
ಬೆಂಗಳೂರು, ಏ. 26: ಟ್ರೈನ್, ಮೆಟ್ರೋದಲ್ಲಿ (Metro) ಕೆಲವೊಂದು ಬಾರಿ ಪ್ರಯಾಣಿಕರು ಹುಚ್ಚಾಟ ಮೆರೆಯುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿಯ ಘಟನೆ ಬೆಂಗಳೂರಿನ (Bengaluru) ನಮ್ಮ ಮೆಟ್ರೋದಲ್ಲಿ ಏಪ್ರಿಲ್ 21 ರಂದು ನಡೆದಿತ್ತು. ಹೌದು ಪ್ರಯಾಣಿಕನೊಬ್ಬ (Passenger) ಮೆಟ್ರೋದಲ್ಲಿ ಕುಳಿತು ವಿಮಲ್ ಪಾನ್ ಮಸಾಲ ಜಗಿದಂತಹ ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆದ ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್) ನಮ್ಮ ಮೆಟ್ರೋದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆ. ಹೌದು ಬಿಎಂಆರ್‌ಸಿಎಲ್ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದ್ದು, ಇದೀಗ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಮೆಟ್ರೋದೊಳಗೆ ತೆಗೆದುಕೊಂಡು ಹೋಗುವುದನ್ನು ಬ್ಯಾನ್ ಮಾಡಿದೆ. ಆಗಾಗ್ಗೆ ತಪಾಸಣೆಯ ಜೊತೆಗೆ ಮೆಟ್ರೋದೊಳಗೆ ತಂಬಾಕು ಆಧಾರಿತ ಉತ್ಪನ್ನಗಳನ್ನು ಸೇವಿಸುವ ಪ್ರಯಾಣಿಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಕೈಗೊಂಡಿದೆ. ಜೊತೆಗೆ ಸ್ವಚ್ಛತೆಯನ್ನು ಉತ್ತೇಜಿಸಲು ಮತ್ತು ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ ಅಭಿಯಾನಗಳನ್ನು ಸಹ ಪ್ರಾರಂಭಿಸಿದೆ.
ಏಪ್ರಿಲ್ 21 ರಂದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಕನೊಬ್ಬ ಗುಟ್ಕಾ ಜಗಿದಿದ್ದು, ಆತನನ್ನು ಸಹ ಪ್ರಯಾಣಿಕ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು. ಈ ಕುರಿತ ವಿಡಿಯೋವನ್ನು ಮದನ್ ರೆಡ್ಡಿ (Madhan Reddy) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಘಟನೆ ನಡೆದ ಬಳಿಕ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.
ಇದನ್ನೂ ಓದಿ: ಫೋನ್ ಕಸಿದುಕೊಂಡ ಶಿಕ್ಷಕಿಯ ಜಡೆ ಹಿಡಿದು ಚಪ್ಪಲಿಯಲ್ಲಿ ಬಾರಿಸಿದ ವಿದ್ಯಾರ್ಥಿನಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
@OfficialBMRCL
People started eating #panmasala in #NammaMetro.
At 10.00am near Sampige road, I questioned him & made him drink water immediately to swallow it avoiding spitting in metro premises.Looks like we need panmasala scanners at security check🤦♂️@ChristinMP_@ajaydevgn pic.twitter.com/zbpADwTngU
— Madhan Reddy🇮🇳 (@MKC1_Reddy) April 18, 2025
ಮೆಟ್ರೋದಲ್ಲಿ ತಪಾಸಣೆಯನ್ನು ಇನ್ನಷ್ಟು ಹೆಚ್ಚು ಮಾಡಿದ್ದು, ಲೋಹ ಶೋಧಕಗಳು ತಂಬಾಕು ಉತ್ಪನ್ನಗಳನ್ನು ಗುರುತಿಸಲು ಸಾಧ್ಯವಾಗದ ಕಾರಣ, ಮೆಟ್ರೋದ ಎಲ್ಲಾ ನಿಲ್ದಾಣಗಳಲ್ಲೂ ಭೌತಿಕ ತಪಾಸಣೆಯನ್ನು ಜಾರಿಗೆ ತರುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬಿಎಂಆರ್‌ಸಿಎಲ್ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದ್ದು, ಇದೀಗ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಮೆಟ್ರೋದೊಳಗೆ ತೆಗೆದುಕೊಂಡು ಹೋಗುವುದನ್ನು ಬ್ಯಾನ್ ಮಾಡಿದೆ. ಪ್ಲಾಟ್‌ಫಾರ್ಮ್ ಭದ್ರತಾ ಸಿಬ್ಬಂದಿಗಳಿಗೆ ಅಪರಾಧಿಗಳನ್ನು ಗುರುತಿಸಲು ತರಬೇತಿ ನೀಡಲಾಗುತ್ತಿದೆ. ಆಗಾಗ್ಗೆ ತಪಾಸಣೆಯ ಜೊತೆಗೆ ಮೆಟ್ರೋದೊಳಗೆ ತಂಬಾಕು ಆಧಾರಿತ ಉತ್ಪನ್ನಗಳನ್ನು ಸೇವಿಸುವ ಪ್ರಯಾಣಿಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಕೈಗೊಂಡಿದೆ. ಜೊತೆಗೆ ಸ್ವಚ್ಛತೆಯನ್ನು ಉತ್ತೇಜಿಸಲು ಮತ್ತು ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ ಅಭಿಯಾನಗಳನ್ನು ಸಹ ಪ್ರಾರಂಭಿಸಿದೆ. ಈ ಉಪಕ್ರಮಗಳು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ಎಲ್ಲಾ ಪ್ರಯಾಣಿಕರಿಗೆ ಆಹ್ಲಾದಕರ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ