AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಯ್ಯೋ ಶ್ವಾನದ ಹೊಟ್ಟೆಯಿಂದ ಬೆಕ್ಕು ಹೇಗೆ ಬಂತು? ಇದರಲ್ಲಿ ಪುಟ್ಟ ವೈದ್ಯರ ಕೈವಾಡವಿದೆ

ಮುದ್ದು ಬೆಕ್ಕು, ಶ್ವಾನಗಳೆಂದರೆ ಪುಟಾಣಿಗಳಿಗೆ ಬಲು ಇಷ್ಟ. ಮನೆಯ ಮುದ್ದಿನ ನಾಯಿ ಬೆಕ್ಕುಗಳೊಂದಿಗೆ ಆಟ ಆಡುತ್ತಾ ಮಕ್ಕಳು ಖುಷಿಯಿಂದ ಕಾಲ ಕಳೆಯುತ್ತಾರೆ. ಈ ಸಾಕು ಪ್ರಾಣಿಗಳೂ ಅಷ್ಟೇ ಮಕ್ಕಳ ಜೊತೆ ಆಟವಾಡಿ ಖುಷಿಪಡುತ್ತವೆ. ಹೀಗೆ ಮನೆಯ ಸಾಕು ಪ್ರಾಣಿಗಳು ಮತ್ತು ಮಕ್ಕಳು ಅತ್ಯಂತ ಆತ್ಮೀಯವಾಗಿರುವ ಸಾಕಷ್ಟು ಹೃದಯಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರಬಹುದು. ಈಗ ಅಂತಹದ್ದೇ ತಮಾಷೆಯ ವಿಡಿಯೋವೊಂದು ವೈರಲ್ ಆಗಿದ್ದು, ಬಾಲಕಿಯೊಬ್ಬಳು ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಮಾಡಿಸುವಂತೆ ಮನೆಯ ನಾಯಿಗೆ ಆಪರೇಷನ್ ಮಾಡಿ, ನಾಯಿಯ ಹೊಟ್ಟೆಯಿಂದ ಬೆಕ್ಕನ್ನು ಹೊರ ತೆಗೆದಿದ್ದಾಳೆ. ಈ ಫನ್ನಿ ವಿಡಿಯೋವನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Viral Video: ಅಯ್ಯೋ ಶ್ವಾನದ ಹೊಟ್ಟೆಯಿಂದ ಬೆಕ್ಕು ಹೇಗೆ ಬಂತು? ಇದರಲ್ಲಿ ಪುಟ್ಟ ವೈದ್ಯರ ಕೈವಾಡವಿದೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Feb 01, 2024 | 4:00 PM

Share

ಪುಟ್ಟ ಮಕ್ಕಳು ಮನೆಯ ಸಾಕು ಪ್ರಾಣಿಗಳೊಂದಿಗೆ ಬಹು ಬೇಗನೇ ಹೊಂದಿಕೊಳ್ಳುತ್ತಾರೆ. ಮುದ್ದಿನ ಬೆಕ್ಕು ಶ್ವಾನಗಳೆಂದರೆ ಪುಟಾಣಿಗಳಿಗೆ ಬಲು ಇಷ್ಟ. ಸಾಕು ಪ್ರಾಣಿಗಳೂ ಅಷ್ಟೆ ಮನೆ ಮಕ್ಕಳ ಜೊತೆ ಆಟವಾಡಲು ಅವರೊಂದಿಗೆ ಸಮಯ ಕಳೆಯಲು ತುಂಬಾನೇ ಇಷ್ಟಪಡುತ್ತವೆ.  ಅದರಲ್ಲೂ ಈ ಮಕ್ಕಳು ತಮ್ಮ ಬಳಿ ಎಷ್ಟೇ ಆಟಿಕೆಗಳಿದ್ದರೂ ಮನೆಯಲ್ಲಿರುವ ನಾಯಿ ಬೆಕ್ಕುಗಳ ಜೊತೆಗೆ ಹೆಚ್ಚಾಗಿ ಆಟವಾಡಲು ಇಷ್ಟಪಡುತ್ತಾರೆ. ಹೀಗೆ ಮನೆಯ ಸಾಕು ಪ್ರಾಣಿಗಳು ಮತ್ತು ಮಕ್ಕಳು ಜೊತೆಯಾಗಿ ಆಟವಾಡುತ್ತಾ ಸಮಯ ಕಳೆಯುವಂತಹ ಹೃದಯಸ್ಪರ್ಶಿ ವಿಡಿಯೋಗಳನ್ನು ನೀವು ನೋಡಿರಬಹುದು. ಈಗ ಅಂತಹದ್ದೇ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾಲಕಿಯೊಬ್ಬಳು ಮನೆಯಲ್ಲಿ ಡಾಕ್ಟರ್ ಆಟವಾಡುತ್ತಾ, ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಮಾಡಿಸುವಂತೆ ಈಕೆ ಮನೆಯ ನಾಯಿಗೆ ಆಪರೇಷನ್ ಮಾಡಿ, ಅದರ ಹೊಟ್ಟೆಯಿಂದ ಬೆಕ್ಕನ್ನು ಹೊರ ತೆಗೆದಿದ್ದಾಳೆ. ಈ ಹಾಸ್ಯಮಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪುಟ್ಟ ಮಕ್ಕಳು ಹೆಚ್ಚಾಗಿ ತಮ್ಮ ಸ್ನೇಹಿತರೊಂದಿಗೆ ಸೇರಿ ಅಡುಗೆಯಾಟ, ಮನೆ ಆಟ ಇತ್ಯಾದಿ ಆಟಗಳನ್ನು ಆಡುತ್ತಿರುತ್ತಾರೆ. ಅದೇ ರೀತಿ ಈ ಪುಟ್ಟ ಬಾಲಕಿ ಮನೆಯ ಶ್ವಾನ ಮತ್ತು ಬೆಕ್ಕಿನೊಂದಿಗೆ ಡಾಕ್ಟರ್ ಆಟವನ್ನು ಆಡಿದ್ದಾಳೆ. ಇದ್ರಲ್ಲಿ ತಮಾಷೆಯ ವಿಷಯ ಏನಪ್ಪಾ ಅಂದ್ರೆ ವೃತ್ತಿಪರ ಡಾಕ್ಟರ್ ಗಳಂತೆಯೇ ಈ ಪುಟ್ಟ ಬಾಲಕಿ ನಾಯಿಗೆ ಆಪರೇಷನ್ ಮಾಡಿದ್ದಾಳೆ. ಈ ಫನ್ನಿ ವಿಡಿಯೋವನ್ನು @Cute_kidshd ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಪುಟ್ಟ ಹುಡುಗಿಯ ವೈರಲ್​​ ವಿಡಿಯೋ ಇಲ್ಲಿದೆ;

View this post on Instagram

A post shared by Kids Videos (@cute_kidshd)

ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕಿ ಮನೆಯಲ್ಲಿ ಡಾಕ್ಟರ್ ಆಟ ಆಡುತ್ತಿರುವುದನ್ನು ಕಾಣಬಹುದು.ಆಕೆ ತನ್ನ ಎರಡೂ ಕೈಗಳಿಗೂ ಗ್ಲೋವ್ಸ್, ವೈದ್ಯರು ಅಪರೇಷನ್ ಮಾಡುವಾಗ ತೊಡುವಂತಹ ಹಸಿರು ಬಟ್ಟೆಯನ್ನು ತೊಟ್ಟು ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ, ಮನೆಯ ಮುದ್ದಿನ ಶ್ವಾನಕ್ಕೆ ಆಪರೇಷನ್ ಮಾಡುತ್ತಾಳೆ. ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಶ್ವಾನದ ಹೊಟ್ಟೆಯಿಂದ ಬೆಕ್ಕನ್ನು ಹೊರತೆಗೆದು, ಬೆಕ್ಕಿನ ತೂಕವನ್ನು ನೋಡಿ, ನಂತರ ಬೆಕ್ಕನ್ನು ಆಕೆಯ ತಂದೆಯ ಕೈಗೆ ಹಸ್ತಾಂತರಿಸುತ್ತಾಳೆ. ಅಬ್ಬಬ್ಬಾ ಈ ಪುಟ್ಟ ಬಾಲಕಿಯ ಆಪರೇಷನ್ ಶೈಲಿಯನ್ನು ಕಂಡು ಖಂಡಿತವಾಗಿ ಈಕೆ ಮುಂದೊಂದು ದಿನ ಸರ್ಜನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ: ದೈತ್ಯ ಹೆಬ್ಬಾವಿನ ಮೇಲೆ ಸಮರ ಸಾರಿದ ಮುಂಗುಸಿ ಸೈನ್ಯ, ಇಲ್ಲಿದೆ ಭೀಕರ ಕಾಳಗದ ದೃಶ್ಯ

ಜನವರಿ 03 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 42 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ.  ಒಬ್ಬ ಬಳಕೆದಾರರು ʼಆ ಶ್ವಾನದ ತಾಳ್ಮೆಗೆ ಪ್ರಶಸ್ತಿ ಕೊಡಬೇಕುʼ ಅಂತ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾಯಿ ಬೆಕ್ಕಿಗೆ ಜನ್ಮ ನೀಡುವ ಫನ್ನಿ ದೃಶ್ಯ ನೋಡಲು ತುಂಬಾ ಆಸಕ್ತಿದಾಯಕವಾಗಿದೆʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಖಂಡಿತ ಆಕೆ ಡಾಕ್ಟರ್ ಆಗುತ್ತಾಳೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಈ ದೃಶ್ಯವನ್ನು ಕಂಡು ನಕ್ಕು ನಕ್ಕು ಸುಸ್ತಾಯ್ತು ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Thu, 1 February 24

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ