ಈಗಿನ ಹರಿಬರಿ ಯುಗದಲ್ಲಿ ಒಂದು ಕಪ್ ಕಾಫಿ ಕುಡಿಬೇಕಂದ್ರೂ ಜನ ಥಟ್ಟನೆ ಕಾಫಿಯನ್ನೂ ಕೂಡಾ ಝೊಮ್ಯಾಟೊ, ಸ್ವಿಗ್ಗಿಯಂತಹ ಆಹಾರ ವಿತರಣಾ ಅಪ್ಲಿಕೇಶನ್‌ಗಳಿಂದ ಆರ್ಡರ್ ಮಾಡ್ತಾರೆ. ಆದ್ರೆ ಕೆಲವೊಂದು ಬಾರಿ ಈ ಆರ್ಡರ್‌ಗಳು ತಪ್ಪಾಗಿ ಬರುವ ಸಾಧ್ಯತೆ ಇರುತ್ತದೆ. ಇಂತಹ ಎಡವಟ್ಟಿನ ಸಾಕಷ್ಟು ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆ ನಡೆದಿದ್ದು, ಝೊಮ್ಯಾಟೊ ಜನಪ್ರಿಯ ಯುಟ್ಯೂಬರ್‌ಗೆ ಬೆಲ್ಲದ ಚಹಾದ ಬದಲಿಗೆ ಸಿಹಿ ರಹಿತ ಚಹಾ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಅವರು ದೂರನ್ನು ನೀಡಿದಾಗ, ಸರ್ ದಯವಿಟ್ಟು ಈಗ ಈ ಚಹಾ ಕುಡಿಯಿರಿ, ಮರುಪಾವತಿ ನಾವು ಮಾಡ್ತೇವೆ ಎಂದು ಝೊಮ್ಯಾಟೊ ಹೇಳಿಕೊಂಡಿದ್ದು, ಇವರಿಬ್ಬರ ನಡುವಿನ ಈ ಹೃದಯಸ್ಪರ್ಶಿ ಸಂಭಾಷಣೆ ಇದೀಗ ವೈರಲ್ ಆಗುತ್ತಿದೆ.
ಯುಟ್ಯೂಬರ್ ಇಶಾನ್ ಶರ್ಮಾ (Ishansharma7390) ಅವರಿಗೆ ಝೊಮ್ಯಾಟೊ ಬೆಲ್ಲದ ಚಹಾ ಬದಲಿಗೆ ಸಿಹಿ ರಹಿತ ಚಹಾ ಕಲಿಸಿಕೊಟ್ಟಿದೆ. ಈ ಬಗ್ಗೆ ಇಶಾನ್ ಝೊಮ್ಯಾಟೊ ಸಪೋರ್ಟ್ ಎಕ್ಸಿಕ್ಯೂಟಿವ್‌ಗೆ ಮೆಸೇಜ್ ಮಾಡಿದ್ದು, ಸರ್ ದಯವಿಟ್ಟು ಈಗ ಈ ಚಹಾ ಕುಡಿಯಿರಿ, ಮರುಪಾವತಿ ನಾವು ಮಾಡ್ತೇವೆ ಎಂದು ಝೊಮ್ಯಾಟೊ ಹೇಳಿಕೊಂಡಿದೆ. ಈ ಸ್ವಾರಸ್ಯಕರ ಮಾತುಕತೆಯ ಸ್ಕ್ರೀನ್‌ಶಾಟ್ ಫೋಟೋವನ್ನು ಇಶಾನ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Zomato got pookie chat support😭 pic.twitter.com/TlDQyTBRDS
— Ishan Sharma (@Ishansharma7390) January 15, 2025
ವೈರಲ್ ಫೋಟೋದಲ್ಲಿ ಝೊಮ್ಯಾಟೋ ಮತ್ತು ಇಶಾನ್ ನಡುವಿನ ಸ್ವಾರಸ್ಯಕರ ಸಂಭಾಷಣೆಯನ್ನು ಕಾಣಬಹುದು. ಇಶಾನ್ ಮೆಸೇಜ್ ಮಾಡಿ ನನಗೆ ಈ ಚಹಾವನ್ನು ಕುಡಿಯಲು ಆಗ್ತಿಲ್ಲ, ಈಗ ಏನ್ ಮಾಡೋದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಝೊಮ್ಯಾಟೊ ಸರ್ ಈಗ ದಯವಿಟ್ಟು ಈ ಚಹಾ ಕುಡಿಯಿರಿ, ಬೆಲ್ಲದ ಮರುಪಾವತಿಯನ್ನು ನಾವು ಮಾಡ್ತೇವೆ ಎಂದು ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಇಶಾನ್ ನನಗೆ ಬೆಲ್ಲವಿಲ್ಲದ ಚಹಾ ಕುಡಿಯಲು ಸಾಧ್ಯವಿಲ್ಲ ಎಂದು ಹೇಳಿದಾಗ ಝೊಮ್ಯಾಟೊ ʼಮಾರ್ನಿಂಗ್ ಟೀ ಇಲ್ಲದೆ ಹೇಗೆ ಅನಿಸುತ್ತದೆ ಎಂಬುದು ನಮ್ಗೆ ಗೊತ್ತು, ಹಾಗಾಗಿ ಪ್ಲೀಸ್ ಸಾರ್ ಈಗ ಈ ಚಹಾವನ್ನು ಕುಡಿಯಿರಿ ಎಂಬ ಸಂದೇಶ ಕಳುಹಿಸಿದೆ.
ಇದನ್ನೂ ಓದಿ: ಮೈಸೂರು: ಪರ ಪುರಷನೊಂದಿಗೆ ಓಡಿಹೋಗಿದ್ದ ಹೆಂಡ್ತಿಯ ಶಿರಚ್ಛೇದ ಮಾಡಿದ ಪತಿ
ಜನವರಿ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 7 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಷ್ಟು ಸಹಾನುಭೂತಿಯಿಂದ ಮಾತನಾಡಿದ್ದಾರೆ ನೋಡಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಝೊಮ್ಯಾಟೊ ಯಾವಾಗಪ್ಪಾ ಇಷ್ಟು ಮುದ್ದಾಗಿ ಸಂಭಾಷಣೆ ಮಾಡಲು ಶುರು ಮಾಡಿದ್ದುʼ ಎಂಬ ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ