AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಟಾಕಿ ಶಬ್ದಕ್ಕೆ 100 ನಾಯಿಗಳು ನಾಪತ್ತೆ

ದೀಪಾವಳಿ ಪಟಾಕಿಗಳಿಂದ ಬೆಂಗಳೂರಿನಲ್ಲಿ ನೂರಾರು ನಾಯಿಗಳು ನಾಪತ್ತೆಯಾಗಿವೆ. ಯುನೈಟೆಡ್ ಫಾರ್ ಕಂಪ್ಯಾಷನ್ ಸಂಸ್ಥೆ ಪ್ರಕಾರ, ಪಟಾಕಿ ಶಬ್ದಕ್ಕೆ ಹೆದರಿ ತಮ್ಮ ಏರಿಯವನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗಾಗಿ ಅಲೆದಾಡುತ್ತಿವೆ. ಇದರಿಂದ ಆಹಾರವಿಲ್ಲದೆ, ಇತರೆ ನಾಯಿಗಳಿಂದ ಅಪಾಯಕ್ಕೆ ಸಿಲುಕುತ್ತಿವೆ. ಈ ದೀಪಾವಳಿಯಲ್ಲಿ ನಾಯಿಗಳ ಸುರಕ್ಷತೆ ಮತ್ತು ಅವುಗಳ ಮೇಲಿನ ಪರಿಣಾಮಗಳ ಬಗ್ಗೆ ಮಾನವರು ಅರಿಯುವುದು ಅಗತ್ಯ ಇದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪಟಾಕಿ ಶಬ್ದಕ್ಕೆ 100 ನಾಯಿಗಳು ನಾಪತ್ತೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 24, 2025 | 10:51 AM

Share

ಬೆಂಗಳೂರು, ಅ.24: ದೀಪಾವಳಿಯಂದು ಎಲ್ಲರಿಗೂ ಸಂಭ್ರಮ, ಏಕೆಂದರೆ ಪಟಾಕಿ ಸಿಡಿಸಿ (Firecrackers pets)ಅ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ ನಾಯಿಗಳಿಗೆ ಇದು ಭಯದ ದಿನವಾಗಿರುತ್ತದೆ, ಹೌದು ಏಕೆಂದರೆ ಪಟಾಕಿ ಶಬ್ದಕ್ಕೆ ಅವುಗಳು ಎಲ್ಲೋಲು ಓಡಿ ಹೋಗುತ್ತದೆ. ಪಟಾಕಿಯಿಂದ ತನ್ನ ಬೀದಿ ಬಿಟ್ಟು, ಹಸಿವು ತಡೆದುಕೊಂಡು ಯಾವುದೋ ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ಹೋಗುತ್ತದೆ. ಇದೀಗ ಬೆಂಗಳೂರು ಬೀದಿ ನಾಯಿಗಳ ಪರಿಸ್ಥಿತಿ ಕೂಡ ಅದೇ ಆಗಿದೆ. ಬೆಂಗಳೂರಿನಲ್ಲಿ ಎರಡು ದಿನ ಪಟಾಕಿ ಸಿಡಿಸಿದ ಕಾರಣ ನಾಯಿಗಳು ತಮ್ಮ ಏರಿಯಾ ಬಿಟ್ಟು ಎಲ್ಲೂ ನಾಪತ್ತೆಯಾಗಿದೆ. ಯುನೈಟೆಡ್ ಫಾರ್ ಕಂಪ್ಯಾಷನ್ ಪ್ರತಿನಿಧಿಯ ಪ್ರಕಾರ ವಾಟ್ಸಾಪ್‌ನಲ್ಲಿ ಪ್ರಾಣಿ ಪ್ರಿಯರ ಸಮುದಾಯವಾದ ವಾಯ್ಸ್ ಫಾರ್ ಅವರ್ ವಾಯ್ಸ್‌ಲೆಸ್ ಮೂಲಕ ನಾಲ್ಕು ದಿನಗಳಲ್ಲಿ ಸುಮಾರು ನೂರು ನಾಯಿ ನಾಪತ್ತೆ ಪ್ರಕರಣಗಳು ವರದಿಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ .

ಶಬ್ದದಿಂದ ಬೀದಿ ನಾಯಿಗಳ ಭಯಗೊಂಡಿದೆ. ಈ ಬಗ್ಗೆ ನಾವು ಮನುಷ್ಯರು ಅರಿತುಕೊಳ್ಳಬೇಕು ಎಂದು ಯುನೈಟೆಡ್ ಫಾರ್ ಕಂಪ್ಯಾಷನ್ ಹೇಳಿದೆ. ನಾಯಿಗಳು ಪಟಾಕಿ ಶಬ್ದಕ್ಕೆ ಭಯಗೊಂಡು ತನ್ನ ಊರನ್ನು ಬಿಟ್ಟು ಬೇರೆ ಕಡೆ ಹೋಗುತ್ತದೆ, ಆಶ್ರಯಕ್ಕಾಗಿ ಬೀದಿ ಬೀದಿ ಅಲೆಮಾರಿಯಂತೆ ತಿರುಗಾಡುತ್ತದೆ. ಊಟ ಇಲ್ಲದೆ, ಬೇರೆ ನಾಯಿಗಳ ದಾಳಿಗೆ ಒಳಗಾಗುತ್ತದೆ ಎಂದು ಹೇಳಿದ್ದಾರೆ. ರಾಜಾಜಿನಗರದ ನಿವಾಸಿಯೊಬ್ಬರ ಗೋಲ್ಡನ್ ರಿಟ್ರೈವರ್ ನಾಯಿ ಕಣ್ಮರೆಯಾಗಿದೆ. ಸಂಭ್ರಮದ ನಡುವೆ ಇದೊಂದು ದುಃಖಕರ ವಿಚಾರ, ಆ ಶ್ವಾನಕ್ಕಾಗಿ ರಾತ್ರಿ, ಹಗಲು ಎನ್ನದೇ ಹುಡುಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮದ್ವೆಯಲ್ಲಿ ಮದ್ಯ, ನಾನ್ ವೆಜ್ ಇರಲ್ಲ; ವಿಚಿತ್ರ ಮದುವೆ ಆಮಂತ್ರಣ ಪತ್ರಿಕೆ ವೈರಲ್

ಇನ್ನು ಇಂತಹದೇ ಒಂದು ಘಟನೆ ಬನಶಂಕರಿಯಲ್ಲೂ ನಡೆದಿದೆ. ಅಲ್ಲಿಯೂ ಕೂಡ ಲ್ಯಾಬ್ರಡಾರ್ ಶ್ವಾನ ಕಳೆದು ಹೋಗಿತ್ತು. ಆದರೆ ಅದು ಮನೆ ಪಕ್ಕಾದ ಖಾಲಿ ಜಾಗದಲ್ಲಿ ಇತ್ತು ಎಂದು ಹೇಳಿದ್ದಾರೆ. ಇದೀಗ ಅದು ನಮ್ಮ ಕೈ ಸೇರಿದೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ. ಈ ವರ್ಷದ ದೀಪಾವಳಿಯಂದು ನಾಯಿಗಳ ಮೇಲೆ ಪಟಾಕಿಯನ್ನು ಎಸೆದು ಕ್ರೌರ್ಯ ಮೆರೆದಿರುವ ಘಟನೆ ಕಡಿಮೆಯಾಗಿದೆ ಎಂದು ಯುನೈಟೆಡ್ ಫಾರ್ ಕಂಪ್ಯಾಷನ್ ಹೇಳಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ