AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೈಟ್ ಕ್ಲಬ್​​ನಲ್ಲಿ ಮೋದಿ ಭಾಷಣದ ರಿಮಿಕ್ಸ್ ಡಿಜೆ ಸಾಂಗ್, ಶೀಘ್ರದಲ್ಲೇ ಥೈಲ್ಯಾಂಡಿನಲ್ಲಿ ಬಿಜೆಪಿ ಸರ್ಕಾರ ರಚನೆ

ಡಿಜೆ ಕಲಾವಿದರು ಹಲವಾರು ಅದ್ಭುತ ಹಾಡುಗಳ ಸಂಯೋಜನೆಗಳನ್ನು ಮಾಡುತ್ತಿರುತ್ತಾರೆ. ಇಂತಹ ಹಾಡುಗಳು ನಮ್ಮನ್ನು ಕುಣಿಸುವಂತೆ ಮಾಡುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಡಿಜೆ ಹಾಡಿನ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಥೈಲ್ಯಾಂಡಿನ ಪಟ್ಟಾಯದ ನೈಟ್ ಕ್ಲಬ್ ಒಂದರಲ್ಲಿ ಪ್ರಧಾನಿ ಮೋದಿಯವರ ಭಾಷಣದ ತುಣುಕುಗಳಿರುವ ರಿಮಿಕ್ಸ್ ಡಿಜೆ ಸಾಂಗ್​​ನ್ನು ಪ್ಲೇ ಮಾಡಲಾಗಿದ್ದು,  ಈ ಡಿಜೆ ಹಾಡಿಗೆ ಪಾರ್ಟಿಯಲ್ಲಿ ನೆರೆದಿದ್ದವರೆಲ್ಲಾ ಸಖತ್ ಸ್ಟೆಪ್ಸ್ ಹಾಕುತ್ತಾ  ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ  ವೈರಲ್ ಆಗಿದೆ.

Viral Video: ನೈಟ್ ಕ್ಲಬ್​​ನಲ್ಲಿ ಮೋದಿ ಭಾಷಣದ ರಿಮಿಕ್ಸ್ ಡಿಜೆ ಸಾಂಗ್, ಶೀಘ್ರದಲ್ಲೇ ಥೈಲ್ಯಾಂಡಿನಲ್ಲಿ ಬಿಜೆಪಿ ಸರ್ಕಾರ ರಚನೆ
ಮಾಲಾಶ್ರೀ ಅಂಚನ್​
| Edited By: |

Updated on: Feb 02, 2024 | 5:06 PM

Share

ʼಥೈಲ್ಯಾಂಡ್ʼ ವಿದೇಶ ಪ್ರವಾಸ ಮಾಡಬೇಕು ಎಂದು ಬಯಸುವ ಜನರ ಕನಸಿನ ದೇಶವಾಗಿದೆ. ವಿಶೇಷವಾಗಿ ಈ ಯುವ ಜನತೆ ನೈಟ್ ಟೈಮ್ ಅಲ್ಲಿ ಸಖತ್ ಮೋಜು ಮಸ್ತಿ ಮಾಡಬೇಕೆಂದು ಥೈಲ್ಯಾಂಡಿನ ಪಟ್ಟಾಯಕ್ಕೆ ಹೋಗಲು ಬಯಸುತ್ತಾರೆ. ಇಲ್ಲಿ ಮೋಜು ಮಸ್ತಿ ಮಾಡಲು ಸಾಕಷ್ಟು ಪರ್ಫೆಕ್ಟ್ ಸ್ಥಳಗಳಿವೆ. ಅದರಲ್ಲೂ ಈ  ಪಟ್ಟಾಯ  ವರ್ಣರಂಜಿತ ಡಿಸ್ಕೋ ಬಾರ್ಗಳು, ವಾಕಿಂಗ್ ಸ್ಟ್ರೀಟ್, ನೈಟ್ ಕ್ಲಬ್ ಗಳಿಗೆ ಬಹಳನೇ ಫೇಮಸ್. ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿನ ನೈಟ್ ಕ್ಲಬ್,  ಡಿಜೆ ನೈಟ್ ಅನುಭವವನ್ನು ಪಡೆಯಬೇಕೆಂದು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ವಾಕಿಂಗ್ ಸ್ಟ್ರೀಟ್, ನೈಟ್ ಕ್ಲಬ್​​ಗಳಲ್ಲಿ ಪ್ರವಾಸಿಗರು ಹ್ಯಾಂಗ್ ಔಟ್ ಮಾಡುವ  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಶೇಷ ವಿಡಿಯೋವೊಂದು ಹರಿದಾಡುತ್ತಿದ್ದು, ಪಟ್ಟಾಯದ ನೈಟ್ ಕ್ಲಬ್ ಒಂದರಲ್ಲಿ ಪ್ರಧಾನಿ ಮೋದಿಯವರ ಭಾಷಣದ ತುಣುಕುಗಳಿರುವ  ರಿಮಿಕ್ಸ್ ಡಿಜೆ ಸಾಂಗ್​​ನ್ನು ಪ್ಲೇ ಮಾಡಲಾಗಿದ್ದು,  ಈ ಡಿಜೆ ಹಾಡಿಗೆ ಪಾರ್ಟಿಯಲ್ಲಿ ನೆರೆದಿದ್ದವರೆಲ್ಲಾ ಸಖತ್ ಸ್ಟೆಪ್ಸ್ ಹಾಕುತ್ತಾ  ಎಂಜಾಯ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು,ಬಿಜೆಪಿ ಸರ್ಕಾರ ಆದಷ್ಟು ಬೇಗ ಥೈಲ್ಯಾಂಡಿನಲ್ಲೂ ಪಕ್ಷ ಸ್ಥಾಪಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ ಅಂತ ನೆಟ್ಟಿಗರು ಹೇಳಿದ್ದಾರೆ.

ಈ ವೈರಲ್ ವಿಡಿಯೋವನ್ನು @keh ke Peheno ಎಂಬ X  ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಥೈಲ್ಯಾಂಡ್ ನಲ್ಲಿ ಬಿಜೆಪಿ ಸರ್ಕಾರ; ಪಟ್ಟಾಯದ ನೈಟ್ ಕ್ಲಬ್ ನ ದೃಶ್ಯಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ:

&

ವೈರಲ್ ವಿಡಿಯೋದಲ್ಲಿ ಪಟ್ಟಾಯದ ನೈಟ್ ಕ್ಲಬ್ ಒಂದರಲ್ಲಿ ಪ್ರಧಾನಿ ಮೋದಿಯವರ  ಭಾಷಣದ ತುಣುಕುಗಳಿರುವ ರಿಮಿಕ್ಸ್ ಡಿಜೆ ಸಾಂಗ್ ಒಂದನ್ನು ಪ್ಲೇ ಮಾಡಿರುವುದನ್ನು ಕಾಣಬಹುದು. ಈ ಡಿಜೆ ಹಾಡಿಗೆ ನೈಟ್ ಕ್ಲಬ್ ಅಲ್ಲಿ ನೆರೆದಿದ್ದವರೆಲ್ಲಾ  ಸಖತ್ ಆಗಿ ಸ್ಟೆಪ್ಸ್ ಹಾಕುತ್ತಾ ಹ್ಯಾಂಗ್ ಔಟ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈ ಯುವತಿ ಬಳಿ ಯಮ ಒಂದು ಕ್ಷಣ ಬಂದು ಹೋದ, ಆದರೆ ಈಕೆಗೆ ರಕ್ಷಕನಾಗಿ ನಿಂತ ಕಂಡಕ್ಟರ್

ಫೆಬ್ರವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಆರು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿವೆ. ಹಾಗೂ ಹಲವಾರು ಕಮೆಂಟ್ಸ್​​​ಗಳು ಹರಿದು ಬಂದಿವೆ. ಒಬ್ಬ ಬಳಕೆದಾರರು ʼಬಹುಶಃ ಈ ಕ್ಲಬ್ ಮಾಲೀಕರು ಗುಜರಾತ್ ಅಥವಾ ಪಂಜಾಬಿನವರು ಆಗಿರ್ಬೇಕುʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ನಿಜವಾಗಿಯೂ ಪಟ್ಟಾಯದಲ್ಲಿನ ದೃಶ್ಯವೇʼ  ಅಂತ ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಶೀಘ್ರದಲ್ಲೇ ಥೈಲ್ಯಾಂಡಿನಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ