Viral: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಿಸಿ ಬಿಸಿ ಇಡ್ಲಿ-ದೋಸೆ, ಜತೆ ಕಾಫಿ ಸವಿದ ಗಾಯಕ ದಿಲ್ಜಿತ್ ದೋಸಾಂಜ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 06, 2024 | 5:16 PM

ತನ್ನ ಹಿಟ್‌ ಹಾಡುಗಳು ಹಾಗೂ ಆಕರ್ಷಕ ಸಂಗೀತ ಕಛೇರಿಗೆ ಹೆಸರುವಾಸಿಯಾಗಿರುವ ಪಂಜಾಬಿ ಪಾಪ್‌ ಗಾಯಕ ದಿಲ್ಜಿತ್‌ ದೋಸಾಂಜ್‌ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳಾದ ಬಿಸಿ ಬಿಸಿ ಇಡ್ಲಿ ದೋಸೆಯ ಜೊತೆಗೆ ಫಿಲ್ಟರ್‌ ಕಾಫಿಯನ್ನು ಸವಿದಿದ್ದಾರೆ. ದಿಲ್‌-ಲುಮಿನಾಟ್‌ ಕನ್ಸರ್ಟ್‌ ನಿಮಿತ್ತ ನಮ್ಮ ಬೆಂಗಳೂರಿಗೆ ಆಗಮಿಸಿದ ದಿಲ್ಜಿತ್‌ ಮೊದಲಿಗೆ ಐಕಾನಿಕ್ ರಾಮೇಶ್ವರಂ ಕೆಫೆಗೆ ಭೇಟಿ ಕೊಟ್ಟು ಇಡ್ಲಿ, ದೋಸೆ ಸವಿದಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ಬೆಂಗಳೂರಿನ ಇಂದಿರಾ ನಗರದಲ್ಲಿರುವ ʼದಿ ರಾಮೇಶ್ವರಂ ಕೆಫೆʼಯ ತಿಂಡಿ ತಿನಿಸುಗಳೆಂದರೆ ಹೆಚ್ಚಿನವರಿಗೆ ಬಹಳನೇ ಇಷ್ಟ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಇಲ್ಲಿ ಸಿಗುವ ಬಾಯಲ್ಲಿ ನೀರೂರಿಸುವಂತಹ ಘೀ ಪುಡಿ ಇಡ್ಲಿ, ಘೀ ಪುಡಿ ಮಸಾಲೆ ದೋಸೆ, ಪೊಂಗಲ್‌ ಇತ್ಯಾದಿ ದಕ್ಷಿಣ ಭಾರತದ ಸ್ಪೆಷಲ್‌ ಖಾದ್ಯಗಳ ಜೊತೆಗೆ ಇಲ್ಲಿ ಸಿಗುವ ಫಿಲ್ಟರ್‌ ಕಾಫಿಯನ್ನು ಸವಿಯಲು ಬರ್ತಿರ್ತಾರೆ. ಇದೀಗ ಪಂಜಾಬ್‌ ಪಾಪ್‌ ಗಾಯಕ ದಿಲ್ಜಿತ್‌ ದೋಸಾಂಜ್‌ ಕೂಡಾ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಬಿಸಿ ಬಿಸಿ ಇಡ್ಲಿ ದೋಸೆಯ ಜೊತೆಗೆ ಫಿಲ್ಟರ್‌ ಕಾಫಿಯನ್ನು ಸವಿದಿದ್ದಾರೆ. ದಿಲ್‌-ಲುಮಿನಾಟ್‌ ಕನ್ಸರ್ಟ್‌ ನಿಮಿತ್ತ ನಮ್ಮ ಬೆಂಗಳೂರಿಗೆ ಆಗಮಿಸಿದ ದಿಲ್ಜಿತ್‌ ಮೊದಲಿಗೆ ಐಕಾನಿಕ್ ರಾಮೇಶ್ವರಂ ಕೆಫೆಗೆ ಭೇಟಿ ಕೊಟ್ಟು ಇಡ್ಲಿ, ದೋಸೆ ಸವಿದಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ತನ್ನ ಹಿಟ್‌ ಹಾಡುಗಳು ಹಾಗೂ ಆಕರ್ಷಕ ಸಂಗೀತ ಕಛೇರಿಗೆ ಹೆಸರುವಾಸಿಯಾಗಿರುವ ಪಂಜಾಬಿ ಪಾಪ್‌ ಗಾಯಕ ದಿಲ್ಜಿತ್‌ ದೋಸಾಂಜ್‌ ಇದೀಗ ತಮ್ಮ ದಿಲ್‌-ಲುಮಿನಾಟ್‌ ಕನ್ಸರ್ಟ್‌ ಪ್ರವಾಸದಲ್ಲಿದ್ದಾರೆ. ಹೈದರಾಬಾದ್‌, ಲಕ್ನೋ, ಪುಣೆ, ಕೋಲ್ಕತ್ತಾ ಹೀಗೆ ದೇಶದ ಹಲವು ಕಡೆಗಳಲ್ಲಿ ಪ್ರದರ್ಶನವನ್ನು ನೀಡಿದ ಇವರು ಇಂದು ಬೆಂಗಳೂರಿನಲ್ಲಿ ಪ್ರದರ್ಶನವನ್ನು ನೀಡಲಿದ್ದಾರೆ. ಇದರ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ದಿಲ್ಜಿತ್‌ ಸೀದಾ ರಾಮೇಶ್ವರಂ ಕೆಫೆಗೆ ಹೋಗಿ ಅಲ್ಲಿ ಬಿಸಿ ಬಿಸಿ ಇಡ್ಲಿ ದೋಸೆಯೊಂದಿಗೆ ಒಂದು ಕಪ್ ಫಿಲ್ಟರ್‌ ಕಾಫಿಯನ್ನು ಸವಿದಿದ್ದಾರೆ.

ಇದನ್ನೂ ಓದಿ:  ಏನ್‌ ಸ್ಟೆಪ್ಸ್‌ ಗುರು; ಈ ಮದುಮಗನ ಬಿಂದಾಸ್‌ ಡ್ಯಾನ್ಸ್‌ಗೆ ಫಿದಾ ಆಗದವರೇ ಇಲ್ಲ…

ದಿಲ್ಜಿತ್‌ ದೋಸಾಂಜ್‌ (diljithdosanjh) ಬೆಂಗಳೂರಿನ ಪ್ರವಾಸದ ಈ ವಿಶೇಷ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಬೆಂಗಳೂರು ಪ್ರವಾಸದಲ್ಲಿರುವ ದಿಲ್ಜಿತ್‌ ಕಾರಲ್ಲಿ ಕುಳಿತು ರಾಮೇಶ್ವರಂ ಕೆಫೆಯ ಬಿಸಿ ಬಿಸಿ ಇಡ್ಲಿ ದೋಸೆ ಮತ್ತು ಒಂದು ಕಪ್ ಫಿಲ್ಟರ್‌ ಕಾಫಿಯನ್ನು ಸವಿಯುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಇದೀಗ ಎಲ್ಲರ ಗಮನ ಸೆಳೆದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ