ಬೆಂಗಳೂರಿನ ಡೆಂಟಲ್‌ ಕ್ಲಿನಿಕ್‌ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು; 2 ಲಕ್ಷ ರೂ. ಪರಿಹಾರ ಧನ

ದಂತ ಚಿಕಿತ್ಸೆಯಿಂದ ತನ್ನ ಹತ್ತು ಹಲ್ಲುಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ 43 ವರ್ಷದ ವ್ಯಕ್ತಿಯೊಬ್ಬ ಡೆಂಟಲ್ ಕ್ಲಿನಿಕ್ ಮತ್ತು ಅದರ ದಂತ ವೈದ್ಯರ ವಿರುದ್ಧ ಮೊಕದ್ದಮೆ ಹೂಡಿದ್ದಾನೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ರೋಗಿ ಈ ಹಿಂದೆ ಪಾವತಿಸಿದ್ದ 50,000 ರೂಪಾಯಿ ಜೊತೆಗೆ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಕ್ಲಿನಿಕ್‌ಗೆ ನೋಟಿಸು ಕಳುಹಿಸಿದೆ.

ಬೆಂಗಳೂರಿನ ಡೆಂಟಲ್‌ ಕ್ಲಿನಿಕ್‌ ವಿರುದ್ಧ  ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲು; 2 ಲಕ್ಷ ರೂ. ಪರಿಹಾರ ಧನ
ಸಾಂದರ್ಭಿಕ ಚಿತ್ರImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on:Feb 02, 2024 | 2:44 PM

ಬೆಂಗಳೂರು: ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ನಗರದ ಮತ್ತಿಕೆರೆ ಪ್ರದೇಶದ ನಿವಾಸಿಯಾಗಿರುವ 43 ವರ್ಷದ ವ್ಯಕ್ತಿ, 2016 ರಲ್ಲಿ ಸಬ್ಕಾ ಡೆಂಟಿಸ್ಟ್ ಕ್ಲಿನಿಕ್ ಅನ್ನು ಸಂಪರ್ಕಿಸಿದ್ದರು. ಚಿಕಿತ್ಸೆಯ ಸಮಯದಲ್ಲಿ, ದಂತವೈದ್ಯರು ಆ ವ್ಯಕ್ತಿಗೆ ಆರ್ಥೊಡಾಂಟಿಕ್ ಅಗತ್ಯವಿದೆ ಎಂದು ಸೂಚಿಸಿದ್ದರು. ದಂತವೈದ್ಯರ ಸಲಹೆಯನ್ನು ಪಡೆದುಕೊಂಡು, ಹಲ್ಲಿಗೆ ಕ್ಲಿಪ್​​​ ಹಾಕಿಸಿಕೊಂಡಿದ್ದಾನೆ. ಒಟ್ಟಾರೆಯಾಗಿ 34,000 ರೂ. ಖರ್ಚಾಗಿದೆ. ಜೊತೆಗೆ ಎರಡು ವರ್ಷಗಳವರೆಗಿನ ಚಿಕಿತ್ಸೆಗೆ 50,000 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಿದ್ದಾನೆ.

ಎಂಟು ಹಲ್ಲುಗಳಿಗೆ ಹಾನಿ:

ಆದಾಗ್ಯೂ, ಮಾರ್ಚ್ 2019 ರಲ್ಲಿ ಹಲ್ಲಿನ ಕ್ಲಿಪ್​​ ತೆಗೆದ ನಂತರ, ಅವರ ಎಂಟು ಹಲ್ಲುಗಳು ಮತ್ತು ಇತರ ಎರಡರ ದಂತಕವಚವು ಹಾನಿಗೊಳಗಾಗಿರುವುದು ತಿಳಿದುಬಂದಿದೆ. ಜೊತೆಗೆ ಅವನ ಒಸಡುಗಳಲ್ಲಿ ಊತ ಪ್ರಾರಂಭವಾಗಿದ್ದು, ಆಹಾರ ಅಗಿಯುವಾಗ ತೀವ್ರವಾದ ನೋವನ್ನು ಅನುಭವಿಸಿದ್ದನು. ಶೀಘ್ರದಲ್ಲೇ ಮತ್ತೆ ಅದೇ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದಾನೆ. ಆದರೆ ಅಲ್ಲಿದ್ದ ಹೊಸ ವೈದ್ಯರು ಅವನ ಕೆಲವು ಹಲ್ಲುಗಳನ್ನು ಸಿಮೆಂಟ್ ಮಾಡಿ ಮತ್ತಷ್ಟು ಹಾನಿ ಮತ್ತು ನೋವನ್ನು ಉಂಟುಮಾಡಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.

ಇದನ್ನೂ ಓದಿ: 1 ಕಪ್​​​​ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಯಾಕಿಷ್ಟು ದುಬಾರಿ?; ವಿಡಿಯೋ ವೈರಲ್

ಕ್ಲಿನಿಕ್‌ನಲ್ಲಿನ ಅವರ ಅನುಭವದಿಂದ ನಿರಾಶೆಗೊಂಡಿದ್ದ ಈತ ನಂತರ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಅಲ್ಲಿನ ದಂತ ವೈದ್ಯರು ಚಿಕಿತ್ಸೆಗಾಗಿ ಹೆಚ್ಚಿನ ಹಣ ಪಾವತಿಸಲು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ವ್ಯಕ್ತಿ ಸಬ್ಕಾ ಕ್ಲಿನಿಕ್ ವಿರುದ್ಧ ದೂರು ನೀಡಲು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಬಳಿಕ ಈ ವ್ಯಕ್ತಿ ಡೆಂಟಲ್‌ ಕ್ಲಿನಿಕ್‌ ವಿರುದ್ಧ ಬೆಂಗಳೂರಿನ ಗ್ರಾಹಕರ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಪರಿಣಾಮ ಈ ವ್ಯಕ್ತಿಗೆ ಇದೀಗ 2 ಲಕ್ಷ ರೂ. ಪರಿಹಾರ ನೀಡಲಾಗಿದೆ. ಜೊತೆಗೆ ಟ್ರೀಟ್‌ಮೆಂಟ್‌ಗಾಗಿ ಖರ್ಚು ಮಾಡಿದ್ದ 50,000 ರೂಪಾಯಿಯನ್ನು ರೀಫಂಡ್‌ ಮಾಡಿಸಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:39 pm, Fri, 2 February 24

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್