Video: ಬೆಂಗಳೂರಿನ ಬಸ್ ಪ್ರಯಾಣಿಕರಿಗೆ ಸ್ವಚ್ಛತೆಯ ಪಾಠ ಮಾಡಿದ ಮಹಿಳೆ, ವೈರಲ್ ಆಯ್ತು ದೃಶ್ಯ

ನಾಲ್ಕು ಅಕ್ಷರ ಓದಿಕೊಂಡವರೇ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ರೂ ನಮಗೆ ಸಂಬಂಧಯಿಲ್ಲ ಎನ್ನುವಂತೆ ವರ್ತಿಸುತ್ತಾರೆ. ಆದರೆ ಈ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಬೆಂಗಳೂರನ್ನು ಸ್ವಚ್ಛವಾಗಿಡುವ ದೃಷ್ಟಿಯಿಂದ ಬಸ್ ಪ್ರಯಾಣಿಕರಲ್ಲಿ ಬಸ್ ಸೇರಿದಂತೆ ಬೀದಿಗಳಲ್ಲಿ ಕಸ ಎಸೆಯದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Video: ಬೆಂಗಳೂರಿನ ಬಸ್ ಪ್ರಯಾಣಿಕರಿಗೆ ಸ್ವಚ್ಛತೆಯ ಪಾಠ ಮಾಡಿದ ಮಹಿಳೆ, ವೈರಲ್ ಆಯ್ತು ದೃಶ್ಯ
ಬಸ್ಸಿನಲ್ಲಿ ಪ್ರಯಾಣಿಕರಿಗೆ ಮಹಿಳೆಯ ಸ್ವಚ್ಛತೆಯ ಪಾಠ
Image Credit source: Reddit

Updated on: Oct 09, 2025 | 5:53 PM

ಬೆಂಗಳೂರು, ಅಕ್ಟೋಬರ್ 09: ಇತ್ತೀಚಿಗಂತೂ ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಕಸ ಎಸೆದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ರೂ ಜನ ಮಾತ್ರ ಕ್ಯಾರೇ ಅನ್ನಲ್ಲ. ಇನ್ನು ಬಸ್ಸಿನಲ್ಲಿ ಪ್ರಯಾಣಿಸುವಾಗ ಗುಟ್ಕಾ, ವಿಮಲ್ ತಿಂದು ಅದರ ಪ್ಯಾಕೆಟನ್ನು ರಸ್ತೆಗೆ ಎಸೆಯುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬರು ಮಹಿಳೆಯೂ ಬೆಂಗಳೂರಿನ (Bengaluru) ಬಸ್ ಹತ್ತಿ ಪ್ರಯಾಣಿಕರಲ್ಲಿ ನಿಮ್ಮ ಟಿಕೆಟ್‌ಗಳನ್ನು ಎಲ್ಲೆಂದರಲ್ಲಿ ಬಿಸಾಕಬೇಡಿ. ಕಸವನ್ನು ಡಸ್ಟ್ ಬಿನ್‌ಗೆ ಹಾಕಿ ಪರಿಸರ ಸ್ವಚ್ಛತೆ ಕಾಪಾಡಿ ಎಂದು ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ. ಪ್ರಯಾಣಿಕರಿಗೆ ಸ್ವಚ್ಛತೆಯ ಪಾಠ ಮಾಡುತ್ತಿರುವ ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಮಹಿಳೆಯ ಈ ಕೆಲಸವನ್ನು ಎಲ್ಲರೂ ಶ್ಲಾಘಿಸಿದ್ದಾರೆ.

ಬಸ್ಸಿನಲ್ಲಿ ಪ್ರಯಾಣಿಕರಿಗೆ ಮಹಿಳೆಯ ಸ್ವಚ್ಛತೆಯ ಪಾಠ

ಆರ್‌ ಬೆಂಗಳೂರು (r/ Bengaluru) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಬಸ್ಸಿನಲ್ಲಿ ಸ್ವಚ್ಛತೆಯ ಪಾಠ ಮಾಡುವ ಮಹಿಳೆಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಮಹಿಳಾ ಸ್ವಯಂಸೇವಕಿಯೊಬ್ಬರು ಬಸ್ಸಿನೊಳಗೆ ಹತ್ತಿ ಪ್ರಯಾಣಿಕರಲ್ಲಿ ಟಿಕೆಟ್, ಕಸ ಅಥವಾ ಗುಟ್ಕಾ ಪ್ಯಾಕೆಟ್‌ಗಳನ್ನು ರಸ್ತೆಗೆ ಎಸೆಯದಂತೆ ವಿನಂತಿಸುತ್ತಾರೆ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಬದಲಾವಣೆ ಒಳಗಿನಿಂದ ಪ್ರಾರಂಭವಾಗುತ್ತದೆ, ನಿಮ್ಮ ಕಸವನ್ನು ಮನೆಗೆ ತೆಗೆದುಕೊಂಡು ಹೋಗಿ!” ಎಂದು ಬರೆಯಲಾಗಿದೆ.

ಇದನ್ನೂ ಓದಿ
ಬೆಂಗಳೂರು ಏರ್‌ಪೋರ್ಟ್‌ನ ಪ್ರಯಾಣಿಕರ ಸೀಟಿನಲ್ಲೇ ನಿದ್ರೆಗೆ ಜಾರಿದ ಶ್ವಾನ
ತಿಂಗಳಿಗೆ 3 ಲಕ್ಷ ರೂ ಆದಾಯ,ಇದು ಬೆಂಗಳೂರಿನ ಆಟೋಚಾಲಕನ ನೈಜ ಚಿತ್ರಣ
ರ‍್ಯಾಪಿಡೋ ಚಾಲಕನ ಸಹಾಯವನ್ನು ನೆನೆದ ಬೆಂಗಳೂರಿನ ಯುವಕ
ಬೆಂಗಳೂರಿನ ಈ ಭಾಗದಲ್ಲೇ ಟ್ರಾಫಿಕ್​​ ಹೆಚ್ಚು

ವೈರಲ್ ವಿಡಿಯೋ ಇಲ್ಲಿದೆ ನೋಡಿ

A woman volunteer enters the bus and requests passengers not to throw tickets, trash, or gutka packets on the road, creating awareness among the public. Change starts from within, take your trash home!
byu/margazi_perumal_20 inBengaluru

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಿಎಂಟಿಸಿ ಬಸ್ ಒಂದರ ಮೆಟ್ಟಿಲುಗಳ ಮೇಲೆ ನಿಂತು, “ಪ್ರಯಾಣಿಕರು ಟಿಕೆಟ್‌ಗಳು, ಚಾಕೊಲೇಟ್ ಹಾಳೆಗಳು ಮತ್ತು ಪ್ಯಾನ್ ಪ್ಯಾರಾಗ್ ಪ್ಯಾಕೆಟ್‌ ನಂತಹ ಕಸವನ್ನು ಕಿಟಕಿಗಳ ಹೊರಗೆ ಎಸೆಯಬಾರದು” ಎಂದು ಕನ್ನಡದಲ್ಲಿ ಹೇಳುವುದನ್ನು ಕಾಣಬಹುದು ಆ ಬಳಿಕ ಹಿಂದಿಯಲ್ಲಿ ಅದೇ ಸಂದೇಶವನ್ನು ಮತ್ತೊಮ್ಮೆ ಹೇಳಿ ಪ್ರಯಾಣಿಕರು ಮಾಡುತ್ತಿರುವ ತಪ್ಪನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಈ ರೀತಿ ಉತ್ತಮ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು ಮೇಡಂ, ಕನಿಷ್ಠ ಒಬ್ಬ ವ್ಯಕ್ತಿಯಾದ್ರು ನೀವು ಹೇಳುವ ಮಾತನ್ನು ಕೇಳಿ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Video: ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ; ಬೆಂಗಳೂರು ಏರ್‌ಪೋರ್ಟ್‌ನ ಪ್ರಯಾಣಿಕರ ಸೀಟಿನಲ್ಲೇ ನಿದ್ರೆಗೆ ಜಾರಿದ ಶ್ವಾನ

ಇನ್ನೊಬ್ಬರು, ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವುದನ್ನು ನೋಡುವುದೇ ಬೇಸರದ ಸಂಗತಿ. ನನ್ನ ಕಚೇರಿಯ ಸಹೋದ್ಯೋಗಿಗಳು ಕೂಡ ಪೇಪರ್ ಕಪ್‌ಗಳಲ್ಲಿ ಚಹಾ ಕುಡಿದು ಪಕ್ಕಕ್ಕೆ ಎಸೆಯುತ್ತಾರೆ. ನನ್ನ ಪ್ರಶ್ನೆ ಏನೆಂದರೆ, ಈ ಶಿಕ್ಷಣದ ಅರ್ಥವೇನು? ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಅತ್ಯುತ್ತಮ ಕೆಲಸ, ವಯಸ್ಕರಿಗೆ ಇದರ ಬಗ್ಗೆ ಜಾಗೃತಿ ನೀಡಬೇಕಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ