AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಯಾಕೋ ಟಿವಿ ಆಫ್ ಮಾಡಿದ್ದು? ಮಾಲೀಕನ ಮೇಲೆ ಮುನಿಸಿಕೊಂಡ ಶ್ವಾನ 

ಸಾಮಾಜಿಕ ಜಾಲತಾಣದಗಳಲ್ಲಿ ಮುದ್ದು ಶ್ವಾನಗಳ ಕುರಿತ ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಬಹುತೇಕ ವಿಡಿಯೋಗಳು ನಮ್ಮ ಮನಸ್ಸಿನ ಒತ್ತಡ, ನೋವನ್ನು ದೂರ ಮಾಡಿ ಮುಖದಲ್ಲಿ ನಗು ತರಿಸುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು,  ಟಿ.ವಿ ಆಫ್ ಮಾಡಿದ್ದಕ್ಕೆ ಶ್ವಾನಗಳೆರಡು ಕೋಪಗೊಂಡು ಮನೆಯ ಮಾಲೀಕನ ಮೇಲೆ ರಗಾಡಿವೆ. ಈ ಹಾಸ್ಯಮಯ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. 

Viral Video: ಯಾಕೋ ಟಿವಿ ಆಫ್ ಮಾಡಿದ್ದು? ಮಾಲೀಕನ ಮೇಲೆ ಮುನಿಸಿಕೊಂಡ ಶ್ವಾನ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Feb 01, 2024 | 6:09 PM

Share

ಸಾಮಾನ್ಯವಾಗಿ ಮಕ್ಕಳಿಗೆ ಈ ಕಾರ್ಟೂನ್ ನೋಡುವುದೆಂದರೆ ತುಂಬಾನೇ ಇಷ್ಟ. ತಮ್ಮ ಬಿಡುವಿನ ಸಮಯಗಳಲ್ಲಿ, ಶಾಲೆಯಿಂದ ಬಂದ ತಕ್ಷಣ ಹೋಮ್ ವರ್ಕ್ ಮಾಡದೆಯೇ ಟಿ.ವಿ ಆನ್ ಮಾಡಿ ಕಾರ್ಟೂನ್ ನೋಡಲು ಟಿವಿ ಮುಂದೆ ಕುಳಿತು ಬಿಡುತ್ತಾರೆ. ಪೋಷಕರಿಗೆ ಸೀರಿಯಲ್, ಕ್ರಿಕೆಟ್, ಸಿನೆಮಾ ಗಳನ್ನು ನೋಡಲು ಬಿಡದೆ ಮಕ್ಕಳು ಯಾವಾಗಲೂ ಕಾರ್ಟೂನ್ ಚಾನೆಲ್ ನೋಡುತ್ತಿರುತ್ತಾರೆ. ಅದ್ರಲ್ಲೂ ಪೋಷಕರು ಕಾರ್ಟೂನ್ ಚಾನೆಲ್ ಚೇಂಜ್ ಮಾಡಿದ್ರಂತೂ ಮಕ್ಕಳು ಸಿಕ್ಕಾಪಟ್ಟೆ ಅತ್ತು ಬಿಡುತ್ತಾರೆ, ಕೋಪ ಮಾಡಿಕೊಳ್ಳುತ್ತಾರೆ. ಕೇವಲ ಮಕ್ಕಳು ಮಾತ್ರ ಈ ಕಾರ್ಟೂನ್ ಚಾನೆಲ್ ನೋಡೋದು ಅಂತ ನೀವು ಅಂದುಕೊಂಡಿದ್ದೀರಾ. ಇಲ್ಲ ಕಣ್ರೀ ಮುದ್ದಿನ ಶ್ವಾನಗಳೂ ಕೂಡಾ ಕಾರ್ಟೂನ್ ನೋಡುತ್ತವೆ ಜೊತೆಗೆ ಮಕ್ಕಳಂತೆಯೇ ವರ್ತಿಸುತ್ತವೆ. ಇದಕ್ಕೆ ಸಾಕ್ಷಿಯಂತಿರುವ ಹಲವಾರು  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ.  ಇದೀಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಕಾರ್ಟೂನ್ ನೋಡುತ್ತಿದ್ದ ವೇಳೆ ಟಿ.ವಿ ಆಫ್ ಮಾಡಿದ್ದಕ್ಕೆ ಶ್ವಾನಗಳೆರಡು ಮಕ್ಕಳಂತೆ ಕೋಪಗೊಂದು ಮನೆಯ ಮಾಲೀಕನ ಮೇಲೆ ರೇಗಾಡಿವೆ. ಈ ಹಾಸ್ಯಮಯ ವಿಡಿಯೋ ಪ್ರಾಣಿಪ್ರಿಯರ ಮನಗೆದ್ದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮನೆ ಮಾಲೀಕ ಟಿ.ವಿ ಆಫ್ ಮಾಡಿದ್ದಕ್ಕೆ ಮಕ್ಕಳಂತೆಯೇ ಕೋಪಗೊಂಡು ಯಾಕೋ ಟಿ.ವಿ ಆಫ್ ಮಾಡಿದ್ದು ನೀನು ಎಂದು ಶ್ವಾನಗಳೆರಡು ರೇಗಾಡಿವೆ.  ಈ ವೈರಲ್ ವಿಡಿಯೋವನ್ನು @animalifannorobe ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ  ಹಂಚಿಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಶ್ವಾನಗಳೆರಡು ರೂಮ್ ಅಲ್ಲಿ ಹಾಯಾಗಿ ಮಂಚದ ಮೇಲೆ ಮಲಗಿಕೊಂಡು ಬಹಳ ಕುತೂಹಲದಿಂದ ಟಿ.ವಿಯಲ್ಲಿ ಡೊರೇಮನ್ ಕಾರ್ಟೂನ್ ಶೋ ನೋಡುತ್ತಿದ್ದವು. ಆ ಸಂದರ್ಭದಲ್ಲಿ  ಟಿ.ವಿ ಆಫ್ ಮಾಡಿದ್ರೆ, ಈ ಶ್ವಾನಗಳು ಹೇಗೆ ಪ್ರತಿಕ್ರಿಯಿಸುತ್ತವೆ ಅಂತ ನೋಡಲು ಮನೆಯ ಮಾಲೀಕ  ಮೆಲ್ಲಗೆ ಟಿ.ವಿ ಆಫ್ ಮಾಡುತ್ತಾನೆ. ಇದ್ರಿಂದ ಕೋಪಗೊಂಡ ಶ್ವಾನಗಗಳೆರಡು ಯಾಕೋ ಟಿ.ವಿ ಆಫ್ ಮಾಡಿದ್ದು, ಬೇಗ ಟಿ.ವಿ ಆನ್ ಮಾಡಿದ್ರೆ ಸರಿ  ಅಂತ ಬೌ… ಬೌ… ಎಂದು ಜೋರಾಗಿ ಬೊಗಳಲು ಪ್ರಾರಂಭಿಸುತ್ತವೆ. ಈ ನಾಯಿಗಳೆರಡು ಟಿ.ವಿ ಆನ್ ಮಾಡಲು ಮಕ್ಕಳಂತೆ ಹಟ ಮಾಡುತ್ತಿರುವ ದೃಶ್ಯ ನೋಡುಗರ ಮೊಗದಲ್ಲಿ ನಗು ತರಿಸಿದೆ.

ಇದನ್ನೂ ಓದಿ: ಲೇಸ್ ಕರಿ; ಈ ವಿಶಿಷ್ಟ ರೆಸಿಪಿಯನ್ನು ನೀವೆನಾದ್ರೂ ಟ್ರೈ ಮಾಡ್ತೀರಾ?

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 14.6 ಮಿಲಿನಯನ್ ವೀಕ್ಷಣೆಗಳನ್ನು ಹಾಗೂ ಆರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಪಾಪ ಆ ಮಕ್ಕಳು ಶಾಂತಿಯುತವಾಗಿ ಟಿ.ವಿ ನೋಡಲು ಬಿಡ್ರಪ್ಪಾʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನನ್ನ ಮನೆಯಲ್ಲೂ ನಾಯಿಗಳಿವೆ, ಆದ್ರೆ ಅವುಗಳೂ ಯಾವತ್ತೂ ಟಿವಿ ನೋಡೋದೆ ಇಲ್ಲ. ಈ ಶ್ವಾನಗಳನ್ನು ಕಂಡು ಸ್ವಲ್ಪ ಆಶ್ಚರ್ಯವಾಯಿತುʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈಗೀಗ ಟಿವಿ ನೋಡುತ್ತಾ ಮಕ್ಕಳ ಬುದ್ಧಿ ಹಾಳಾಗುತ್ತಿದೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ಸಖತ್ ಫನ್ನಿಯಾಗಿದೆ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ