Viral Video: ದೈತ್ಯ ಹೆಬ್ಬಾವಿನ ಮೇಲೆ ಸಮರ ಸಾರಿದ ಮುಂಗುಸಿ ಸೈನ್ಯ, ಇಲ್ಲಿದೆ ಭೀಕರ ಕಾಳಗದ ದೃಶ್ಯ
ಹಾವು ಮತ್ತು ಮುಂಗುಸಿ ನಡುವಿನ ವೈರತ್ವ ಎಲ್ಲರಿಗೂ ತಿಳಿದದ್ದೇ. ಹಾವು ಮತ್ತು ಮುಂಗಿಸಿಗಳ ನಡುವಿನ ಕಾಳಗದ ಸಾಕಷ್ಟು ಸ್ಟೋರಿಗಳನ್ನು ನೀವು ನೋಡಿರುತ್ತೀರಿ ಅಲ್ವಾ. ಹಾಗೇನೇ ಹಾವು ಮುಂಗುಸಿಯ ಹೊಡೆದಾಟಕ್ಕೆ ಸಂಬಂಧಿಸಿದ ಕೆಲವೊಂದು ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಅಂತರ್ಜಾಲದಲ್ಲಿ ಹರಿದಾಡುತ್ತಿರುತ್ತವೆ. ಈಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಮುಂಗುಸಿ ಸೈನ್ಯವೇ ದೈತ್ಯ ಹೆಬ್ಬಾವಿನ ಮೇಲೆ ಭೀಕರ ದಾಳಿ ನಡೆಸಿವೆ. ಈ ಘೋರ ಕಾಳಗದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಾವು ಮತ್ತು ಮುಂಗುಸಿಗಳು ಆ ಜನ್ಮ ಶತ್ರುಗಳೆಂದೇ ಹೆಸರುವಾಗಿಯಾಗಿವೆ. ಇವುಗಳು ಪರಸ್ಪರ ಕಾದಾಡುವುದರಲ್ಲಿ ಸಖತ್ ಫೇಮಸ್. ಇದೇ ಕಾರಣಕ್ಕೆ ಯಾರಾದರೂ ಪರಸ್ಪರ ಕಿತ್ತಾಡುತ್ತಿದ್ದರೆ ಹಾವು-ಮುಂಗುಸಿ ರೀತಿಯಲ್ಲಿ ಯಾಕೆ ಜಗಳವಾಡುತ್ತೀರಿ ಅಂತ ಹೇಳ್ತಾರೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕೂಡಾ ಈ ಮುಂಗುಸಿಗಳು ಹಾವುಗಳನ್ನು ಸದೆಬಡಿಯುವುದರಲ್ಲಿ ಎತ್ತಿದ್ದ ಕೈ. ಇಂತಹ ಹಾವು ಮುಂಗುಸಿಗಳ ಕಾದಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಸಾಮಾನ್ಯವಾಗಿ ಈ ಮುಂಗುಸಿಗಳು ನಾಗರ ಹಾವು ಮತ್ತ ಇತರೆ ಸಣ್ಣಪುಟ್ಟ ಹಾವುಗಳೊಂದಿಗೆ ಕಾದಾಟಕ್ಕೆ ಇಳಿಯುತ್ತವೆ. ಆದರೆ ಇಲ್ಲೊಂದು ಮುಂಗುಸಿ ಸೈನ್ಯ ಮಾತ್ರ ದೈತ್ಯ ಹೆಬ್ಬಾವಿನ ಮೇಲೆ ಭೀಕರ ದಾಳಿ ನಡೆಸಿವೆ. ಮುಂಗುಸಿ ಸೈನ್ಯದ ಈ ಭಯಾನಕ ದಾಳಿಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದೈತ್ಯ ಹೆಬ್ಬಾವಿನ ಮೇಲೆ ಮುಂಗುಸಿ ಸೈನ್ಯವೇ ಮಾರಣಾಂತಿಕ ದಾಳಿಯನ್ನು ನಡೆಸುತ್ತಿರುವ ಭಯಾನಕ ದೃಶ್ಯವನ್ನು ಕಾಣಬಹುದು. ಸಾಮಾನ್ಯವಾಗಿ ಮನುಷ್ಯರು ಮಾತ್ರವಲ್ಲದೆ ಇತರೆ ಪ್ರಾಣಿಗಳು ಕೂಡಾ ದೈತ್ಯ ಹೆಬ್ಬಾವಿನ ತಂಟೆಗೆ ಹೋಗೊಲ್ಲ, ಆದರೆ ಈ ಮುಂಗುಸಿಗಳು ಒಗ್ಗಟ್ಟಾಗಿ ದೈತ್ಯ ಹೆಬ್ಬಾವಿನ ಮೇಲೆ ದಾಳಿ ನಡೆಸಿವೆ. ಈ ಭೀಕರ ಕಾಳಗದ ವೈರಲ್ ವಿಡಿಯೋವನ್ನು @bigcatsnamibia ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
View this post on Instagram
ವೈರಲ್ ವಿಡಿಯೋದಲ್ಲಿ ಹತ್ತರಿಂದ ಹನ್ನೆರಡು ಮುಂಗುಸಿಗಳು ಜೊತೆಯಾಗಿ ಸೇರಿ ದೈತ್ಯ ಹೆಬ್ಬಾವಿನ ಮೇಲೆ ದಾಳಿ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ಒಂದಷ್ಟು ಮುಂಗುಸಿಗಳು ಹೆಬ್ಬಾವಿನ ಬಾಲವನ್ನು ಕಚ್ಚಿ ಎಳೆದರೆ, ಇನ್ನೂ ಕೆಲವು ಮುಂಗುಸಿಗಳು ಹೆಬ್ಬಾವಿನ ತಲೆಯ ಭಾಗವನ್ನು ಕಚ್ಚಿ ಎಳೆಯುತ್ತವೆ. ಹೆಬ್ಬಾವು ಎಷ್ಟೇ ಪ್ರಯತ್ನಪಟ್ಟರೂ ಈ ಭೀಕರ ದಾಳಿಯಿಂದ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಅಬ್ಬಬ್ಬಾ…ಇದ್ಯಾವುದಪ್ಪಾ ಹೊಸ ಕೀಬೋರ್ಡ್, ನಿಜಕ್ಕೂ ಇದು ಅಚ್ಚರಿ
ಜನವರಿ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 67 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಮುಂಗುಸಿಗಳ ಅದ್ಭುತ ಟೀಮ್ ವರ್ಕ್ʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಹಾವುಗಳನ್ನು ದ್ವೇಷಿಸುವವಳು ಆದರೆ ಈ ಹಾವಿನ ಸ್ಥಿತಿಯನ್ನು ಕಂಡು ಮರುಕ ಉಂಟಾಯಿತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದ್ಭುತ ಬೇಟೆಗಾರರುʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯ ತುಂಬಾನೇ ಭಯಾನಕವಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ