Viral News: ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟ; ಹುಡುಗಿಯ ಪ್ರಾಣಕ್ಕೆ ಸಂಚಕಾರ
ಕ್ಯಾಂಡಲ್ ಹಚ್ಚಿ ಉಗುರುಗಳಿಗೆ ಹಚ್ಚಿರುವ ಬಣ್ಣವನ್ನು ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸಿದ್ದಾಳೆ. ಇದ್ದಕ್ಕಿದ್ದ ಹಾಗೆ ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟಗೊಂಡಿದ್ದು, ಬಾಲಕಿ ಕುಳಿತು ಕೊಂಡಿದ್ದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ತಲೆ ಕೂದಲು ಸುಟ್ಟು ಹೋಗಿದ್ದು, ದೇಹದ ಇತರ ಭಾಗಗಳಲ್ಲಿ ಸುಟ್ಟ ಗಾಯಗಳಾಗಿವೆ.
ಬಣ್ಣ ಬಣ್ಣದ ನೇಲ್ ಪಾಲಿಶ್ ಅಂದರೆ ಯಾವ ಹೆಣ್ಣಿಗೆ ಇಷ್ಟ ಇಲ್ಲ ಹೇಳಿ. ತಮ್ಮ ಉಗುರುಗಳನ್ನು ಕಲರ್ ಫುಲ್ಗೊಳಿಸುವ ನೇಲ್ ಪಾಲಿಶ್ ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದೀಗ ಇದಕ್ಕೊಂದು ಉತ್ತಮ ನಿದರ್ಶನ ಎನ್ನುವಂತಹ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿದೆ. ಕೆನಡಿ(14) ಎಂಬ ಬಾಲಕಿ ಮೇಣದಬತ್ತಿಯ ಪಕ್ಕದಲ್ಲಿ ಕುಳಿತು ನೇಲ್ ಪಾಲಿಶ್ ಹಚ್ಚಲು ಮುಂದಾಗಿದ್ದಾಳೆ. ಈಗಾಗಲೇ ಉಗುರುಗಳಿಗೆ ಹಚ್ಚಿರುವ ಬಣ್ಣ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸಿದ್ದಾಳೆ.ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟಗೊಂಡಿದೆ. ಪರಿಣಾಮ ಬಾಲಕಿಯ ಕೂದಲು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ದೇಹದ ಇತರ ಭಾಗಗಳಲ್ಲಿಯೂ ಸಹ ಸುಟ್ಟ ಗಾಯಗಳಾಗಿವೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.
ರಾತ್ರಿ ಮೇಣದ ಬತ್ತಿಯನ್ನು ಹಚ್ಚಿ ಪಕ್ಕದಲ್ಲೇ ಕುಳಿತು ತನ್ನ ಉಗುರುಗಳಿಗೆ ಹಚ್ಚಿರುವ ಬಣ್ಣವನ್ನು ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸಿದ್ದಾಳೆ. ಇದ್ದಕ್ಕಿದ್ದ ಹಾಗೆ ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟಗೊಂಡಿದ್ದು, ಬಾಲಕಿ ಕುಳಿತು ಕೊಂಡಿದ್ದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹರಡದಂತೆ ತಡೆಯಲು ಪ್ರಯತ್ನಿಸಿದ ಪರಿಣಾಮ ತಲೆ ಕೂದಲು ಸೇರಿದಂತೆ, ಕೈ, ಕಾಲು ಹಾಗೂ ತೊಡೆ ಭಾಗಗಳಿಗೆ ಬೆಂಕಿ ತಗುಲಿದ್ದು, ಕೂಡಲೇ ನೋವಿನಿಂದ ಕಿರುಚಿಕೊಂಡಿದ್ದಾಳೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನೂ ಓದಿ: 1 ಕಪ್ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಯಾಕಿಷ್ಟು ದುಬಾರಿ?; ವಿಡಿಯೋ ವೈರಲ್
ತನ್ನ ಈ ಅನುಭವವನ್ನು ಆಕೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದು, ಇಂತಹ ಘಟನೆ ಇನ್ನು ಮುಂದೆ ನಡೆಯದಂತೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನೇಲ್ ಪಾಲಿಶ್ ರಿಮೂವರ್ ತಯಾರಿಕೆಯಲ್ಲಿ ಆಲ್ಕೊಹಾಲ್ಯುಕ್ತ ಅಂಶವನ್ನು ಬಳಸಲಾಗುವುದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನೇಲ್ ಪಾಲಿಶ್ ರಿಮೂವರ್ ಸೇರಿದಂತೆ ಸ್ಯಾನಿಟೈಸರ್ ಬಳಸುವಂತಹ ಸಂದರ್ಭಗಳಲ್ಲಿ ಬೆಂಕಿಯಿಂದ ದೂರವಿರಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ