AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಸರಿನಲ್ಲಿ ಸಿಲುಕಿಕೊಂಡು ಒದ್ದಾಡಿದ ಪುಟ್ಟ ಆನೆ, ಇವರ ಮಾನವೀಯತೆಗೆ ಒಂದು ಸಲಾಂ 

ಕಾಡು ಪ್ರಾಣಿಗಳು ಹೆಚ್ಚಾಗಿ ಆಹಾರವನ್ನರಸುತ್ತಾ ಒಂದು ಸ್ಥಳದಿಂದ  ಇನ್ನೊಂದು ಸ್ಥಳಕ್ಕೆ ಸುತ್ತಾಡುತ್ತಿರುತ್ತವೆ. ಹೀಗಿರುವಾಗ ಕೆಲವೊಂದು ಸಂದರ್ಭಗಳಲ್ಲಿ ಪ್ರಾಣಿಗಳು, ಅದರಲ್ಲೂ ವಿಶೇಷವಾಗಿ ಆನೆಗಳು ಕೆಸರಲ್ಲಿ ಬಿದ್ದು ಅಥವಾ ಹೊಂಡದಲ್ಲಿ ಬಿದ್ದು ಪರದಾಡುವಂತ ಸ್ಥಿತಿ ಎದುರಾಗುತ್ತದೆ. ಇಂತಹ ಹಲವಾರು ಘಟನೆಗಳು ಅರಣ್ಯ ಪ್ರದೇಶಗಳಲ್ಲಿ ನಡೆಯತ್ತಲೇ ಇರುತ್ತವೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಆಹಾರವನ್ನರಸುತ್ತಾ ಬಂದಂತಹ ಮರಿಯಾನೆಯೊಂದು ಕೆಸರಿನಲ್ಲಿ ಸಿಲುಕಿ ಮೇಲೇಳಲು ಒದ್ದಾಡುತ್ತಿತ್ತು. ಈ ಮರಿಯಾನೆಯನ್ನು ರಕ್ಷಿಸಲು ರಕ್ಷಣಾ ಕಾರ್ಯತಂಡವು ಚುರುಕಾಗಿ ಕೆಲಸ ಮಾಡಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಮಾನವೀಯ ಗುಣವು  ಪ್ರತಿಯೊಬ್ಬ ಮನುಷ್ಯನಲ್ಲೂ ಜೀವಂತವಾಗಿರಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

Viral Video: ಕೆಸರಿನಲ್ಲಿ ಸಿಲುಕಿಕೊಂಡು ಒದ್ದಾಡಿದ ಪುಟ್ಟ ಆನೆ, ಇವರ ಮಾನವೀಯತೆಗೆ ಒಂದು ಸಲಾಂ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Feb 02, 2024 | 10:36 AM

Share

ಈಗೀನ ಕಾಲದಲ್ಲಿ ಮಾನವನಲ್ಲಿ ಮಾನವೀಯತೆ ಸತ್ತು ಹೋಗಿದೆ ಅಂತ ಹಲವರು ಆಗಾಗ್ಗೆ ಹೇಳುತ್ತಿರುತ್ತಾರೆ. ಮನುಷ್ಯ ಆತನ ಸ್ವಾರ್ಥಕ್ಕಾಗಿ ಮಾತ್ರ ಜೀವಿಸುತ್ತಾನೆ ಹೊರತು, ಬೇರೊಬ್ಬರಿಗೆ ಕಿಂಚಿತ್ತೂ ಸಹಾಯ ಮಾಡಲಾರ. ತಮ್ಮವರಿಗೆ ಸಹಾಯ ಮಾಡದ ಆತ, ಮೂಕ ಪ್ರಾಣಿಗಳಿಗೆ ಒಂದು ಹೊತ್ತಿನ ಊಟ ಹಾಕುವನೇ ಅಂತೆಲ್ಲಾ ಹಲವರು ಹೇಳುತ್ತಿರುತ್ತಾರೆ. ಈ ಸಮಾಜದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನೋಡಿದಾಗ ನಿಜವಾಗಿಯೂ ಮನುಷ್ಯರಲ್ಲಿ ಮಾನವೀಯತೆ ಸತ್ತು ಹೋದಂತೆ ಭಾಸವಾಗುತ್ತದೆ. ಆದರೆ ಇದೀಗ  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಈ ಭಾವನಾತ್ಮಕ ವಿಡಿಯೋ ಮನುಷ್ಯರಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ಈ ಘಟನೆ ಒಂದೆರೆಡು ವರ್ಷಗಳ ಹಿಂದೆ ಕಿನ್ಯಾ ದೇಶದಲ್ಲಿ ನಡೆದಿದ್ದು, ಇದೀಗ ಈ ಘಟನೆಯ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ. ಕಿನ್ಯಾದ ವನ್ಯಜೀವಿ ಧಾಮ ಪ್ರದೇಶವೊಂದರಲ್ಲಿ ಆಹಾರವನ್ನರಸುತ್ತಾ ಬಂದಂತಹ ಮರಿಯಾನೆಯೊಂದು  ಆಯ ತಪ್ಪಿ ಕೆಸರಲ್ಲಿ ಬಿದ್ದು ಮೇಲೇಳಲು ಆಗದೆ, ಸತತ ಎರಡು ದಿನಗಳಿಂದ ಅದೇ ಕೆಸರಿನಲ್ಲಿ ಜೀವ ರಕ್ಷಣೆಗಾಗಿ ಪರದಾಡುತ್ತಿತ್ತು. ಈ ಮನಕಲಕುವ ದೃಶ್ಯ ಅದೇಗೋ ಮನುಷ್ಯರ ಕಣ್ಣಿಗೆ ಬಿದ್ದಿದ್ದು, ನಂತರ ರಕ್ಷಣಾ ತಂಡವನ್ನು ಕರೆಸಿ ಮರಿಯಾನೆಯನ್ನು ರಕ್ಷಿಸಲಾಯಿತು. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.  ಈ ವೈರಲ್  ವೈರಲ್ ವಿಡಿಯೋವನ್ನು @ThebestFigen ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಾನವೀಯತೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಆನೆಯ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಮರಿಯಾನೆಯೊಂದು ಕೆಸರಲ್ಲಿ ಸಿಲುಕಿ, ಮೇಲೇಳಲು ಆಗದೆ ಅಸಹಾಯಕ ಪರಿಸ್ಥಿತಿಯಲ್ಲಿ ಬಿದ್ದಿರುವುದನ್ನು ಕಾಣಬಹುದು. ಈ ಮುಗ್ಧ ಜೀವಿಯ ಒದ್ದಾಡವನ್ನು ನೋಡಲಾಗದೆ ರಕ್ಷಣಾ ತಂಡವು ಹೆಲಿಕಾಪ್ಟರ್ ಮತ್ತು ಕಾರ್ ಗಳಲ್ಲಿ ಮರಿಯಾನೆಯ ರಕ್ಷಣಾ ಕಾರ್ಯಕ್ಕೆ ಧಾವಿಸುತ್ತದೆ. ನಂತರ ರಕ್ಷಣಾ ತಂಡದ ಸದಸ್ಯರು ಕೆಸರಿಗಿಳಿದು, ಆನೆಯ ಸೊಂಟದ ಭಾಗಕ್ಕೆ ಒಂದು ಹಗ್ಗವನ್ನು ಕಟ್ಟಿ, ಆ ಹಗ್ಗದ ಇನ್ನೊಂದು ಭಾಗವನ್ನು ಕಾರಿಗೆ ಕಟ್ಟಿ, ನಿಧಾನವಾಗಿ ಆನೆಯನ್ನು ಕೆಸರಿನಿಂದ ಮೇಲಕ್ಕೆತ್ತಲು ಪ್ರಯತ್ನಿಸುತ್ತಾರೆ. ಹೀಗೆ ರಕ್ಷಣಾ ತಂಡದ ಸತತ ಪ್ರಯತ್ನದಿಂದ  ಆನೆಯನ್ನು ಯಶಸ್ವಿಯಾಗಿ ಕೆಸರಿನಿಂದ ಮೇಲಕ್ಕೆತ್ತಲಾಯಿತು.  ಈ ಭಾವನಾತ್ಮಕ ದೃಶ್ಯ ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದೆ.

ಇದನ್ನೂ ಓದಿ: ಯಾಕೋ ಟಿವಿ ಆಫ್ ಮಾಡಿದ್ದು? ಮಾಲೀಕನ ಮೇಲೆ ಮುನಿಸಿಕೊಂಡ ಶ್ವಾನ 

ಜನವರಿ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 18 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ರಕ್ಷಣಾ ತಂಡದ ಕಾರ್ಯಕ್ಕೆ ನೆಟ್ಟಿಗರು ಕಮೆಂಟ್ಸ್ ಮೂಲಕ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಒಬ್ಬ ಬಳಕೆದಾರರು ʼಮುಗ್ಧ ಜೀವಿಯನ್ನು ರಕ್ಷಿಸಿದ ರಕ್ಷಣಾ ತಂಡಕ್ಕೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾ ಭಾವನಾತ್ಮವಾಗಿದೆʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಾನವೀಯತೆಯೂ ಇನ್ನೂ ಜೀವಂತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Fri, 2 February 24