AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಎರಡು ವಾರಗಳ ಕಾಲ ಆಫೀಸಿನಿಂದ ಮನೆಗೆ 2.7 ಕಿಮೀ ನಡಿಗೆ; ಸಾಧಕ ಬಾಧಕ ಬಿಚ್ಚಿಟ್ಟ ಬೆಂಗಳೂರಿನ ಮಹಿಳೆ

ಮನೆಯಿಂದ ಸ್ವಲ್ಪ ದೂರ ಹೋಗಬೇಕೆಂದರೆ ವಾಹನ ಬೇಕೇ ಬೇಕು. ನಡೆದುಕೊಂಡು ಹೋಗಲು ಯಾರು ಇಷ್ಟ ಪಡಲ್ಲ. ಆದರೆ, ಬೆಂಗಳೂರಿನ ಮಹಿಳೆಯೊಬ್ಬರು ಟ್ರಾಫಿಕ್‌ನಿಂದ ತಪ್ಪಿಸಿಕೊಂಡಿದ್ದಾರೆ. ಈ ಮಹಿಳೆ ಎರಡು ವಾರಗಳ ಕಾಲ ಆಫೀಸಿನಿಂದ ಮನೆಗೆ ನಡೆದುಕೊಂಡು ಹೋಗಿದ್ದು, ಇದರಿಂದಾದ ಸಾಧಕ ಬಾಧಕಗಳ ಬಗ್ಗೆ ವಿವರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎರಡು ವಾರಗಳ ಕಾಲ ಆಫೀಸಿನಿಂದ ಮನೆಗೆ 2.7 ಕಿಮೀ ನಡಿಗೆ; ಸಾಧಕ ಬಾಧಕ ಬಿಚ್ಚಿಟ್ಟ ಬೆಂಗಳೂರಿನ ಮಹಿಳೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Mar 23, 2026 | 7:09 PM

Share

ಬೆಂಗಳೂರು, ಮಾರ್ಚ್ 23: ಬೆಂಗಳೂರು (Bengaluru) ಅಂದ್ರೆ ಮೊದಲು ನೆನಪಿಗೆ ಬರುವುದೇ ಟ್ರಾಫಿಕ್. ಈ ಟ್ರಾಫಿಕ್‌ನಲ್ಲಿ ಸಿಲುಕಿ ಟೈಮ್ ವೇಸ್ಟ್ ಮಾಡೋದಕ್ಕಿಂತ ನಡೆದುಕೊಂಡು ಹೋಗೋದೇ ಬೆಸ್ಟ್ ಎನ್ನುವ ಅಭಿಪ್ರಾಯವಿದ್ರೂ ಅಂತಹ ಸಾಹಸಕ್ಕೆ ಯಾರು ಕೈ ಹಾಕಲ್ಲ. ಬೆಂಗಳೂರಿನ ಮಹಿಳೆಯೊಬ್ಬರು ಎರಡು ವಾರಗಳ ಕಾಲ ಪ್ರತಿದಿನ ಸಂಜೆ ಆಫೀಸಿನಿಂದ ಮನೆಗೆ ನಡೆದುಕೊಂಡೇ ಹೋಗಿದ್ದಾರೆ. ಈ ವೇಳೆ ತನಗಾದ ಅನುಭವ ಹಂಚಿಕೊಂಡಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಿಲ್ಪಾ (silly_fied) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಫೀಸಿನಿಂದ ಮನೆಗೆ ನಡೆದುಕೊಂಡು ಹೋಗುವ ಮೂಲಕ ತನ್ನ ಪ್ರಯಾಣವನ್ನು ದೈನಂದಿನ ನಡಿಗೆಯೊಂದಿಗೆ ಹೇಗೆ ಬದಲಾಯಿಸಲು ನಿರ್ಧರಿಸಿದರು ಎಂದು ವಿವರಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Silpa (@silly_fied)

ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ನಾನು ಪ್ರತಿದಿನ ಆಫೀಸಿನಿಂದ ಮನೆಗೆ ನಡೆದುಕೊಂಡು ಹೋಗಲು ನಿರ್ಧರಿಸಿದೆ. ಗೂಗಲ್ ಮ್ಯಾಪ್ 2.7 ಕಿಲೋಮೀಟರ್ ಗೆ 38 ನಿಮಿಷಗಳು ಬೇಕು ಎಂದು ತೋರಿಸಿದ್ದವು. ಅದಕ್ಕಿಂತ ಹೆಚ್ಚು ಸಮಯ ಬೇಕಿತ್ತು. ಎರಡು ವಾರಗಳ ನಂತರ ನನ್ನ ಫಲಿತಾಂಶಗಳು ಇವಾಗಿದ್ದವು. ಸಾಧಕಗಳಲ್ಲಿ ನಾನು ಮೊದಲಿಗಿಂತ ಶಕ್ತಿವಂತಳಾಗಿದ್ದೇನೆ. ಆದರೆ, ಅನಾನುಕೂಲವೆಂದರೆ, ನಾನು ಎಳನೀರಿಗಾಗಿ 840 ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗ್ಳೂರಿನಲ್ಲಿ ತಿಂಗಳ ಬಾಡಿಗೆಗೆ 40,000 ರೂ ಖರ್ಚು ಮಾಡುವ ಹಿಂದಿನ ಕಾರಣ ವಿವರಿಸಿದ ವ್ಯಕ್ತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ವೈಟ್‌ಫೀಲ್ಡ್‌ನಲ್ಲಿ ನಡೆಯುವುದು ಸವಾರಿಗಿಂತ ಉತ್ತಮವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನನಗೆ ಇದು ಆಸಕ್ತಿದಾಯಕವೆನಿಸಿತು, ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ತುಂಬಾ ವಿಶಿಷ್ಟವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Mon, 23 March 26

Follow Us