Viral Video: ಲೇಸ್ ಕರಿ; ಈ ವಿಶಿಷ್ಟ ರೆಸಿಪಿಯನ್ನು ನೀವೆನಾದ್ರೂ ಟ್ರೈ ಮಾಡ್ತೀರಾ?
ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಲೇಸ್ ಚಿಪ್ಸ್ ಅಂದ್ರೆ ಬಹಳನೇ ಇಷ್ಟ. ಬಹುತೇಕ ನೀವೆಲ್ಲರೂ ಕೂಡಾ ಶಾಲಾ ಕಾಲೇಜು ದಿನಗಳಲ್ಲಿ ಈ ಲೇಸ್ ಚಿಪ್ಸ್ ಅನ್ನು ಬಾಯಿ ಚಪ್ಪರಿಸಿಕೊಂಡು ತಿಂದಿರುತ್ತೀರಿ ಅಲ್ವಾ. ಬಹುತೇಕ ಎಲ್ಲರೂ ಇಷ್ಟಪಟ್ಟು ತಿನ್ನುವ ಈ ಲೇಸ್ ಚಿಪ್ಸ್ ಅನ್ನು ಬಳಸಿಕೊಂಡು ಕೂಡಾ ವಿಶಿಷ್ಟ ಬಗೆಯ ಕರಿ ರೆಸಿಪಿಯನ್ನು ತಯಾರಿಸಬಹುದು ಎಂಬ ವಿಷ್ಯ ನಿಮ್ಗೆ ಗೊತ್ತಾ? ಅರೇ ಏನಿದು, ಕರುಮ್ ಕುರುಮ್ ಎಂದು ತಿನ್ನೋ ಲೇಸ್ ನಿಂದ ಅದ್ಯಾವ ಕರಿ ರೆಸಿಪಿ ತಯಾರಿಸಲು ಸಾಧ್ಯ? ಅಷ್ಟಕ್ಕೂ ಈ ವಿಶಿಷ್ಟ ರೆಸಿಪಿಯನ್ನು ಹೇಗೆ ತಯಾರಿಸೋದು ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೊವನ್ನು ಒಮ್ಮೆ ನೋಡಿ.
ಈ ಕುಕ್ಕಿಂಗ್ ಇಷ್ಟ ಪಡೋರು, ಆಹಾರ ಪ್ರಿಯರು ಅಡುಗೆಗಳಲ್ಲಿ ತರಹೇವಾರಿ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಮಹಿಳೆಯೊಬ್ಬರು ಮಕ್ಕಳು ಸಿಕ್ಕಾಪಟ್ಟೆ ಇಷ್ಟಪಟ್ಟು ತಿನ್ನುವಂತಹ ಲೇಸ್ ಚಿಪ್ಸ್ ಬಳಸಿಕೊಂಡು ಅದ್ರಿಂದ ವಿಶಿಷ್ಟ ಕರಿ ರೆಸಿಪಿಯನ್ನು ತಯಾರಿಸಿದ್ದಾರೆ. ಈ ಲೇಸ್ ಕರಿ ರೆಸಿಪಿ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಲೇಸ್ ಚಿಪ್ಸ್ ನಲ್ಲೂ ಕರಿ ರೆಸಿಪಿ ತಯಾರಿಸಬಹುದು ಎಂಬ ವಿಷ್ಯಾನೇ ಗೊತ್ತಿರ್ಲಿಲ್ವೇ ಅಂತ ನೆಟ್ಟಿಗರು ಆಶ್ವರ್ಯಪಟ್ಟಿದ್ದಾರೆ. ಅಷ್ಟಕ್ಕೂ ಈ ವಿಶಿಷ್ಟ ರೆಸಿಪಿಯನ್ನು ಹೇಗೆ ತಯಾರಿಸೋದು ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೊವನ್ನು ಒಮ್ಮೆ ನೋಡಿ.
ಈ ವೈರಲ್ ವಿಡಿಯೋವನ್ನು @puviyakitchen ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಹೋಮ್ ಮೇಡ್ ಲೇಸ್ ಕರಿ ರೆಸಿಪಿ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ವಿಶಿಷ್ಟ ಬಗೆಯ ಲೇಸ್ ಕರಿ ರೆಸಿಪಿಯನ್ನು ತಯಾರಿಸುತ್ತಿರು ದೃಶ್ಯವನ್ನು ಕಾಣಬಹುದು.
ಲೇಸ್ ಕರಿ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಸುಲಭವಾಗಿ ಲೇಸ್ ಕರಿ ತಯಾರಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿಡಿಯೋದಲ್ಲಿ ಆ ಮಹಿಳೆ ಮೊದಲಿಗೆ ಗ್ಯಾಸ್ ಒಲೆ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಸ್ವಲ್ಪ ಚಕ್ಕೆ, ಲವಂಗ, ಏಲಕ್ಕಿಯನ್ನು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳುತ್ತಾರೆ. ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಕರಿಬೇವಿನ ಸೊಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳುತ್ತಾರೆ.
ಈರುಳ್ಳಿ ಚೆನ್ನಾಗಿ ಬಾಡಿದ ಬಳಿಕ, ಅದಕ್ಕೆ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾರೆ. ಈಗ ಎಲ್ಲವೂ ಚೆನ್ನಾಗಿ ಫ್ರೈ ಆಗಿದೆ ಅಂದಾಗ ಅದಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೊ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳುತ್ತಾರೆ. ಈ ಎಲ್ಲಾ ಮಿಶ್ರಣ ಚೆನ್ನಾಗಿ ಬೆಂದ ಬಳಿಕ ಅದಕ್ಕೆ ಒಂದು ಸ್ಪೂನ್ ಅಚ್ಚಖಾರದ ಪುಡಿ, ಸ್ವಲ್ಪ ಅರಶಿಣ, ಸ್ವಲ್ಪ ಗರಂ ಮಸಾಲೆ ಪುಡಿಯನ್ನು ಸೇರಿಸಿಕೊಂಡು, ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳುತ್ತಾರೆ. ನಂತರ ಈ ಮಿಶ್ರಣಕ್ಕೆ ಒಂದು ಗ್ಲಾಸ್ ನೀರನ್ನು ಸೇರಿಸಿ, ಗ್ರೇವಿ ಚೆನ್ನಾಗಿ ಕುದಿ ಬಂದ ನಂತರ ಅದಕ್ಕೆ ಲೇಸ್ ಚಿಪ್ಸ್ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ವಿಶಿಷ್ಟ ಬಗೆಯ ಲೇಸ್ ಕರಿ ರೆಸಿಪಿಯನ್ನು ತಯಾರಿಸುತ್ತಾರೆ.
ಇದನ್ನೂ ಓದಿ: ಅಯ್ಯೋ ಶ್ವಾನದ ಹೊಟ್ಟೆಯಿಂದ ಬೆಕ್ಕು ಹೇಗೆ ಬಂತು? ಇದರಲ್ಲಿ ಪುಟ್ಟ ವೈದ್ಯರ ಕೈವಾಡವಿದೆ
ಡಿಸೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 80 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಈ ರೆಸಿಪಿಯನ್ನು ನೋಡಿ, ಹಲವರು ಈ ರೀತಿಯಲ್ಲೂ ಲೇಸ್ ಚಿಪ್ಸ್ ಬಳಸಿಕೊಂಡು ಕರಿ ರೆಸಿಪಿ ಮಾಡಬಹುದು ಎಂಬ ವಿಷ್ಯ ನಮ್ಗೆ ಗೊತ್ತೇ ಇರ್ಲಿಲ್ವೇ ಅಂತ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Thu, 1 February 24