30 ನಿಮಿಷಗಳಲ್ಲಿ 25,000 ಲೀಟರ್ ಮಳೆನೀರು ಸಂಗ್ರಹಣೆ ಮಾಡಿದ ಬೆಂಗಳೂರಿನ ವ್ಯಕ್ತಿ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 24, 2025 | 5:00 PM

ಬಿಸಿಲ ಬೇಗೆಯಿಂದ ಬೆಂದಿದ್ದ ಬೆಂಗಳೂರು ನಗರದಲ್ಲಿ ಶನಿವಾರ (ಮಾ. 22) ಧಾರಾಕಾರ ಮಳೆ ಸುರಿದಿತ್ತು. ಈ ಬೇಸಿಗೆ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾದ ಸುದ್ದಿ ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಬ್ರು ವ್ಯಕ್ತಿ ಇದೇ ಮಳೆಯಿಂದ ಕೇವಲ 30 ನಿಮಿಷಗಳಲ್ಲಿ ಸುಮಾರು 25 ಸಾವಿರ ಲೀಟರ್‌ ಮಳೆ ನೀರು ಸಂಗ್ರಹಣೆ ಮಾಡಿದ್ದಾರೆ. ಮಳೆ ನೀರು ಕೊಯ್ಲು ವ್ಯವಸ್ಥೆಯ ಮೂಲಕ ನೀರನ್ನು ಸಂಗ್ರಹಿಸಿದ್ದು, ಇದರಲ್ಲಿ ಗೃಹ ಬಳಕೆಗೆ 15 ಸಾವಿರ ಹಾಗೂ 10 ಸಾವಿರ ಲೀ ನೀರು ಕೃಷಿಗೆ ಬಳಕೆ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.

30 ನಿಮಿಷಗಳಲ್ಲಿ 25,000 ಲೀಟರ್ ಮಳೆನೀರು ಸಂಗ್ರಹಣೆ ಮಾಡಿದ ಬೆಂಗಳೂರಿನ ವ್ಯಕ್ತಿ; ವಿಡಿಯೋ ವೈರಲ್‌
ವೈರಲ್​​ ನ್ಯೂಸ್
Follow us on

ಬೆಂಗಳೂರು, ಮಾ. 24: ಬೇಸಿಗೆ (Summer) ವೇಳೆ ನೀರಿನ ಸಮಸ್ಯೆ ಉಲ್ಬಣಗೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ನೀರಿನ ಬೇಡಿಕೆಯನ್ನು ಪೂರೈಸಲು ಮಳೆ ನೀರು ಕೊಯ್ಲು ನಮಗೆ ಸಹಾಯ ಮಾಡುತ್ತದೆ. ಹೀಗೆ ನೀರಿನ ಅಭಾವ ನೀಗಿಸಲು ತಮ್ಮ ಮನೆ ಮೇಲೆ ಬೀಳುವ ಮಳೆ ನೀರು ಪೋಲಾಗದಂತೆ ಮಳೆ ನೀರು ಕೊಯ್ಲು (Rain water harvesting) ಪದ್ಧತಿ ಅಳವಡಿಸಿಕೊಂಡು ಗೃಹ ಬಳಕೆಗೆ ಮಳೆ ನೀರನ್ನು ಬಳಕೆ ಮಾಡುವ ಒಂದಷ್ಟು ಬೆರಳೆಣಿಕೆಯ ಜನರಿದ್ದಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಮೊನ್ನೆ ಶನಿವಾರ ಬೆಂಗಳೂರಿನಲ್ಲಿ (Bengaluru) ಸುರಿದ ಮಳೆಯಿಂದ 30 ನಿಮಿಷಗಳಲ್ಲಿ ಸುಮಾರು 25 ಸಾವಿರ ಲೀಟರ್‌ ಮಳೆ ನೀರು ಸಂಗ್ರಹಿಸಿದ್ದಾರೆ. ಇದರಲ್ಲಿ ಗೃಹ ಬಳಕೆಗೆ 15 ಸಾವಿರ ಹಾಗೂ 10 ಸಾವಿರ ಲೀ ನೀರು ಕೃಷಿಗೆ ಬಳಕೆ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಮೊನ್ನೆ ಶನಿವಾರ (ಮಾ. 22) ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ವ್ಯಕ್ತಿಯೊಬ್ಬರು 25,000 ಲೀಟರ್‌ಗೂ ಹೆಚ್ಚು ಮಳೆನೀರನ್ನು ಸಂಗ್ರಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಇದರಲ್ಲಿ ಗೃಹಬಳಕೆಗೆ 15,000 ಲೀಟರ್ ಮತ್ತು ಕೃಷಿಗೆ 10,000 ಲೀಟರ್ ನೀರು ಬಳಕೆ ಮಾಡಲಾಗುವುದು ಎಂದು ಹೇಳಿಕೊಂಡಿದ್ದಾರೆ. ಮಾಜಿ ಸೇನಾಧಿಕಾರಿ ಕ್ಯಾಪ್ಟನ್ ಸಂತೋಷ್ ಕೆ.ಸಿ (captsanthoshkc) ತಮ್ಮ ಮಳೆನೀರು ಸಂಗ್ರಹ ವ್ಯವಸ್ಥೆಯ ವೀಡಿಯೊವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಇವರ ಈ ಸುಸ್ಥಿರ ಮಳೆ ನೀರು ಸಂಗ್ರಹಣೆ ವ್ಯವಸ್ಥೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಕ್ಯಾಪ್ಟನ್‌ ಸಂತೋಷ್‌ ಕೆ.ಸಿ ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಬೆಂಗಳೂರು ಮಳೆ, ಸುಸ್ಥಿರ ಯೋಜನೆಯ ಶಕ್ತಿ; ಸಂಜೆ 30 ನಿಮಿಷಗಳ ಮಳೆಯಲ್ಲಿ ನಾವು ಸುಮಾರು 25,000 ಲೀಟರ್ ನೀರನ್ನು ಸಂಗ್ರಹಿಸಿದ್ದೇವೆ. ಗೃಹಬಳಕೆಗೆ 15,000 ಲೀಟರ್ ಮತ್ತು ಕೃಷಿ ಬಳಕೆಗೆ 10,000 ಲೀಟರ್ ಲಭ್ಯವಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ ವಾರ್ನಿಂಗ್‌ ಬೋರ್ಡ್‌
ಈ ಹಳ್ಳಿಯಲ್ಲಿ ಮದುವೆಯಾಗಿ 7 ದಿನಗಳವರೆಗೆ ಬೆತ್ತಲಾಗಿರಬೇಕಂತೆ ಮಹಿಳೆಯರು
ಮಗಳ ವಯಸ್ಸಿನ ಹುಡುಗಿ ಜತೆ ರಸ್ತೆಯಲ್ಲಿ ವ್ಯಕ್ತಿಯ ರೊಮ್ಯಾನ್ಸ್
ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಅವರು ಮಳೆನೀರು ಕೊಯ್ಲು ಪದ್ಧತಿಯ ಮೂಲಕ ಮಳೆ ನೀರನ್ನು ಯಾವ ರೀತಿ ಸಂಗ್ರಹಣೆ ಮಾಡುತ್ತಾರೆ ಮತ್ತು ಆ ನೀರನ್ನು ಕೃಷಿಗೆ ಹೇಗೆ ಬಳಕೆ ಮಾಡಲಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ;ಪ್ರತಿದಿನ ನೈಟಿ ಧರಿಸುವಂತೆ ಒತ್ತಾಯ, ಗಂಡನ ಕಾಟಕ್ಕೆ ಬೇಸತ್ತು ಮಾಡಿದ್ದೇನು?

ಮಾರ್ಚ್‌ 22 ರಂಧೂ ಶೇರ್‌ ಮಾಡಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸರ್‌ ಅದ್ಭುತ, ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿವಿರಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಸಿದ ಸಂತೋಷ್‌ ʼತೊಟ್ಟಿಗಳಲ್ಲಿ ನೀರು ಸಂಗ್ರಹಿಸಿ ದೈನಂದಿನ ಅವಶ್ಯಕತೆಗಳಿಗೆ ಬಳಸಿಕೊಳ್ಳುತ್ತೇವೆ, ಹೆಚ್ಚುವರಿ ನೀರನ್ನು ಅಂತರ್ಜಲ ಮರುಪೂರಣಕ್ಕೆ ಬಿಡಲಾಗುವುದುʼ ಎಂದು ಹೇಳಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಅದ್ಭುತ ಉಪಕ್ರಮʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಇವರ ಈ ಪ್ರಯತ್ನವನ್ನು ಶ್ಲಾಘಿಸಿ, ಇದನ್ನು ಸ್ಪೂರ್ತಿದಾಯಕ ಉಪಕ್ರಮ ಎಂದು ಕರೆದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ