರುವುದನ್ನು ನೀವು ನೋಡಬಹುದು. ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ತನ್ನ ಬಜೆಟ್ ಸ್ಥಿರವಾಗಿಲ್ಲ. ನಾನು ಹೆಚ್ಚು ಉಳಿತಾಯ ಮಾಡುತ್ತಿಲ್ಲ. ವೆಚ್ಚಗಳಿಗೆ ಇನ್ನೂ ಹೊಂದಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ಆಟೋದಲ್ಲಿನ ಪೋಸ್ಟರ್ ಕಂಡು ಬೆಂಗಳೂರು ಹೆಣ್ಣುಮಕ್ಕಳಿಗೆ ಸೇಫ್ ಎಂದ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಿಮ್ಮ ಮಾತನ್ನು ಒಪ್ಪುತ್ತೇನೆ, ಜೀವನ ನಡೆಸೋದು ಕಷ್ಟ ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ಖರ್ಚು ವೆಚ್ಚಗಳಿಗೆ ಲಗಾಮು ಹಾಕಿಕೊಳ್ಳಿ, ಆಗ ಉಳಿತಾಯ ಸಾಧ್ಯ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ನಿಮ್ಮ ಖರ್ಚು ವೆಚ್ಚಗಳ ವಿವರಗಳಲ್ಲಿ ಬದಲಾವಣೆ ಮಾಡಿಕೊಳ್ಳಿ, ಅನಾವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published On - 11:33 am, Wed, 17 December 25