Viral: ಬೆಂಗಳೂರಿನಿಂದ ಊರಿಗೆ ಹೋದ್ಮೇಲೆ ನಮ್ಮ ಸ್ವಂತ ಮನೆ ಮನೆಯಂತೆ ಅನಿಸುತ್ತಿಲ್ಲ

ಬೆಂಗಳೂರಿನಲ್ಲಿ ಉದ್ಯೋಗಕ್ಕೆಂದು ಬಂದ ಯುವಕರು ತಮ್ಮ ತವರೂರಿಗೆ ಹೋದಾಗ ಅತಿಥಿಗಳಂತೆ ಭಾಸವಾಗುವ ಭಾವನಾತ್ಮಕ ಅನುಭವದ ಬಗ್ಗೆ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಪೋಸ್ಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದು ನೋವಿನ ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ತಮ್ಮ ಮನೆ ಈಗ 'ಕೇವಲ ನಾಸ್ಟಾಲ್ಜಿಯಾ' ಎಂದು ಹಲವರು ಅಭಿಪ್ರಾಯಪಟ್ಟಿದ್ದು, ಇದು ವೃತ್ತಿಜೀವನ ಮತ್ತು ವೈಯಕ್ತಿಕ ಸಂಬಂಧಗಳ ನಡುವಿನ ಸಮತೋಲನದ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

Viral: ಬೆಂಗಳೂರಿನಿಂದ ಊರಿಗೆ ಹೋದ್ಮೇಲೆ ನಮ್ಮ ಸ್ವಂತ ಮನೆ ಮನೆಯಂತೆ ಅನಿಸುತ್ತಿಲ್ಲ
ಸಾಂದರ್ಭಿಕ ಚಿತ್ರ

Updated on: Oct 24, 2025 | 12:34 PM

ಬೆಂಗಳೂರಿಗೆ (Bengaluru )ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿಯಿದೆ, ಅದೆಷ್ಟೋ ಯುವಕರಿಗೆ ಈ ಜಿಲ್ಲೆ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದೆ. ಬೇರೆ ಜಿಲ್ಲೆಯಿಂದ, ರಾಜ್ಯದಿಂದ, ದೇಶದಿಂದ ಇಲ್ಲಿಗೆ ಉದ್ಯೋಗಕ್ಕೆ ಅಥವಾ ಯಾವುದೋ ಉದ್ದೇಶಕ್ಕೆ ಬಂದಿರುತ್ತಾರೆ. ಆದರೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವವರು ತಮ್ಮ ಊರು ಬಿಟ್ಟು ಬಂದ ಮೇಲೆ ತಮ್ಮ ಸ್ವಂತ ಊರಿಗೆ ಅತಿಥಿಯಾಗಿರುತ್ತಾರೆ. ಇಂತಹ ಭಾವನೆಗಳು ಹುಟ್ಟಿಕೊಳ್ಳುವುದು ನಿಜ, ಊರಿಗೆ ಹೋದಾಗ ನಾವು ನಮ್ಮ ಮನೆಗೆ ಅತಿಥಿಯಾಗುತ್ತದೆ. ಮನೆಯಲ್ಲೂ ಕೂಡ ಹಾಗೆ ಎಲ್ಲರೂ ನೀಡುವ ಮರ್ಯಾದೆಯೇ ಬೇರೆ,  ಕೆಲವೊಮ್ಮೆ ನಮಗೂ ಅನ್ನಿಸುತ್ತದೆ, ಹೌದ ನಮ್ಮ ಮನೆಗೆ ನಾವು ಅತಿಥಿಯ? ಎಂದು. ಈ ಬಗ್ಗೆ ಯುವತಿಯೊಬ್ಬರು ಪೋಸ್ಟ್​​ವೊಂದನ್ನು ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​​ ಬೇರೆ ಬೇರೆ ಊರಿನಲ್ಲಿರುವವರಿಗೆ ಭಾವನಾತ್ಮಕ ಸ್ಪರ್ಶ ನೀಡಿದೆ.

ಈ ಪೋಸ್ಟ್​​ನಲ್ಲಿ ಪ್ರೌಢಾವಸ್ಥೆ ಹಾಗೂ ಮನೆಯ ಸಂಬಂಧಗಳ ಬಗ್ಗೆ ಪ್ರಶ್ನಿಸಿದ್ದಾರೆ. ಪೋಸ್ಟ್​​ನಲ್ಲಿ ಏನಿದೆ? “ನಾನು ವರ್ಷಕ್ಕೆ ಎರಡು ಬಾರಿ ಮನೆಗೆ ಹೋಗುತ್ತೇನೆ, ಅದು ಕೂಡ 20 ದಿನಕ್ಕೆ, ಆದರೆ ಬೆಂಗಳೂರಿನಲ್ಲಿ ವಾಸಿಸಲು ಪ್ರಾರಂಭಿಸಿದಾಗಿನಿಂದ, ನನ್ನ ಮನೆ ಇನ್ನು ಮನೆಯಂತೆ ಭಾಸವಾಗುವುದಿಲ್ಲ ಎಂದು ಈ ಪೋಸ್ಟ್​​​​ನಲ್ಲಿ ಹೇಳಿದ್ದಾರೆ. ಒಂದು ಕಾಲದಲ್ಲಿ ಆರಾಮದಾಯಕ ಸ್ಥಳವಾಗಿದ್ದ ಸ್ಥಳವು ಈಗ “ಕೇವಲ ನಾಸ್ಟಾಲ್ಜಿಯಾ” ಆಗಿ ಮಾರ್ಪಟ್ಟಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಟಾಕಿ ಶಬ್ದಕ್ಕೆ 100 ನಾಯಿಗಳು ನಾಪತ್ತೆ

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

ಇದು ಪ್ರೌಢಾವಸ್ಥೆಯೇ? ನನಗೆ ಮಾತ್ರ ಈ ಭಾವನೆ ಬರುತ್ತದೆಯೇ ಎಂದು ಪೋಸ್ಟ್​​​ನಲ್ಲಿ ಕೇಳಿದ್ದಾರೆ. ಈ ಪೋಸ್ಟ್​​ 43,700 ವೀಕ್ಷಣೆಗಳು ಮತ್ತು 600 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಸೋಶಿಯಲ್​​ ಮೀಡಿಯಾದಲ್ಲಿ ಇದಕ್ಕೆ ಭಾವನಾತ್ಮಕ ಕಮೆಂಟ್​​ಗಳು ಬಂದಿದೆ. ತಮ್ಮ ಊರುಗಳಿಂದ ದೂರದಲ್ಲಿ ಇರುವ ಅದೆಷ್ಟೋ ಯುವಕ-ಯುವತಿಯರಿಗೆ ಅದರಲ್ಲೂ ವಿಶೇಷವಾಗಿ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಂತಹ ನಗರಗಳಲ್ಲಿ ಇರುವವರಿಗೆ ಈ ಪೋಸ್ಟ್​​​ ಹೃದಯಕ್ಕೆ ತಟ್ಟಿದೆ. “ನಮಗೆ ರೆಕ್ಕೆಗಳು ಬಂದ ನಂತರ ನಮ್ಮ ಬೇರುಗಳನ್ನು ಮರೆತುಬಿಡುತ್ತಿರಬಹುದು” ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ನಾನು ನನ್ನ ಶಿಕ್ಷಣವನ್ನು ಊರಿನಲ್ಲಿಯೇ ಮುಗಿಸಿದೆ, ಅಂದರೆ ಸುಮಾರು 22 ವರ್ಷಗಳು. ಆದರೆ ಕಳೆದ 6-7 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದ ಕಾರಣ ಮನೆಗೆ ಹೋದಾಗ ವಿಚಿತ್ರ ವ್ಯಕ್ತಿಯಾಗುತ್ತಿದೆ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ. ಬೆಂಗಳೂರು ನನಗೆ ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ, ಅದು ನನಗೆ ಮನೆಯಲ್ಲಿ ಸಿಗುವುದಿಲ್ಲ ಆದರೆ ಸ್ವಲ್ಪ ಸಮಯದ ನಂತರ, ನನ್ನ ಹೆತ್ತವರನ್ನು ಮತ್ತು ಮನೆಯ ವಾತಾವರಣವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:33 pm, Fri, 24 October 25