AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಟಪದಲ್ಲೇ ಮದುಮಗನಿಗೆ ಇರಿತ; 2 ಕಿ.ಮೀ.ವರೆಗೆ ದಾಳಿಕೋರರನ್ನು ಬೆನ್ನಟ್ಟಿದ ಡ್ರೋನ್ ಕ್ಯಾಮೆರಾ!

ಮಂಟಪದಲ್ಲೇ ಮದುಮಗನಿಗೆ ಇರಿತ; 2 ಕಿ.ಮೀ.ವರೆಗೆ ದಾಳಿಕೋರರನ್ನು ಬೆನ್ನಟ್ಟಿದ ಡ್ರೋನ್ ಕ್ಯಾಮೆರಾ!

ಸುಷ್ಮಾ ಚಕ್ರೆ
|

Updated on: Nov 12, 2025 | 6:15 PM

Share

ಅಮರಾವತಿಯ ಮದುವೆಯಲ್ಲಿ ವರನನ್ನು ಇರಿದು, ಬೈಕ್‌ನಲ್ಲಿ ಪರಾರಿಯಾಗಿದ್ದ ಇಬ್ಬರು ಪುರುಷರನ್ನು ಡ್ರೋನ್ ಕ್ಯಾಮೆರಾದ ಮೂಲಕ 2 ಕಿ.ಮೀ ದೂರದವರೆಗೆ ಫಾಲೋ ಮಾಡಲಾಗಿದೆ. 22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಸಮಾರಂಭದ ಸಂದರ್ಭದಲ್ಲಿ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾಘೋ ಜಿತೇಂದ್ರ ಬಕ್ಷಿ ಎಂಬ ಆರೋಪಿ ವೇದಿಕೆಯಲ್ಲಿ ವರನ ಬಳಿಗೆ ಬಂದು ಚಾಕುವಿನಿಂದ ಮೂರು ಬಾರಿ ಇರಿದು, ಅವನ ತೊಡೆ ಮತ್ತು ಮೊಣಕಾಲಿಗೆ ಗಾಯಗೊಳಿಸಿದ್ದಾನೆ. 

ಅಮರಾವತಿ, ನವೆಂಬರ್ 12: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರನಿಗೆ ವೇದಿಕೆಯಲ್ಲಿಯೇ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಸಂಭ್ರಮ ತುಂಬಿರಬೇಕಿದ್ದ ಮದುವೆ ಮಂಟಪದಲ್ಲಿ ಆತಂಕ ನಿರ್ಮಾಣವಾಯಿತು. ತಕ್ಷಣ ವರನನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಮದುವೆಯ ಸಂಭ್ರಮವನ್ನು ಕವರ್ ಮಾಡುತ್ತಿದ್ದ ಡ್ರೋನ್ ಕ್ಯಾಮೆರಾ (Drone Video) ಬೈಕ್​ನಲ್ಲಿ ಪರಾರಿಯಾಗುತ್ತಿದ್ದ ಆ ಇಬ್ಬರು ದಾಳಿಕೋರರನ್ನು 2 ಕಿ.ಮೀ. ವರೆಗೆ ಬೆನ್ನಟ್ಟಿದೆ. ಆ ಡ್ರೋನ್ ಕ್ಯಾಮೆರಾದಿಂದಾಗಿ ಚಾಕುವಿನಿಂದ ಹಲ್ಲೆ ನಡೆಸಿದವರು ಸಿಕ್ಕಿಬಿದ್ದಿದ್ದಾರೆ.

22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಸಮಾರಂಭದ ಸಂದರ್ಭದಲ್ಲಿ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾಘೋ ಜಿತೇಂದ್ರ ಬಕ್ಷಿ ಎಂಬ ಆರೋಪಿ ವೇದಿಕೆಯಲ್ಲಿ ವರನ ಬಳಿಗೆ ಬಂದು ಚಾಕುವಿನಿಂದ ಮೂರು ಬಾರಿ ಇರಿದು, ಅವನ ತೊಡೆ ಮತ್ತು ಮೊಣಕಾಲಿಗೆ ಗಾಯಗೊಳಿಸಿದ್ದಾನೆ. ಈ ವೇಳೆ ಮದುವೆಗೆ ಕರೆಸಲಾಗಿದ್ದ ಕ್ಯಾಮೆರಾಮನ್ ತನ್ನ ಡ್ರೋನ್ ಕ್ಯಾಮೆರಾದಲ್ಲಿ ಈ ಘಟನೆಯ ಪೂರ್ತಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಂತರ ಆ ದಾಳಿಕೋರರು ಹೋದ ದಿಕ್ಕಿನಲ್ಲಿ 2 ಕಿ.ಮೀವರೆಗೆ ಅವರನ್ನು ಡ್ರೋನ್ ಕ್ಯಾಮೆರಾದ ಮೂಲಕ ಫಾಲೋ ಮಾಡಿದ್ದಾರೆ. ಇದರಿಂದ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More