ಡ್ರಾಪ್ ಪಾಯಿಂಟ್ ವಿಚಾರಕ್ಕಾಗಿ ಬೆಂಗಳೂರು ಆಟೋ ಚಾಲಕನನ್ನು ನಿಂದಿಸಿದ ದಂಪತಿ

ಬೆಂಗಳೂರಿನಲ್ಲಿ ದಂಪತಿ ಮತ್ತು ಆಟೋ ಚಾಲಕನ ನಡುವೆ ಡ್ರಾಪ್ ಪಾಯಿಂಟ್ ವಿಚಾರವಾಗಿ ವಾಗ್ವಾದ ನಡೆದಿದೆ. ದಂಪತಿ ಚಾಲಕನನ್ನು ನಿಂದಿಸಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ದಂಪತಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ. ಇದೀಗ ಪೊಲೀಸರು ಮಧ್ಯಪ್ರವೇಶಿಸಿ ದಂಪತಿ ಹಾಗೂ ಚಾಲಕನನ್ನು ವಿಚಾರಣೆ ನಡೆಸಿದ್ದಾರೆ.

ಡ್ರಾಪ್ ಪಾಯಿಂಟ್ ವಿಚಾರಕ್ಕಾಗಿ ಬೆಂಗಳೂರು ಆಟೋ ಚಾಲಕನನ್ನು ನಿಂದಿಸಿದ ದಂಪತಿ
ವೈರಲ್​​ ವಿಡಿಯೋ

Updated on: Nov 12, 2025 | 5:17 PM

ಬೆಂಗಳೂರಿನಲ್ಲಿ ದಂಪತಿ ಹಾಗೂ ಆಟೋ ಚಾಲಕನ (Bengaluru auto driver dispute) ನಡುವೆ ಡ್ರಾಪ್​​​​ ಪಾಯಿಂಟ್​​​​ ವಿಚಾರವಾಗಿ ವಾಗ್ವಾದ ನಡೆದಿದೆ. ಈ ವೇಳೆ ದಂಪತಿ ಆಟೋ ಚಾಲಕನನ್ನು ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಕಾರಣವಾಗಿದೆ. ದಂಪತಿಗಳ ವರ್ತನೆಗೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯ ಭಾಷೆ ಮತ್ತು ನಡವಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಕನ್ನಡಿಗರ ಮೇಲೆ ಪ್ರತಿನಿತ್ಯ ಇಂಥಹ ದಬ್ಬಾಳಿಕೆ ನಡೆಯುತ್ತಿದೆ ಎಂದು ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದಾರೆ. ಸರಿಯಾದ ಸ್ಥಳಕ್ಕೆ ಬಿಟ್ಟಲ್ಲ ಎಂದು ಉತ್ತರ ಭಾರತದ ದಂಪತಿಗಳು ಆಟೋ ಚಾಲಕನಿಗೆ ಕೆಟ್ಟದಾಗಿ ಬೈದಿದ್ದಾರೆ ಎಂದು ಹೇಳಲಾಗಿದೆ.

ವಿಡಿಯೋದಲ್ಲಿ ದಂಪತಿಗಳು ಹಿಂದಿಯಲ್ಲಿ ಮಾತನಾಡುವುದನ್ನು ಕಾಣಬಹುದು. ಆಟೋ ಚಾಲಕನಿಗೆ, ನೀನು ಸರಿಯಾದ ಸ್ಥಳಕ್ಕೆ ಯಾಕೆ ಬಿಟ್ಟಿಲ್ಲ, ನಿನಗೆ ಬೆತ್ತಲೆಯಾಗಿ ಹೊಡೆಯುತ್ತೇನೆ ಎಂದು ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವೇಳೆ ಆಟೋ ಚಾಲಕ ವಿಡಿಯೋ ರೆಕಾರ್ಡ್​​​ ಮಾಡುವುದನ್ನು ನೋಡಿ, ಫೋನ್​​​​​ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಟೋ ಚಾಲಕ ಇನ್ನು ನಾನು ಮಾತನಾಡುವುದಿಲ್ಲ, ಪೊಲೀಸರು ಬರಲಿ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನು ಈ ವ್ಯಕ್ತಿ ಆಟೋಗೆ ಕೋಪದಲ್ಲಿ ಒದ್ದಿರುವುದು ಕೂಡ ಈ ವಿಡಿಯೋದಲ್ಲಿ ರೆಕಾರ್ಡ್​​ ಆಗಿದೆ.

ಇಲ್ಲಿದೆ ನೋಡಿ ಪೋಸ್ಟ್:

ಈ ವಿಡಿಯೋವನ್ನು ಹುಳಿಮಾವು ಪೊಲೀಸ್ ಠಾಣೆಯು ತನ್ನ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಆಟೋ ಚಾಲಕ ಹಾಗೂ ದಂಪತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಹೇಳಿರುವ ಪ್ರಕಾರ, ದಂಪತಿಗಳು ಬಿಟಿಎಂ ಲೇಔಟ್‌ನಿಂದ ತಮ್ಮ ನಿವಾಸಕ್ಕೆ ಆಟೋ ಬುಕ್​ ಮಾಡಿದ್ದಾರೆ. ಆದರೆ ಆಟೋ ಚಾಲಕ ಡ್ರಾಪ್-ಆಫ್ ಪಾಯಿಂಟ್‌ಗೆ ಮುಂಚಿತವಾಗಿ ಇಳಿಯಲು ಕೇಳಿಕೊಂಡಿದ್ದಾರೆ ಎಂದು ದಂಪತಿಗಳು ಆರೋಪಿಸಿದ್ದಾರೆ. ನಮ್ಮನ್ನು ಡ್ರಾಪ್-ಆಫ್ ಪಾಯಿಂಟ್​​​ನಲ್ಲಿ ಇಳಿಸಿ, ಇಲ್ಲವೆಂದರೆ ನಾವು ಹಣ ಪಾವತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ನಂತರ ಆಟೋ ಚಾಲಕ ನಿವಾಸದ ಬಳಿ ಇಳಿಸಿದ ನಂತರ ನಮ್ಮನ್ನು ವಲಸಿಗರು ಎಂದು ನಿಂದಿಸಿದ್ದಾರೆ ಎಂದು ದಂಪತಿಗಳನ್ನು ಹೇಳಿದ್ದಾರೆ.

ಇದನ್ನೂ ಓದಿ: 15 ವರ್ಷಗಳ ನಂತರ ವಿಚ್ಛೇದನ ಪ್ರಕರಣ ಸುಖಾಂತ್ಯ, ಪತ್ನಿಗೆ 664 ಕೋಟಿ ರೂ. ಜೀವನಾಂಶ ನೀಡಲು ಕೋರ್ಟ್​​ ಆದೇಶ

ನೆಟ್ಟಿಗರ ಪ್ರತಿಕ್ರಿಯೆ ಏನಿತ್ತು?

ಆ ವ್ಯಕ್ತಿಯ ವರ್ತನೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಆಟೋ ಚಾಲಕ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಅವರು ತುಂಬಾ ಸಭ್ಯರಂತೆ ಕಾಣುತ್ತಾರೆ. ಆ ದಂಪತಿಗಳು ಅಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ದೂರಿನ ಪ್ರತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ವಲಸಿಗರ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ. ಅವರಿಗೆ ಸ್ಥಳೀಯರಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Wed, 12 November 25