ಬೆಂಗಳೂರು: ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ನಗರದ ಮತ್ತಿಕೆರೆ ಪ್ರದೇಶದ ನಿವಾಸಿಯಾಗಿರುವ 43 ವರ್ಷದ ವ್ಯಕ್ತಿ, 2016 ರಲ್ಲಿ ಸಬ್ಕಾ ಡೆಂಟಿಸ್ಟ್ ಕ್ಲಿನಿಕ್ ಅನ್ನು ಸಂಪರ್ಕಿಸಿದ್ದರು. ಚಿಕಿತ್ಸೆಯ ಸಮಯದಲ್ಲಿ, ದಂತವೈದ್ಯರು ಆ ವ್ಯಕ್ತಿಗೆ ಆರ್ಥೊಡಾಂಟಿಕ್ ಅಗತ್ಯವಿದೆ ಎಂದು ಸೂಚಿಸಿದ್ದರು. ದಂತವೈದ್ಯರ ಸಲಹೆಯನ್ನು ಪಡೆದುಕೊಂಡು, ಹಲ್ಲಿಗೆ ಕ್ಲಿಪ್ ಹಾಕಿಸಿಕೊಂಡಿದ್ದಾನೆ. ಒಟ್ಟಾರೆಯಾಗಿ 34,000 ರೂ. ಖರ್ಚಾಗಿದೆ. ಜೊತೆಗೆ ಎರಡು ವರ್ಷಗಳವರೆಗಿನ ಚಿಕಿತ್ಸೆಗೆ 50,000 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಿದ್ದಾನೆ.
ಆದಾಗ್ಯೂ, ಮಾರ್ಚ್ 2019 ರಲ್ಲಿ ಹಲ್ಲಿನ ಕ್ಲಿಪ್ ತೆಗೆದ ನಂತರ, ಅವರ ಎಂಟು ಹಲ್ಲುಗಳು ಮತ್ತು ಇತರ ಎರಡರ ದಂತಕವಚವು ಹಾನಿಗೊಳಗಾಗಿರುವುದು ತಿಳಿದುಬಂದಿದೆ. ಜೊತೆಗೆ ಅವನ ಒಸಡುಗಳಲ್ಲಿ ಊತ ಪ್ರಾರಂಭವಾಗಿದ್ದು, ಆಹಾರ ಅಗಿಯುವಾಗ ತೀವ್ರವಾದ ನೋವನ್ನು ಅನುಭವಿಸಿದ್ದನು. ಶೀಘ್ರದಲ್ಲೇ ಮತ್ತೆ ಅದೇ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದಾನೆ. ಆದರೆ ಅಲ್ಲಿದ್ದ ಹೊಸ ವೈದ್ಯರು ಅವನ ಕೆಲವು ಹಲ್ಲುಗಳನ್ನು ಸಿಮೆಂಟ್ ಮಾಡಿ ಮತ್ತಷ್ಟು ಹಾನಿ ಮತ್ತು ನೋವನ್ನು ಉಂಟುಮಾಡಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.
ಇದನ್ನೂ ಓದಿ: 1 ಕಪ್ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಯಾಕಿಷ್ಟು ದುಬಾರಿ?; ವಿಡಿಯೋ ವೈರಲ್
ಕ್ಲಿನಿಕ್‌ನಲ್ಲಿನ ಅವರ ಅನುಭವದಿಂದ ನಿರಾಶೆಗೊಂಡಿದ್ದ ಈತ ನಂತರ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಅಲ್ಲಿನ ದಂತ ವೈದ್ಯರು ಚಿಕಿತ್ಸೆಗಾಗಿ ಹೆಚ್ಚಿನ ಹಣ ಪಾವತಿಸಲು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ವ್ಯಕ್ತಿ ಸಬ್ಕಾ ಕ್ಲಿನಿಕ್ ವಿರುದ್ಧ ದೂರು ನೀಡಲು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಬಳಿಕ ಈ ವ್ಯಕ್ತಿ ಡೆಂಟಲ್ ಕ್ಲಿನಿಕ್ ವಿರುದ್ಧ ಬೆಂಗಳೂರಿನ ಗ್ರಾಹಕರ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಪರಿಣಾಮ ಈ ವ್ಯಕ್ತಿಗೆ ಇದೀಗ 2 ಲಕ್ಷ ರೂ. ಪರಿಹಾರ ನೀಡಲಾಗಿದೆ. ಜೊತೆಗೆ ಟ್ರೀಟ್‌ಮೆಂಟ್‌ಗಾಗಿ ಖರ್ಚು ಮಾಡಿದ್ದ 50,000 ರೂಪಾಯಿಯನ್ನು ರೀಫಂಡ್ ಮಾಡಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Fri, 2 February 24