“ಇದು ಕಾರು, ವಿಮಾನವಲ್ಲ”: ನೀವು ಬರುತ್ತಿದ್ದೀರಾ? ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಮೇಲೆ ಸಿಟ್ಟಾದ ಚಾಲಕ

ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್‌ಗಳ ವಿಚಿತ್ರ ವರ್ತನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪ್ರಯಾಣಿಕರೊಬ್ಬರು ಗೂಗಲ್ ಲಿಂಕ್ ಹಂಚಿಕೊಂಡಾಗ, ಡ್ರೈವರ್ “ಇದು ವಿಮಾನವಲ್ಲ, ಕಾರು!” ಎಂದು ಹೇಳಿ ಬುಕ್ಕಿಂಗ್ ರದ್ದುಗೊಳಿಸಿದ್ದಾರೆ. ಇದೀಗ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ತಮ್ಮದೇ ಅನುಭವಗಳನ್ನು ಕೂಡ ಇಲ್ಲಿ ಹಂಚಿಕೊಂಡಿದ್ದಾರೆ.

ಇದು ಕಾರು, ವಿಮಾನವಲ್ಲ: ನೀವು ಬರುತ್ತಿದ್ದೀರಾ? ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಮೇಲೆ ಸಿಟ್ಟಾದ ಚಾಲಕ
ಸಾಂದರ್ಭಿಕ ಚಿತ್ರ

Updated on: Dec 09, 2025 | 9:57 AM

ಬೆಂಗಳೂರು, ಡಿ.9: ಬೆಂಗಳೂರಿನಲ್ಲಿ (Bengaluru) ಕೆಲವೊಂದು ಕ್ಯಾಬ್​​​ ಡ್ರೈವರ್​​​ಗಳು ತಾಳ್ಮೆ ಕಳೆದುಕೊಂಡು ಪ್ರಯಾಣಿಕರಲ್ಲಿ ವಿಚಿತ್ರವಾಗಿ ವರ್ತಿಸುತ್ತಾರೆ.  ಪ್ರಯಾಣಿಕರು ಈ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುದಿಲ್ಲ. ಆದರೆ ಈ ಕ್ಯಾಬ್​​​ ಡ್ರೈವರ್​​​ಗಳು ಯಾಕೆ ಹೀಗೆ ವರ್ತಿಸುತ್ತಾರೆ ಎಂಬ ಪ್ರಶ್ನೆ ಮೂಡುವುದು ಖಂಡಿತ. ಇಲ್ಲೊಂದು ಅಂತಹದೇ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಪ್ರಯಾಣಿಕರೊಬ್ಬರು ಕ್ಯಾಬ್ ಚಾಲಕನೊಂದಿಗೆ ನಡೆದ ಹಾಸ್ಯಮಯ ಸಂಭಾಷಣೆ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ಅದು ಭಾರೀ ವೈರಲ್​​ ಆಗಿದೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಪ್ರಯಾಣಿಕರು ಕ್ಯಾಬ್​​​​ವೊಂದನ್ನು ಬುಕ್​​ ಮಾಡಿ ತಾನಿರುವ ವಿಳಾಸದ ಗೂಗಲ್​​​ ಲಿಂಕ್​​ನ್ನು ಹಂಚಿಕೊಂಡಿದ್ದಾರೆ. ಇದು ಚಾಲಕ ನಿಜವಾಗಿ ಎಲ್ಲಿದ್ದಾರೆ ಎಂಬುದನ್ನು ತಿಳಿಸುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲ ಪ್ರಯಾಣಿಕರು ಮಾಡುತ್ತಾರೆ.

ಇದನ್ನು ಹಂಚಿಕೊಂಡ ನಂತರ ಎಲ್ಲಿದ್ದೀರಾ? ಎಂದು ಕೇಳಿದ್ದಕ್ಕೆ, ಚಾಲಕ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ. ಇದು ವಿಮಾನವಲ್ಲ, ಕಾರು ಎಂದು ಬುಕಿಂಗ್​​​ ಅನ್ನು ಕ್ಯಾನ್ಸಲ್​​ ಮಾಡಿದ್ದಾರೆ. ಚಾಲಕನ ಈ ವರ್ತನೆಗೆ ಪ್ರಯಾಣಿಕ ಗೊಂದಲಕ್ಕೆ ಒಳಗಾಗಿದ್ದು,  ಈ ಬಗ್ಗೆ ಪ್ರಯಾಣಿಕ ರೆಡ್ಡಿಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನಾನು ಕಾರು ಬುಕ್​​ ಮಾಡಿ, ನೀವು ಬರುತ್ತಿದ್ದೀರಾ ಎಂದು ಕೇಳಿದಕ್ಕೆ, ಅಷ್ಟೊಂದು ಅರ್ಜೆಂಟ್​​ ಇದ್ದರೆ ಇನ್ನೊಂದು ಬುಕ್ ಮಾಡಿ. ಇದು ವಿಮಾನವಲ್ಲ, ಎಂದು ಬುಕಿಂಗ್​​​ ರದ್ದು ಮಾಡಿದ್ದಾರೆ. ಚಾಲಕ ಮಾಡಿದ್ದು ಸರಿಯೇ ಎಂದು ನೀವೇ ಕಮೆಂಟ್​​ ಮಾಡಿ” ಎಂದು ಪೋಸ್ಟ್​​​ನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಷನ್ ಶೋನಲ್ಲಿ ಜಿನ್ನಾ ಮರಿಮೊಮ್ಮಗಳು: ಹಾಟ್ ಆಗಿ ಕಾಣಿಸಿಕೊಂಡ ಎಲ್ಲಾ ವಾಡಿಯಾ

ಇಲ್ಲಿದೆ ನೋಡಿ ವೈರಲ್​​ ಪೋಸ್ಟ್:

 

My Uber driver is not in a good mood
byu/hariprasadrangan inBengaluru


ಈ ಬಗ್ಗೆ ರೆಡ್ಡಿಟ್​​ನ್ಲಲಿ ನೆಟ್ಟಿಗರು ಕೂಡ ತಮಗೆ ಆಗಿರುವ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಾನು ಒಮ್ಮೆ ಅದೇ ಪರಿಸ್ಥಿತಿಯಲ್ಲಿದ್ದೆ ಉಬರ್ ಚಾಲಕನಿಗೆ ಕರೆ ಮಾಡಿ ಪದೇ ಪದೇ ವಿಚಾರಿಸುತ್ತಿದ್ದೆ, ಕೆಲವೊಂದು ಬಾರಿ ಆಪ್ಲಿಕೇಶನ್​​ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಚಾಲಕನಿಗೆ ಕರೆ ಮಾಡಿದಾಗ ಅವರು ಸಿಟ್ಟಿನಿಂದ ನಾನು ಬರುತ್ತಿದ್ದೇನೆ, ಇದು ಹೆಲಿಕಾಪ್ಟರ್ ಅಲ್ಲ ಎಂದು ಹೇಳಿದ್ದಾರೆ. ಅದಕ್ಕೆ ನಾನು ಕೂಡ ಖಡಕ್​​ ಆಗಿ ಉತ್ತರಿಸಿದೆ, ಓ ದೇವರೇ, ನಾನು ಹೆಲಿಕಾಪ್ಟರ್ ಬುಕ್ ಮಾಡಿದೆ ಎಂದು ಭಾವಿಸಿದೆ ಎಂದು ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ನನಗೆ ನಗು ತರಿಸಿತು ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ