Bengaluru: ಒಂಟಿತನ ಕಾಡುತ್ತಿದೆ; ಮರುಮದುವೆಗೆ ಸಿದ್ಧವಾದ 83ರ ವೃದ್ಧ

50 ವರ್ಷ ಮೇಲ್ಪಟ್ಟವರಿಗಾಗಿ ಬೆಂಗಳೂರಿನಲ್ಲಿ ಆಯೋಜಿಸಲಾದ ಈ ಮ್ಯಾಚ್ ಮೇಕಿಂಗ್ ಕಾರ್ಯಕ್ರಮದಲ್ಲಿ 83 ವರ್ಷದ ವೃದ್ಧರೊಬ್ಬರು ಭಾಗವಹಿಸಿದ್ದು, ತನಗೆ ಒಂಟಿತನ ಕಾಡುತ್ತಿರುವ ಕಾರಣ ತಾನೂ ಸಹ ಸಂಗಾತಿಯನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ವೃದ್ಧನಿಗೆ ಸ್ವಲ್ಪ ನಿರಾಸೆಯಾಗಿದೆ.

Bengaluru: ಒಂಟಿತನ ಕಾಡುತ್ತಿದೆ; ಮರುಮದುವೆಗೆ ಸಿದ್ಧವಾದ 83ರ ವೃದ್ಧ
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Feb 02, 2024 | 4:08 PM

ಬೆಂಗಳೂರು: ಡೆಕ್ಕನ್ ಹೆರಾಲ್ಡ್ ವರದಿ ಪ್ರಕಾರ, ಬೆಂಗಳೂರಿನಲ್ಲಿ ಆಯೋಜಿಸಲಾದ ಈ ಮ್ಯಾಚ್ ಮೇಕಿಂಗ್ ಕಾರ್ಯಕ್ರಮದಲ್ಲಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಜನರು ಭಾಗವಹಿಸಿದ್ದರು. ಮ್ಯಾಚ್‌ಮೇಕಿಂಗ್ ಈವೆಂಟ್‌ನ ಸಂಘಟಕರ ಪಟ್ಟಿಯಲ್ಲಿ 83 ವರ್ಷದ ವೃದ್ಧ ಭಾಗವಹಿಸಿದ್ದು, ತನಗೆ ಒಂಟಿತನ ಕಾಡುತ್ತಿರುವ ಕಾರಣ ತಾನೂ ಸಹ ಸಂಗಾತಿಯನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. 50 ವರ್ಷ ಮೇಲ್ಪಟ್ಟವರಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪುರುಷರು ಮತ್ತು ಮಹಿಳೆಯರು ಸೇರಿದಂತೆ ಒಟ್ಟು 37 ಜನರು ಭಾಗವಹಿಸಿದ್ದರು. ಮರುಮದುವೆ ಮತ್ತು ಲಿವ್-ಇನ್ ರಿಲೇಷನ್​​​ಶಿಪ್​​​​ಗಾಗಿ ಉತ್ತಮ ಸಂಗಾತಿಯನ್ನು ಹುಡುಕುತ್ತಿರುವವರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವೃದ್ಧ, ‘ನನ್ನ ಹೆಂಡತಿ 18 ವರ್ಷಗಳ ಹಿಂದೆ ತೀರಿಕೊಂಡಳು. ಮಕ್ಕಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ನಾನು ಒಂಟಿತನ ಅನುಭವಿಸುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಬರುವಂತೆ ನನ್ನ ಮಗಳು ಪ್ರೋತ್ಸಾಹ ನೀಡಿದ್ದಳು ಎಂದು ಹೇಳಿಕೊಂಡಿದ್ದಾಳೆ. ಆದರೆ ಈ ಕಾರ್ಯಕ್ರಮದಲ್ಲಿ ವೃದ್ಧನಿಗೆ ಸ್ವಲ್ಪ ನಿರಾಸೆಯಾಗಿದೆ. ಏಕೆಂದರೆ, ಈವೆಂಟ್‌ನಲ್ಲಿ ಕೇವಲ ಏಳು ಮಹಿಳೆಯರು ಮಾತ್ರ ಭಾಗವಹಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನ ಡೆಂಟಲ್‌ ಕ್ಲಿನಿಕ್‌ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು; 2 ಲಕ್ಷ ರೂ. ಪರಿಹಾರ ಧನ

ಕಾರ್ಯಕ್ರಮ ಆಯೋಜಿಸಿದ್ದ ಎನ್ ಜಿಒ ಸಂಸ್ಥಾಪಕಿ ಎನ್.ಎಂ.ರಾಜೇಶ್ವರಿ ಮಾತನಾಡಿ, ‘ಮಹಿಳೆಯರು ಕಡಿಮೆ ಇದ್ದಾರೆ ಎಂದು ದೂರಬೇಡಿ. ಏಕೆಂದರೆ, ಈ ಮಹಿಳೆಯರು ಇಲ್ಲಿಗೆ ಬರಲು ಸಾಕಷ್ಟು ಧೈರ್ಯ ತೋರಿದ್ದಾರೆ. ಸಂಗಾತಿಯನ್ನು ಹುಡುಕಲು ವಯಸ್ಸು ಅಡ್ಡಿಯಾಗುವುದಿಲ್ಲ. ದೇಶದಲ್ಲಿ ಲಿವ್ ಇನ್ ಕಾನೂನುಬಾಹಿರವಲ್ಲ. ನಿಮ್ಮ ಸ್ವಂತ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಹೈದರಾಬಾದ್ ಮೂಲದ ಈ ಎನ್‌ಜಿಒ 2010 ರಿಂದ 50 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರು ಅಥವಾ ವಿಚ್ಛೇದಿತರಿಗೆ 500 ಕ್ಕೂ ಹೆಚ್ಚು ವಿವಾಹಗಳು ಮತ್ತು ಲಿವ್-ಇನ್ ರಿಲೇಷನ್​​ಶಿಪ್​​​ ಮಾಡಿಸಿಕೊಟ್ಟಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ